Swipe to read next story
NewsPoint

ಬ್ಯಾಂಕ್ ಗ್ರಾಹಕರಿಗೆ ಮತ್ತೆ ಈ ಸೂಚನೆ ನೀಡಿದೆ ಆರ್.ಬಿ.ಐ.

Send Push
Kannada Dunia Kannada
22nd April, 2018 09:02 IST

ಮುಂಬೈ: ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಸೂಚನೆ ನೀಡಿದೆ.

ನಿಮ್ಮ ಗ್ರಾಹಕರನ್ನು ತಿಳಿಯಿರಿ ನಿಯಮದ ಪ್ರಕಾರ, ಎಲ್ಲಾ ಬ್ಯಾಂಕ್ ಖಾತೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕಿದೆ. ಆಧಾರ್ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿರುವಾಗಲೇ ರಿಸರ್ವ್ ಬ್ಯಾಂಕ್ ಈ ಆದೇಶವನ್ನು ಹೊರಡಿಸಿದೆ. ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರಂದು ಗಡುವು ನೀಡಲಾಗಿದ್ದು, ಇದನ್ನು ಸಂವಿಧಾನಾತ್ಮಕ ಪೀಠದ ತೀರ್ಪು ಬರುವವರೆಗೂ ಸುಪ್ರೀಂ ಕೋರ್ಟ್ ವಿಸ್ತರಿಸಿದೆ.

ಕಲ್ಯಾಣ ಯೋಜನೆಗಳಿಗೆ ಆಧಾರ್ ಜೋಡಿಸುವ ಕೊನೆ ದಿನಾಂಕವನ್ನು ಸರ್ಕಾರ ಇದಕ್ಕಿಂತ ಮೊದಲು ವಿಸ್ತರಿಸಿದೆ. ಮೊದಲಿಗೆ ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರ ಗಡುವು ನೀಡಲಾಗಿತ್ತು. ಕಲ್ಯಾಣ ಯೋಜನೆಗಳಿಗೆ ಜೂನ್ 30 ರೊಳಗೆ ಆಧಾರ್ ಲಿಂಕ್ ಮಾಡಬೇಕಿದೆ.

To get the latest scoop and updates on NewsPoint
Download the app