Swipe to read next story
NewsPoint

ಶೋಷಣೆ ಬಗ್ಗೆ ಈ ಬಾಲಿವುಡ್ ಜೋಡಿ ಹೇಳಿದ್ದೇನು?

Send Push
Balkani News Kannada
06th October, 2018 21:00 IST

ಮುಂಬೈ,ಅ.06: ಬಾಲಿವುಡ್ ನಲ್ಲಿ  ಈಗ ಸಂಚಲನ ಸೃಷ್ಟಿಯಾಗಿದೆ. ತನುಶ್ರೀ ತನಗೆ ನಾನಾಪಾಟೇಕರ್ ಅವರು ಶೋಷಣೆ ಹಾಗೂ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದೇ ತಡ.. ಬಾಲಿವುಡ್ ನಿಂದ ಅನೇಕ ಟೀಕೆ ಹಾಗೂ ಪ್ರತಿಕ್ರಿಯೆ ಕೇಳಿ ಬಂದಿದ್ದವು. ಕೆಲವರು ತನು ಪರ ಬ್ಯಾಟಿಂಗ್ ಮಾಡಿದರೆ ಇನ್ನು ಕೆಲವರು ನಾನಾಪಾಟೇಕರ್ ಪರ ಮಾತನಾಡಿದ್ದಾರೆ. ಈಗ ನಟಿ ದೀಪಿಕಾ ಪಡುಕೋಣೆ ಶೋಷಣೆ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಿದ್ದಾರೆ. ಮೀ ಟೂ ಅಭಿಯಾನ ಮಹಿಳೆ, ಪುರುಷರ ಮಧ್ಯೆಯ ಯುದ್ಧವಲ್ಲವೆಂದು ದೀಪಿಕಾ ಹೇಳಿದ್ದಾರೆ. ಮಾಧ್ಯಮಗಳಿಗೆ ನಟಿ ದೀಪಿಕಾ ಹಾಗೂ ನಟ ರಣವೀರ್ ಸಿಂಗ್, ಮೀ ಟೂ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ..

Related image

ಡಿಪ್ಪಿ-ರಣವೀರ್ ಮಾತು

ಇದು ಮಹಿಳೆ ಅಥವಾ ಪುರುಷರ ಮಧ್ಯದ ಯುದ್ಧವಂತೂ ಅಲ್ಲವೇ ಅಲ್ಲ.. ಸರಿ, ತಪ್ಪುಗಳ ಸಂಗತಿ. ಕಿರುಕುಳ, ಹಾಗೂ ಶೋಷಣೆಗೆ ಒಳಗಾದವರಿಗೆ ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ಡಿಪ್ಪಿಯ ಹೇಳಿಕೆ. ಇದೇ ವೇಳೆ ರಣವೀರ್ ಸಿಂಗ್ ಕೂಡ ಶೋಷಣೆ ವಿರುದ್ಧ ಮಾತನಾಡಿದ್ದಾರೆ. ತನುಶ್ರೀ ದತ್ತಾ ಮೇಲೆ ನಡೆದ ಕಿರುಕುಳವನ್ನು ತಾನೂ ಕೂಡ ಖಂಡಿಸುವುದಾಗಿ ತಿಳಿಸಿದ್ದಾರೆ.

 

The post ಶೋಷಣೆ ಬಗ್ಗೆ ಈ ಬಾಲಿವುಡ್ ಜೋಡಿ ಹೇಳಿದ್ದೇನು? appeared first on Balkani News.

To get the latest scoop and updates on NewsPoint
Download the app