Hero Image

ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್

ಮುಂಬಯಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಕುಸಿತ ಕಾಣುತ್ತಿದ್ದ ಬಾಂಬೆ ಷೇರು ಪೇಟೆ ಸೂಚ್ಯಂಕ ಶುಕ್ರವಾರ 599 ಅಂಕ ಏರಿಕೆ ಕಂಡಿದೆ. ಹೀಗಾಗಿ 4 ದಿನಗಳಿಂದ ನಷ್ಟಕ್ಕೆ ಒಳಗಾಗುತ್ತಿದ್ದ ಹೂಡಿಕೆದಾರರು ವಾರಾಂತ್ಯದಲ್ಲಿ ಸಂತೋಷಗೊಂಡಿದ್ದಾರೆ. ದಿನಾಂತ್ಯಕ್ಕೆ ಸಂವೇದಿ ಸೂಚ್ಯಂಕ 599 ಅಂಕಗಳು ಏರಿಕೆಯಾಗಿ 73088ರಲ್ಲಿ ಮುಕ್ತಾಯಗೊಂಡಿತು.

ದಿನದ ಆರಂಭದಲ್ಲಿ ಕುಸಿತದಿಂದಲೇ ವಹಿವಾಟು ಶುರುವಾದರೂ ಅನಂತರ ಚೇತರಿಕೆ ಕಂಡಿತು.

ಇನ್ನು ನಿಫ್ಟಿ ಸೂಚ್ಯಂಕ 151 ಅಂಕ ಏರಿಕೆಯಾಗಿ 21777ರಲ್ಲಿ ಮುಕ್ತಾಯಗೊಂಡಿದೆ.
4 ಪೈಸೆ ಏರಿಕೆ: ಇದೇ ವೇಳೆ, ಅಮೆರಿಕದ ಡಾಲರ್ ಎದುರು ಶುಕ್ರವಾರ 4 ಪೈಸೆ ಏರಿಕೆಯಾಗಿ, ವಹಿವಾಟು ಮುಕ್ತಾಯದ ಅವಧಿಯಲ್ಲಿ 83.48 ರೂ.ಗೆ ಮುಕ್ತಾಯಗೊಂಡಿತು.

READ ON APP