Hero Image

UV Fusion: ಅವಳು

ಸಮಾಜದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹೆಣ್ಣು ಸಮಾಜದ ಕಣ್ಣು. ಮಮತೆಗೆ ತಾಯಿಯಾಗಿ, ಅಕ್ಕರೆಗೆ ಅಕ್ಕನಾಗಿ, ಪ್ರೀತಿಗೆ ಮಡದಿಯಾಗಿ, ಗೆಳತಿಯಾಗಿ ಹೀಗೆ ಬದುಕಿನುದ್ದಕ್ಕೂ ಒಂದೆಲ್ಲಾ ಒಂದು ಪಾತ್ರದಲ್ಲಿ ಇದ್ದೇ ಇರುತ್ತಾಳೆ. ಹೆಣ್ಣು ಆಟದ ವಸ್ತು ಅಲ್ಲ ಅವಳಿಗೂ ಭಾವನೆಗಳಿವೆ ಆಸೆಗಳಿವೆ ಸಂಸಾರವೆಂಬ ಸಾಗರದಲ್ಲಿ ಅವಳು ತನ್ನ ಅಂತರಂಗದ ಭಾವನೆಗಳೆಲ್ಲವನ್ನೂ ಕೊಲ್ಲುತ್ತಿದ್ದಾಳೆ.

ಆದರೆ ಆ ಹೆಣ್ಣಿನ ಮನಸ್ಸನ್ನು ಅರಿತವರ್ಯಾರು? ಅವಳ ಅಂತರಂಗವನ್ನು ಅರಿಯದೆ ಅವಳ ಬಹಿರಂಗ ಸೌಂದರ್ಯವನ್ನು ವರ್ಣಿಸುವ ಸಮಾಜದ ಮನಸ್ಥಿತಿ ಬದಲಾಗಬೇಕಿದೆ. ಒಂದು ಹೆಣ್ಣಿನ ಮೇಲೆ ಗಂಡಿಗಿರುವ ಮನಸ್ಥಿತಿ ಬದಲಾಗದ ಹೊರತು ನಮ್ಮ ಸಮಾಜದ ಪರಿಸ್ಥಿತಿ ಬದಲಾಗದು.

ಹುಡುಗರು ವಯಸ್ಸಿಗೆ ಬರುತ್ತಿದ್ದಂತೆ ಕೆಲವೊಂದು ಕಟ್ಟುಪಾಡುಗಳನ್ನು ಹೇರುತ್ತಾರೆ. ಹೆಚ್ಚಾಗಿ ಹೆಂಗಸರೊಂದಿಗೆ ಮಾತನಾಡಬಾರದು, ಅಮ್ಮನ್ನೊಂದಿಗೆ ಮಲಗಬಾರದು, ಪ್ರತ್ಯೇಕವಾಗಿ ಇರಬೇಕು ಹೀಗೆ ಹತ್ತಾರು ನಿಯಮಗಳು. ಆದರೆ, ವಾಸ್ತವದಲ್ಲಿ ಬೆಳವಣಿಗೆ ಆಗಿರುವುದು ದೈಹಿಕ ಸ್ಥಿತಿಯಲ್ಲಿ ಹೊರತು ಬೌದ್ಧಿಕ ಸ್ಥಿತಿಯಲ್ಲ. ಈ ರೀತಿ ನಿಯಮ ಹೇರಿಬಿಟ್ಟಿರೆ ಹೇಗೆ ?

ಮಗಳ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ತಂದೆ ಅರ್ಥ ಮಾಡಿಕೊಳ್ಳಬೇಕು, ತಾಯಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಗ ಅರ್ಥ ಮಾಡಿಕೊಳ್ಳಬೇಕು, ಹೆಂಡತಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗಂಡ ಅರ್ಥ ಮಾಡಿಕೊಳ್ಳಬೇಕು, ಸೊಸೆ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಾವ ಅರ್ಥ ಮಾಡಿಕೊಳ್ಳಬೇಕು, ಹೆಣ್ಣಿನ ಜೀವನದ ಪ್ರತಿ ಹಂತದ ಭಾವನೆಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪುರುಷನ ಬದುಕಿಗೆ ಒಂದು ಅರ್ಥ.

ಮೊದಲಿನಿಂದಲೂ ವಿಭಿನ್ನ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದೆ ನಮ್ಮ ಕಾಲೇಜು. ನಮ್ಮಲ್ಲಿ ಯಾವ್ರದೇ ಕಾರ್ಯಕ್ರಮ ಕೇವಲ ಆಡಂಭರದ, ಹೊಗಳಿಕೆಯ, ನೆಪ ಮಾತ್ರದ ಆಚರಣೆಯಾಗದೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಮುಟ್ಟಬೇಕು ಎನ್ನುವ ದಿಟ್ಟ ಮತ್ತು ಸ್ವಷ್ಟ ನಿಲುವು ನಮ್ಮದು.

ಮಹಿಳಾ ದಿನಾಚರಣೆ ಕಾರ್ಯಕ್ರಮ ಎಂದರೆ ಕೇವಲ ಮಾತಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿಯೂ ಒಂದು ಭಿನ್ನತೆ ಇದೆ. ಒಂದಿಷ್ಟು ಸ್ಪರ್ಧೆಗಳ ಮೂಲಕ ಮಹಿಳಾ ದಿನಾಚರಣೆ ವಿಶೇಷವಾಗಿ ಇತ್ತು. ಮಹಿಳಾ ದಿನಾಚರಣೆ ಅಂಗವಾಗಿ ಅವಳು ಎನ್ನುವ ವಿಷಯದ ಭಾಷಣ ಸ್ಪರ್ಧೆಯನ್ನು ಕೇವಲ ಗಂಡು ಮಕ್ಕಳಿಗೆ ಮಾತ್ರ ಏರ್ಪಡಿಸಲಾಗಿತ್ತು. ಕಾರಣವೇನೆಂದರೆ ಸಮಾಜದಲ್ಲಿ ಹೆಣ್ಣಿನ ಸಮಸ್ಯೆ ಹೆಣ್ಣಿಗೆ ಅರಿವಿದೆ. ಆದರೆ ಗಂಡಿಗೂ ಹೆಣ್ಣಿನ ಮನಸ್ಥಿತಿ ಅರಿಯಬೇಕು ಎನ್ನುವ ಉದ್ದೇಶವಿತ್ತು. ಇನ್ನು ಅವಳು ವಿಷಯದ ಕುರಿತು ರಂಗೋಲಿ ಸ್ಪರ್ಧೆಯು ಬಹಳ ಉತ್ತಮವಾಗಿ ಮೂಡಿ ಬಂದಿದೆ. ಅವಳು ಬಿಂದುವಿನ ಮೂಲಕ ಬಣ್ಣ ಬಣ್ಣಗಳ ಚಿತ್ರಗಳ ರಂಗೋಲಿ ಅಲ್ಲಿ ಮೂಡಿ ಬಂದಿದ್ದಾಳೆ. ಇನ್ನೊಂದು ವಿಶೇಷ ಸ್ಪರ್ಧೆ ನೀ ನಾಯಕಿ ಎನ್ನುವ ಕುರಿತು ವಿಡಿಯೋ ಮೇಕಿಂಗ್ ಸ್ಪರ್ಧೆ.

ಸುಮಾರು 20 ತಂಡಗಳು ಭಾಗವಹಿಸಿದ್ದವು. ದೃಶ್ಯಗಳಲ್ಲಿ ಸೆರೆಹಿಡಿದ ತುಣುಕು ನೀ ನಾಯಕಿ ಎನ್ನುವ ಸಂದೇಶವನ್ನು ಚಿತ್ರದಲ್ಲಿ ಮಾತ್ರವಲ್ಲದೇ ಬದುಕಿನಲ್ಲಿ ವ್ಯಕ್ತವಾಗಿದೆ ಎನ್ನುವುದು ನನ್ನ ಭಾವನೆ. ಅಲ್ಲದೇ ಕಾಲೇಜಿನಲ್ಲಿ ಕ್ರೀಡೆ, ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು.

ಕಾಲೇಜೊಂದರಲ್ಲಿ ಮಹಿಳಾ ದಿನಾಚರಣೆಯನ್ನು ಹೀಗೂ ಆಚರಿಸಬಹುದು ಎಂದು ಸಾಬೀತುಪಡಿಸಿದೆ ನಮ್ಮ ಕಾಲೇಜು. ಇಡೀ ಕಾರ್ಯಕ್ರಮದ ಉದ್ದೇಶ ಇಷ್ಟೇ, ಹೆಣ್ಣಿನ ಜೀವನದ ಭಾವನೆಗಳನ್ನು ಪುರುಷ ಅರ್ಥ ಮಾಡಿಕೊಳ್ಳಬೇಕೆಂದು.

- ಸುಜಯ್ ಶೆಟ್ಟಿ

ಡಾ| ಬಿ.ಬಿ. ಹೆಗ್ಡೆ ಫಸ್ಟ್ ಗ್ರೇಡ್ ಕಾಲೇಜು

READ ON APP