Hero Image

'ಲೀಪ್, ಲಾಫ್ & ಲರ್ನ್' ಸ್ಟಾಂಡ್ ಅಪ್ ಸ್ಪೆಷಲ್ನಲ್ಲಿ ಜಾನ್ವಿ ಕಪೂರ್ HPV ಬಗ್ಗೆ ಜಾಗೃತಿ

ಮುಂಬೈ: ಮಾರ್ಚ್ 4 ರಂದು ಅಂತಾರಾಷ್ಟ್ರೀಯ ಎಚ್ಪಿವಿ(ಹ್ಯೂಮನ್ ಪ್ಯಾಪಿಲೋಮವೈರಸ್) ಜಾಗೃತಿ ದಿನ ಆಚರಣೆಯಲ್ಲಿ ಬಾಲಿವುಡ್ ನ ಜನಪ್ರಿಯ ನಟಿ ಜಾನ್ವಿ ಕಪೂರ್ ಎಚ್ಪಿವಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, ಇದಕ್ಕಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಹಭಾಗಿತ್ವದ ಮತ್ತು ಇದರ ಚಿಂತನಶೀಲ ಕಾರ್ಯಕ್ರಮ ಐಪ್ಲೆಡ್ಜ್ಟು ಪ್ರಿವೆಂಟ್ ನಡೆಯಿತು.

ಅಂತಾರಾಷ್ಟ್ರೀಯ ಎಚ್ಪಿವಿ ಜಾಗೃತಿ ದಿನ 2024 ರ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬವಾಲ್ ಅನ್ನು ಜಾನ್ವಿ ರಚಿಸಿದ್ದಾರೆ ಮತ್ತು ಈ ರೋಗದ ಬಗ್ಗೆ ಜನ ಜಾಗೃತಿ ಮೂಡಿಸಲು ಅತ್ಯಂತ ವಿಶಿಷ್ಟವಾದ ಕಾರ್ಯವಿಧಾನವನ್ನು ಅವರು ಬಳಸಿಕೊಂಡಿದ್ದರು. ಈ ವರ್ಷದ ಒಂದು ಹೆಚ್ಚುವರಿ ದಿನವಾದ ಲೀಪ್ ಡೇ ಅನ್ನು ಬಳಸಿಕೊಂಡಿರುವ ಜಾನ್ವಿ ಕಪೂರ್, ನಗುವಿನ ಮೂಲಕ ಎಚ್ಪಿವಿ ಕಾರಣಗಳು ಮತ್ತು ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇದಕ್ಕಾಗಿ ಅವರು ಲೀಪ್, ಲಾಫ್ ಮತ್ತು ಲರ್ನ್ ಎಂಬ ಸ್ಟಾಂಡಪ್ ಅನ್ನು ನಡೆಸಿಕೊಟ್ಟರು.

ಜಾನ್ವಿ ಕಪೂರ್ ಅವರ ಮೊಟ್ಟ ಮೊದಲ ಸ್ಟಾಂಡ್ ಅಪ್ ಸ್ಪೆಷಲ್ ಬಗ್ಗೆ ಆಸಕ್ತಿಕರ ಟೀಸರ್ಗಳು ಲೀಪ್, ಲಾಫ್ & ಲರ್ನ್ ಬಗ್ಗೆ ಜನರಲ್ಲಿ ಭಾರಿ ಕುತೂಹಲವನ್ನು ಕೆರಳಿಸಿತ್ತು. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿರುವಾಗ ನಟಿ ಅತ್ಯಂತ ಸಹಜ ಅಭಿನಯವನ್ನು ಪ್ರದರ್ಶಿಸಿದರು. ಜಾಗೃತಿ ಮೂಡಿಸುವುದರ ಜೊತೆಗೆ ನಗುವನ್ನೂ ಹೊಮ್ಮಿಸಿದರು. ಇದು ಜಾನ್ವಿ ಒಬ್ಬ ಕಾಮಿಡಿಯನ್ ಆಗುವ ಅರ್ಹತೆಯನ್ನು ಹೊಂದಿದ್ದಾರೆ ಎಂಬ ಭಾವವನ್ನು ಉಂಟು ಮಾಡಿತು. ಅಷ್ಟೇ ಅಲ್ಲ, ಎಚ್ಪಿವಿ ಬಗ್ಗೆ ಇರುವ ತಿಳಿವಳಿಕೆ ಕೊರತೆಯನ್ನೂ ಇದು ನಿವಾರಣೆ ಮಾಡಿತು.

ಆಕೆಯ ಸ್ಟಾಂಡಪ್ ಸ್ಪೆಷಲ್ ಸಮಯದಲ್ಲಿ ಜಾನ್ವಿ ಎಚ್ಪಿವಿ ತಡೆಯ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಪ್ರೇಕ್ಷಕರಲ್ಲಿ ವಿನಂತಿಸಿಕೊಂಡರು. ಎಚ್ಪಿವಿ ಮತ್ತು ಕ್ಯಾನ್ಸರ್ನ ಬಗ್ಗೆ ತಿಳಿವಳಿಕೆ ಮೂಡಿಸಿದರು. ಗರ್ಭಕಂಠ, ಯೋನಿ, ಗುದ ಮತ್ತು ಬಾಯಿಯ ಕ್ಯಾನ್ಸರ್ಗಳು ಎಚ್ಪಿವಿ ಕಾರಣದಿಂದ ನಿಮ್ಮ ದೇಹದಲ್ಲಿ ಉಂಟಾಗುತ್ತವೆ ಎಂದು ಜಾನ್ವಿ ಹೇಳಿದರು. ಅಷ್ಟೇ ಅಲ್ಲ, “ಎಚ್ಪಿವಿ ಮಹಿಳೆಯರಿಗೆ ಮಾತ್ರ ಬರುತ್ತದೆ” ಎಂಬ ಮಿಥ್ಯವನ್ನೂ ಅವರು ತೊಡೆದುಹಾಕಿದರು.

ಎಚ್ಪಿವಿ ಸೋಂಕದಂತೆ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಉತ್ತರ ಸರಳ. ಮೊದಲು ನೀವು ನಿಮ್ಮ ವೈದ್ಯರ ಜೊತೆಗೆ ಮಾತನಾಡಬೇಕು ಎಂದು ಅವರು ಹೇಳಿದರು. ಅಷ್ಟೇ ಅಲ್ಲ, 9 ರಿಂದ 26 ವರ್ಷದವರು ಎಚ್ಪಿವಿ ಲಸಿಕೆಯನ್ನು ತೆಗೆದುಕೊಳ್ಳುವುದರ ಪ್ರಾಮುಖ್ಯತೆಯನ್ನೂ ಅವರು ಒತ್ತಿ ಹೇಳಿದರು. ಸ್ಟಾಂಡ್ ಅಪ್ ಸ್ಪೆಷಲ್ ಅನ್ನು ಮುಗಿಸುವ ಸಮಯದಲ್ಲಿ, ಎಚ್ಪಿವಿ ತಡೆಯಲು ಪ್ರಮಾಣ ಮಾಡಿ ಎಂದು ಪ್ರೇಕ್ಷಕರನ್ನು ಹುರಿದುಂಬಿಸಿದರು.

ಲೀಪ್, ಲಾಫ್ ಮತ್ತು ಲರ್ನ್ ಮೂಲಕ ಬದಲಾವಣೆಯನ್ನು ತರುವ ಬಗ್ಗೆ ತನ್ನ ಚಿಂತನೆಗಳನ್ನು ಹರಿಬಿಟ್ಟಿರುವ ಜಾನ್ವಿ ಕಪೂರ್ ಅವರು “ನಟಿಯಾಗಿ, ಐ ಪ್ಲೆಡ್ಜ್ ಟು ಪ್ರಿವೆಂಟ್ ಇತ್ಯಾದಿ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಅತ್ಯಂತ ಮುಖ್ಯ ಎಂದು ನನಗೆ ಅನಿಸಿತು. ಎಚ್ಪಿವಿ ಇಂದ ತುಂಬಾ ಗಂಭೀರ ಆರೋಗ್ಯ ಸಮಸ್ಯೆಯಾಗುತ್ತದೆ. ಇದರಿಂದ ಹಲವು ಅಪಾಯಗಳು ಉಂಟಾಗುತ್ತವೆ. ಎಚ್ಪಿವಿ ಸಂಬಂಧಿತ ಅಪಾಯಗಳ ಬಗ್ಗೆ ಜಾಗೃತಿಯ ಕೊರತೆಯಿದೆ. ಇದನ್ನು ಬದಲಿಸಲು, ನನ್ನ ಸ್ಟಾಂಡ್ ಕಾಮಿಡಿ ಸ್ಪೆಷಲ್ ಮೂಲಕ ನಾವು ಎಚ್ಪಿವಿ ಬಗ್ಗೆಜಾಗೃತಿ ಮೂಡಿಸಲು ಮುಂದಾದೆವು. ಲೀಪ್, ಲಾಫ್ ಮತ್ತು ಲರ್ನ್ ಮೂಲಕ ಎಚ್ಪಿವಿ ಬಗ್ಗೆ ತಿಳಿವಳಿಕೆ ಪಡೆಯುವ ಮೂಲಕ ವರ್ಷದ ಈ ಲೀಪ್ ಡೇಯಲ್ಲಿ ಒಂದು ದಿನವನ್ನು ಕಳೆಯಿರಿ ಎಂಬ ಸಂದೇಶವನ್ನು ನಾವು ಮೂಡಿಸಿದೆವು. ನನ್ನ ಅಭಿಮಾನಿಗಳ ಬೆಂಬಲದಿಂದ, ಇದನ್ನು ತಡೆಯಲು ನಾನು ಪ್ರಮಾಣ ಮಾಡುತ್ತೇನೆ.

ಏಕೆಂದರೆ, ಎಚ್ಪಿವಿ ತಡೆಯುವಲ್ಲಿ ಜ್ಞಾನವೇ ನಮ್ಮ ಉತ್ತಮ ರಕ್ಷಣೆಯಾಗಿದೆ. ಅವರು ಕೂಡಾ ನನ್ನ ಜೊತೆಗೆ ಎಚ್ಪಿವಿ ಜಾಗೃತಿಯನ್ನು ಪಡೆಯುತ್ತಾರೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ.” ಐ ಪ್ಲೆಡ್ಜ್ ಟು ಪ್ರಿವೆಂಟ್ನ ಅಧಿಕೃತ ವೆಬ್ಸೈಟ್ನಲ್ಲಿ (www.ipledgetoprevent.in) ನೀವು ಕೂಡಾ ಜಾನ್ವಿ ಕಪೂರ್ ಅವರ ಜೊತೆಗೆ ಪ್ರಮಾಣ ಮಾಡಬಹುದು. ಈ ಕಾರ್ಯಕ್ರಮವು ಎಚ್ಪಿವಿ ಉಂಟುಮಾಡುವ ಅಪಾಯವನ್ನು ಒತ್ತಿಹೇಳುತ್ತದೆ ಮತ್ತು ಮೊದಲೇ ಲಸಿಕೆ ತೆಗೆದುಕೊಳ್ಳುವುದರ ಪ್ರಾಮುಖ್ಯತೆಯ ತಿಳಿವಳಿಕೆ ನೀಡುತ್ತದೆ. ಎಚ್ಪಿವಿ ಅನ್ನು ತಡೆಯುವಲ್ಲಿ ಮತ್ತು ರೋಗದ ಬಗ್ಗೆ ಮಾತುಕತೆ ನಡೆಸುವುದು ಮತ್ತು ಮಿಥ್ಯಗಳನ್ನು ನಿವಾರಣೆ ಮಾಡುವುದಕ್ಕೂ ಕೂಡಾ ಇದು ಪ್ರೋತ್ಸಾಹ ನೀಡುತ್ತದೆ. ಎಚ್ಪಿವಿ ಜಾಗೃತರಾಗಲು ಮರೆಯಬೇಡಿ ಮತ್ತು ಇಂದೇ ಎಚ್ಪಿವಿ ಲಸಿಕೆ ಪಡೆಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ!

READ ON APP