Hero Image

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

ಬೆಂಗಳೂರು: ಲ್ಯಾಪ್ ಟಾಪ್ ಬ್ರಾಂಡ್ ಗಳಲ್ಲಿ ತನ್ನದೇ ಆದ ವಿಶ್ವಾಸಾರ್ಹತೆ ಗಳಿಸಿರುವ ಎಚ್ ಪಿ. ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ಎಐ ಆಧರಿಸಿ ಕಾರ್ಯನಿರ್ವಹಿಸುವ ಲ್ಯಾಪ್ ಟಾಪ್ ಗಳನ್ನು ಬಿಡುಗಡೆ ಮಾಡಿದೆ.

Omen Transcend 14 and HP Envy x360 14 ಈ ಹೊಸ ಮಾಡೆಲ್ ಗಳಾಗಿದ್ದು, ಎಐ ಆಧಾರಿತ ತಂತ್ರಜ್ಞಾನವನ್ನು ಇವು ಹೊಂದಿವೆ.

ಈ ಬಗ್ಗೆ ಮಾತನಾಡಿದ ಎಚ್ ಪಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಪ್ಸಿತಾ ದಾಸಗುಪ್ತಾ ನಾವೀಗ ಎಐ-ಚಾಲಿತ ಪಿಸಿಗಳ ಪೋರ್ಟ್ ಫೋಲಿಯೋವನ್ನು ಪರಿಚಯಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ.ಎಂದರು.

ಒಮೆನ್ ಟ್ರಾನ್ಸೆಂಡ್ 14: ಉತ್ತಮ ಗೇಮಿಂಗ್ ಅನುಭವಕ್ಕೆ ಎಐ-ಉನ್ನತೀಕರಣ: ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಷನ್ ಎರಡರಲ್ಲೂ ಪಾಲ್ಗೊಳ್ಳಲು ಗೇಮರ್ ಗಳಿಗಾಗಿ ಈ ಲ್ಯಾಪ್ ಟಾಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ವೇಗವರ್ಧಿತ ಗೇಮ್ ನ ಅನುಭವ ಮತ್ತು ಹೆಚ್ಚು ವೇಗದಲ್ಲಿ ಗ್ರಾಫಿಕ್ ರಚನೆಗಾಗಿ ಎಐ ವೈಶಿಷ್ಟ್ಯತೆಗಳ ಶಕ್ತಿಯನ್ನು ತುಂಬುತ್ತದೆ. ಹೊಸ ಒಮೆನ್ ಟ್ರಾನ್ಸ್ ಸೆಂಡ್ 14 ನಲ್ಲಿನ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಗಳು ಗೇಮರ್ ಗಳಿಗಾಗಿ ಇಇಂಟೆನ್ಸಿವ್ ಕಾರ್ಯಗಳನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ಒಮೆನ್ ಟ್ರಾನ್ಸ್ ಸೆಂಡ್ 14 ಇಂಟೆಲ್ ಮತ್ತು ಎನ್ ವಿಡಿಯಾ ಪ್ರೊಸೆಸರ್ ಗಳ ಮೂಲಕ ಬಿಲ್ಟ್ ಇನ್ ಎಐ ಸೌಲಭ್ಯ ನೀಡುತ್ತದೆ.

ಒಮೆನ್ ಟ್ರಾನ್ಸೆಂಡ್ 14 ನ ಗರಿಷ್ಠವಾದ ಕಾರ್ಯಕ್ಷಮತೆಗಾಗಿ ನೆರವಾಗಲು ಇಂಟೆಲ್ ನೊಂದಿಗೆ ಕೊ-ಎಂಜಿನಿಯರಿಂಗ್ ಮಾಡಲಾಗಿರುವ ಹೊಸ ಕೂಲಿಂಗ್ ಸಿಸ್ಟಂ ಅನ್ನು ಒದಗಿಸಲಾಗಿದೆ. ಇದರಲ್ಲಿನ ಚಾಸಿಸ್ ಗಾಳಿಯನ್ನು ಎಳೆದುಕೊಳ್ಳುತ್ತದೆ ಮತ್ತು ಇದಕ್ಕಾಗಿ ವೇಪರ್ ಚೇಂಬರ್ ಅನ್ನು ಬಳಸಿಕೊಂಡು ರಂಧ್ರಗಳ ಮೂಲಕ ಶಾಖವನ್ನು ಹೊರ ಬಿಡುತ್ತದೆ. ಶಕ್ತಿಶಾಲಿಯಾದ ಒಮೆನ್ ಟ್ರಾನ್ಸೆಂಡ್ 14 ಎಚ್ ಪಿಯ ಅತ್ಯಂತ ಹಗುರವಾದ ಲ್ಯಾಪ್ ಟಾಪ್ ಕೂಡ ಆಗಿದೆ. ಈ ಡಿವೈಸ್ ನ ತೂಕ 1.6 ಕೆಜಿ ಇದ್ದು, ಇದರ ಬ್ಯಾಟರಿ 11.5 ಗಂಟೆ ಕಾಲ ಬಾಳಿಕೆ ಬರುತ್ತದೆ ಎಂದು ಕಂಪೆನಿ ತಿಳಿಸಿದೆ.

HP Envy x360 14:
ಎನ್ವಿ 14 ಲ್ಯಾಪ್ ಟಾಪ್ ಗಳು ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಗಳಿಂದ ಸುಸಜ್ಜಿತವಾಗಿವೆ. ಇವುಗಳು ಅಡೋಬ್ ಫೋಟೋಶಾಪ್ ನಂತಹ ಆ್ಯಪ್ ಗಳ ಮೂಲಕ ಹೈ-ಎಂಡ್ ರಚನೆಯ ಅನುಭವವನ್ನು ನೀಡುತ್ತವೆ. ಈ ಲ್ಯಾಪ್ ಟಾಪ್ ಗಳು ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ ಅನ್ನು ಹೊಂದಿದ್ದು, ಬ್ಯಾಟರಿ ಸಾಮರ್ಥ್ಯವನ್ನು ಶೇ.65 ರಷ್ಟು ಹೆಚ್ಚಿಸಲಿದೆ. ಹೊಸ ಎನ್ವಿ ಕೀಬೋರ್ಡ್ ಮೇಲೆ ಮೈಕ್ರೋಸಾಫ್ಟ್ ಕೋಪೈಲಟ್ ಬಟನ್ ನೊಂದಿಗೆ ಬಿಡುಗಡೆಯಾಗಿರುವ ಎಚ್ ಪಿಯ ಮೊದಲ ಲ್ಯಾಪ್ ಟಾಪ್ ಆಗಿದೆ. ಈ ಬಟನ್ ಅಸಿಸ್ಟೆಡ್ ಸರ್ಚ್, ಕಂಟೆಂಟ್ ಜನರೇಶನ್ ಮತ್ತು ಇನ್ನೂ ಅನೇಕ ಎಐ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.

• ಎಐ ನೊಂದಿಗೆ ಅತ್ಯುತ್ಕೃಷ್ಠವಾದ ಆಡಿಯೋ & ವಿಡಿಯೋ ವೈಶಿಷ್ಟ್ಯತೆಗಳು: ಈ ಲ್ಯಾಪ್ ಟಾಪ್ ಗಳು ಅತ್ಯುತ್ತಮ ವಿಡಿಯೋ ವೈಶಿಷ್ಟ್ಯತೆಗಳಿಗಾಗಿ ವಿಂಡೋಸ್ ಸ್ಟುಡಿಯೋ ಎಫೆಕ್ಟ್ ನಿಂದ ಸುಸಜ್ಜಿತವಾಗಿವೆ. ಚಾಲನೆ ಮಾಡುತ್ತಿರುವಾಗ ಚಿತ್ರವನ್ನು ಸ್ವಯಂಚಾಲಿತವಾಗಿ ಝೂಂ ಮಾಡುವುದು ಮತ್ತು ಕ್ರಾಪ್ ಮಾಡಲು ನೆರವಾಗುತ್ತವೆ. ಕೆಲಸವನ್ನು ಮುಗಿಸಿ ಎದ್ದೇಳುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಲ್ಯಾಪ್ ಟಾಪ್ ಲಾಕ್ ಆಗುತ್ತದೆ ಮತ್ತು ನೀವು ಕೆಲಸ ಮಾಡುತ್ತಿದ್ದಾಗ ನಿಮ್ಮ ಹಿಂದಿನಿಂದ ಯಾರಾದರೂ ಬಂದು ನಿಂತರೆ ಸ್ಕ್ರೀನ್ ಅನ್ನು ಮಸುಕಾಗುವಂತೆ ಅಂದರೆ ಅವರಿಗೆ ಕಾಣದ ರೀತಿಯಲ್ಲಿ ಎಐ-ವರ್ಧಿತ ಗೌಪ್ಯತೆಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

• ಸ್ಲೀಕ್ & ಸ್ಟೈಲಿಶ್: ಕೇವಲ 1.4 ಕೆಜಿಯಷ್ಟು ಭಾರವಿರುವ ಎಚ್ ಪಿ ಎನ್ ವಿ 360 ಲ್ಯಾಪ್ ಟಾಪ್ ಗಳು 14 ಇಂಚುಗಳ ಒಎಲ್ಇಡಿ ಟಚ್ ಡಿಸ್ ಪ್ಲೇಯ ಸ್ಕ್ರೀನ್ ಅನ್ನು ಹೊಂದಿವೆ. ಇದು ನಿಮ್ಮ ಕೆಲಸಕ್ಕೆ, ಬರೆಯುವುದಕ್ಕೆ, ವೀಕ್ಷಿಸಲು ಮತ್ತು ಆಟವಾಡಲು ಸೂಕ್ತವಾಗಿದೆ. ಇದು ಸಂಪೂರ್ಣವಾಗಿ ಅಲ್ಯೂಮೀನಿಯಂ ಚಾಸಿಸ್ ಹೊಂದಿವೆ.
ದರ & ಲಭ್ಯತೆ:

• ಎರಡೂ ಮಾಡೆಲ್ ಗಳು ಎಲ್ಲಾ ಎಚ್ ಪಿ ಸ್ಟೋರ್ ಗಳು ಮತ್ತು ಎಚ್ ಪಿ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಒಮೆನ್ ಟ್ರಾನ್ಸೆಂಡ್ 14 ಸೆರಾಮಿಕ್ ವೈಟ್ ಮತ್ತು ಶಾಡೋ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಬೆಲೆ 1,74,999 ರೂ. ಗಳಿಂದ ಆರಂಭವಾಗಲಿದೆ.

• ಎಚ್ ಪಿ ಎನ್ವಿ 360, ಮೆಟೀರಿಯರ್ ಸಿಲ್ವರ್ ಮತ್ತು ಅಟ್ಮೋಸ್ಫೆರಿಕ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆ 99,999 ರೂ.ಗಳಿಂದ ಆರಂಭ.

READ ON APP