Hero Image

Tesla; ಭಾರತದಲ್ಲಿ ಎಲಾನ್ ಮಸ್ಕ್ 25,000 ಕೋಟಿ ಹೂಡಿಕೆ?

ಹೊಸದಿಲ್ಲಿ: ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿರುವ ಟೆಸ್ಲಾ ಮಾಲಕ ಎಲಾನ್ ಮಸ್ಕ್, ಭಾರತದಲ್ಲಿ 16 ಸಾವಿರದಿಂದ 25,000 ಕೋಟಿ ರೂ. ಹೂಡಿಕೆ ಕುರಿತು ಪ್ರಕಟಿಸಲಿದ್ದಾರೆ. ದೇಶದಲ್ಲಿ ಟೆಸ್ಲಾದ ಹೊಸ ಕಾರ್ಖಾನೆ ಆರಂಭಿಸಲು ಈ ಹೂಡಿಕೆ ನಡೆ ಯ ಲಿದೆ ಎಂದು ಮೂಲ ಗಳು ತಿಳಿ ಸಿ ವೆ. ಈ ವೇಳೆ ಮಸ್ಕ್, ಪ್ರಧಾನಿ ಮೋದಿಯೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಸದ್ಯ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸುತ್ತದೆ.

ಭಾರತ ದಲ್ಲಿ ವಿದ್ಯುತ್ ಚಾಲಿತ ಕಾರುಗಳ ಪ್ರಮಾಣವನ್ನು 2030ರ ಹೊತ್ತಿಗೆ ಶೇ.30 ಕ್ಕೇರಿಸಲು ಕೇಂದ್ರ ಸರಕಾರ ಹೊರಟಿದೆ. ಇದೇ ವೇಳೆ ಚೀನ ಮತ್ತು ಅಮೆರಿಕದಲ್ಲಿ ಟೆಸ್ಲಾ ವಾಹನಗಳ ಮಾರಾಟ ಕುಸಿದಿದೆ. ಇಂತಹ ಹೊತ್ತಿನಲ್ಲಿ ಮಸ್ಕ್ ಭಾರತ ಭೇಟಿ ಮಹತ್ವ ಪಡೆದಿದೆ.

ಮಸ್ಕ್ ಟ್ವೀಟ್ಬಗ್ಗೆ ಅಮೆರಿಕದಲ್ಲಿ ಚರ್ಚೆ
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡ ದಿರುವುದು ಅಚ್ಚರಿ ಹುಟ್ಟಿಸಿದೆ. ವಿಶ್ವಸಂಸ್ಥೆಯನ್ನೇ ಪುನಾರಚನೆ ಮಾಡಬೇಕಾದ ಆವಶ್ಯಕತೆಯಿದೆ ಎಂದು 3 ತಿಂಗಳ ಹಿಂದೆ ಮಸ್ಕ್ ಮಾಡಿದ ಆಗ್ರಹದ ಬಗ್ಗೆ ಅಮೆರಿಕ ದಲ್ಲೀಗ ಚರ್ಚೆ ಶುರುವಾಗಿದೆ.

READ ON APP