Hero Image

T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಡೈರಿ ಉತ್ಪನ್ನ ಬ್ರ್ಯಾಂಡ್ ನಂದಿನಿ ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಎರಡು ತಂಡಗಳ ಪ್ರಾಯೋಕತ್ವದಲ್ಲಿ ಪಾಲ್ಗೊಂಡಿದೆ. ಟಿ20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ ತಂಡಗಳಾದ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ ವಹಿಸಲಿದೆ.

“ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳನ್ನು ಪ್ರಾಯೋಜಿಸಲು ನಾವು ಐಡಿಡಬ್ಲ್ಯೂ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಗೆ ಏಪ್ರಿಲ್ 20 ರಂದು ಕೆಲಸದ ಆದೇಶವನ್ನು ನೀಡಿದ್ದೇವೆ.

ನಂದಿನಿ ಲೋಗೋ ಲೀಡ್ ಆರ್ಮ್ ಜರ್ಸಿಯಲ್ಲಿ ಬರುತ್ತದೆ (ಅಂದರೆ ಎಡಗೈ ಆಟಗಾರರ ಬಲಗೈಗೆ ಮತ್ತು ಬಲಗೈ ಬ್ಯಾಟರ್ ಗಳಿಗೆ ಎಡಗೈ) ಎರಡು ತಂಡಗಳು ನಮ್ಮ ಜಾಹೀರಾತುಗಳು, ಸಾಮಾಜಿಕ ಮಾಧ್ಯಮ ಪ್ರಚಾರಗಳು, ಫೋಟೋ ಶೂಟ್ಗಳು ಮತ್ತು ನಮ್ಮ ಉತ್ಪನ್ನಗಳ ಎಂಡೋರ್ಸ್ ಮೆಂಟ್ ನಲ್ಲಿ ತೊಡಗಿಸಿಕೊಳ್ಳುತ್ತವೆ, ಇದನ್ನು ನಾವು ಪಂದ್ಯಾವಳಿಯ ಸಮಯದಲ್ಲಿ ಪ್ರಸಾರ ಮಾಡುತ್ತೇವೆ. ಇದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣ” ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಹೇಳಿದರು.

2024ರ ಟಿ20 ವಿಶ್ವಕಪ್ ಕೂಟವು ವೆಸ್ಟ್ ಇಂಡೀಸ್ ಮತ್ತು ಯುಎಸ್ ನಲ್ಲಿ ನಡೆಯಲಿದೆ. ಇದು ಜೂನ್ 1ರಂದು ಆರಂಭವಾಗಲಿದ್ದು, 29ರವರೆಗೆ ನಡೆಯಲಿದೆ. ಈ ಬಾರಿಯ ಕೂಟದಲ್ಲಿ 20 ತಂಡಗಳು ಭಾಗವಹಿಸಲಿದೆ.

“ವಿಶ್ವಕಪ್ ಸಮಯದಲ್ಲಿ ನಮ್ಮ ಉತ್ಪನ್ನಗಳು ಯುಸ್ ನಲ್ಲಿ ಲಭ್ಯವಿರುತ್ತದೆ. ಇದರಿಂದಾಗಿ ನಂದಿನಿ ಬ್ರ್ಯಾಂಡ್ ಜಾಗತಿಕವಾಗಿ ಹೋಗುತ್ತಿದೆ ಎಂದು ಜನರಿಗೆ ತಿಳಿಯುತ್ತದೆ. ನಂದಿನಿ ಬ್ರ್ಯಾಂಡ್ ನ ಅಡಿಯಲ್ಲಿ ಅನೇಕ ಉತ್ಪನ್ನಗಳನ್ನು ಸಹ ರುಚಿ ನೋಡಬಹುದು. ಜಾಗತಿಕ ಮಟ್ಟದಲ್ಲಿ ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲು ಉತ್ತಮ ಅವಕಾಶ” ಎಂದು ಜಗದೀಶ್ ಹೇಳಿದರು.

READ ON APP