Hero Image

LSGvsRR ಪಂದ್ಯಕ್ಕೆ ಅಡಚಣೆ; ತುಂಡಾದ ಸ್ಪೈಡರ್ ಕ್ಯಾಮರಾದ ವೈರ್

ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ 2024 ಪಂದ್ಯದಲ್ಲಿ ಸ್ಪೈಡರ್ ಕ್ಯಾಮ್ನ ತಂತಿ ಮುರಿದು ನೆಲದ ಮೇಲೆ ಬಿದ್ದ ಘಟನೆ ನಡೆಯಿತು.

ರಾಜಸ್ತಾನ ರಾಯಲ್ಸ್ ಪರವಾಗಿ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಅವರು ಇನ್ನಿಂಗ್ಸ್ ಆರಂಭಿಸಿದ್ದರು. ಪಂದ್ಯದ ಮೊದಲ ಎರಡು ಎಸೆತಗಳನ್ನು ಎಸೆಯಲಾಗಿತ್ತು.

ಈ ವೇಳೆ ಸ್ಪೈಡರ್ ಕ್ಯಾಮರಾದ ವೈರ್ ಗಳು ತುಂಡಾಗಿ ಬಿದ್ದವು.

ಮೈದಾನದ ಸಿಬ್ಬಂದಿ ತ್ವರಿತವಾಗಿ ಮೈದಾನಕ್ಕೆ ಪ್ರವೇಶಿಸಿದರು. ತಂತಿಯನ್ನು ಸಂಗ್ರಹಿಸಿ ಅದನ್ನು ಹೊರಹಾಕಲು ಸ್ವಲ್ಪ ಸಮಯ ತೆಗೆದುಕೊಂಡಿತು.

ಜೈಪುರ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿದೆ. ನಾಯಕ ಸಂಜು ಸ್ಯಾಮ್ಸನ್ ಅಜೇಯ 82 ರನ್ ಮಾಡಿದರು. ರಿಯಾನ್ ಪರಾಗ್ 43 ರನ್ ಮತ್ತು ಯಶಸ್ವಿ ಜೈಸ್ವಾಲ್ 24 ರನ್ ಮಾಡಿದರು.

READ ON APP