Hero Image

ಆಟೋಮ್ಯಾಟಿಕ್ ಎಸ್ಯುವಿ ಕೊಳ್ಳುವ ಪ್ಲ್ಯಾನ್ನಲ್ಲಿದ್ದೀರಾ?: ಇಲ್ಲಿವೆ 10 ಲಕ್ಷ ರೂಪಾಯಿಯೊಳಗಿನ 6 ಕಾರುಗಳ ಡೀಟೇಲ್ಸ್

ಭಾರತದಲ್ಲಿ ಈಗ ಆಟೋಮ್ಯಾಟಿಕ್ ಕಾರುಗಳ ಮಾರುಕಟ್ಟೆಯೂ ಹಿರಿದಾಗುತ್ತಿದೆ. ಮ್ಯಾನ್ಯುವಲ್‌ ಕಾರಿಗಿಂತ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಕಾರನ್ನು ಹಲವರು ಇಷ್ಟಪಡುತ್ತಾರೆ. ಹೀಗಾಗಿ ಬಹುತೇಕ ಕಾರು ತಯಾರಕ ಕಂಪನಿಗಳು ಮ್ಯಾನ್ಯುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ವೇರಿಯೆಂಟ್ ಅನ್ನೂ ಎಲ್ಲಾ ಮಾದರಿಗಳಲ್ಲೂ ಪರಿಚಯಿಸುತ್ತಿದ್ದಾರೆ. ಅಂತೆಯೇ ನೀವು ಕೂಡಾ 10 ಲಕ್ಷ ರೂಪಾಯಿ ಆಸುಪಾಸಿನ ಬಜೆಟ್‌ನಲ್ಲಿ ಆಟೋಮ್ಯಾಟಿಕ್ ಎಸ್‌ಯುವಿ ಖರೀದಿಸಬೇಕು ಎಂದು ಮನಸ್ಸು ಮಾಡಿದ್ದರೆ ಇಲ್ಲಿವೆ ಆರು ಆಯ್ಕೆಗಳು.
ನಿಸ್ಸಾನ್ ಮ್ಯಾಗ್ನೈಟ್ನಿಸ್ಸಾನ್ ಮ್ಯಾಗ್ನೈಟ್‌ ಕೂಡಾ ಭಾರತದಲ್ಲಿ ಸಾಕಷ್ಟು ಗ್ರಾಹಕರನ್ನು ಹೊಂದಿದೆ. ನಿಸ್ಸಾನ್ ಮ್ಯಾಗ್ನೈಟ್‌ನ ಎಎಂಟಿ ಮಾದರಿಯ ಎಕ್ಸ್‌ಶೋರೂಮ್ ಬೆಲೆ 6.6 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಈ ಎಸ್‌ಯುವಿ 1.0-ಲೀಟರ್ 3 ಸಿಲಿಂಡರ್ ಎನ್‌ಎ ಪೆಟ್ರೋಲ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಇದಲ್ಲದೆ ಇದು 1.0-ಲೀಟರ್ 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಲಭ್ಯವಿದೆ. ರೆನಾಲ್ಟ್‌ ಕಿಗರ್ರೆನಾಲ್ಟ್‌ ಕಿಗರ್‌ನ ಎಕ್ಸ್‌ಶೋರೂಮ್ ಬೆಲೆ 7.1 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಕಿಗರ್‌ ಕೂಡಾ ನಿಸ್ಸಾನ್ ಮ್ಯಾಗ್ನೈಟ್‌ನಂತೆ 1.0-ಲೀಟರ್ 3 ಸಿಲಿಂಡರ್, ಎನ್‌ಎ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಕೂಡಾ 1.0-ಲೀಟರ್ 3 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಸಿಗುತ್ತದೆ. ಟಾಟಾ ಪಂಚ್
ಟಾಟಾ ಮೋಟಾರ್ಸ್‌ನ ಜನಪ್ರಿಯ ವಾಹನಗಳಲ್ಲಿ ಟಾಟಾ ಪಂಚ್ ಕೂಡಾ ಒಂದು. ಟಾಟಾ ಪಂಚ್ ಎಎಂಟಿ ಮೈಕ್ರೋ ಎಸ್‌ಯುವಿಯ ಎಕ್ಸ್‌ಶೋರೂಮ್ ಬೆಲೆ 7.6 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಈ ಎಸ್‌ಯುವಿ 1.2-ಲೀಟರ್ 3 ಸಿಲಿಂಡರ್ ಎನ್‌ಎ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 88 ಎಚ್‌ಪಿ ಶಕ್ತಿ ಹಾಗೂ 115 ಎನ್‌ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಹ್ಯುಂಡೈ ಎಕ್ಸ್‌ಟರ್ಟಾಟಾ ಪಂಚ್‌ನ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್ ಕೂಡಾ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಸಿಗುತ್ತದೆ. ಹ್ಯುಂಡೈ ಎಕ್ಸ್‌ಟರ್‌ ಎಎಂಟಿ ಎಸ್‌ಯುವಿಯ ಎಕ್ಸ್‌ಶೋರೂಮ್ ಬೆಲೆ 8.2 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಈ ಎಸ್‌ಯುವಿ 1.2-ಲೀಟರ್ 4 ಸಿಲಿಂಡರ್ ಎನ್‌ಎ ಪೆಟ್ರೋಲ್ ಎಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಈ ಎಂಜಿನ್ 83 ಎಚ್‌ಪಿ ಶಕ್ತಿ ಹಾಗೂ 114 ನ್ಯೂಟನ್ ಮೀಟರ್ ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಫ್ರಾಂಕ್ಸ್‌
ಮಾರುತಿ ಸುಜುಕಿಯ ಜನಪ್ರಿಯ ಎಸ್‌ಯುವಿಗಳಲ್ಲಿ ಫ್ರಾಂಕ್ಸ್‌ ಕೂಡಾ ಸೇರುತ್ತದೆ. ಈ ಎಎಂಟಿ ಎಸ್‌ಯುವಿಯ ಎಕ್ಸ್‌ಶೋರೂಮ್ ಬೆಲೆ 8.9 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಫ್ರಾಂಕ್ಸ್‌ ಎಎಂಟಿ 1.2-ಲೀಟರ್ 4 ಸಿಲಿಂಡರ್ ಎನ್‌ಎ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 90 ಎಚ್‌ಪಿ ಶಕ್ತಿ ಹಾಗೂ 113 ಎನ್‌ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇದಲ್ಲದೆ, 1.0-ಲೀಟರ್, 3 ಸಿಲಿಂಡರ್ ಟರ್ಬೋಚಾರ್ಜ್ಡ್‌ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಈ ಮಾದರಿ ಲಭ್ಯವಿದೆ. ಟಾಟಾ ನೆಕ್ಸಾನ್ಟಾಟಾದ ಮತ್ತೊಂದು ಜನಪ್ರಿಯ ಎಸ್‌ಯುವಿ ನೆಕ್ಸಾನ್ ಕೂಡಾ ಎಎಂಟಿ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಸಿಗುತ್ತದೆ. ನೆಕ್ಸಾನ್ ಎಎಂಟಿ ಎಸ್‌ಯುವಿಯ ಎಕ್ಸ್‌ ಶೋರೂಮ್ ಬೆಲೆ 10 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಇದು 1.2-ಲೀಟರ್, 3 ಸಿಲಿಂಡರ್ ಟರ್ಬೋಚಾರ್ಜ್ಡ್‌ ಪೆಟ್ರೋಲ್ ಎಂಜಿನ್ ಹೊಂದಿದ್ದು, 120ಎಚ್‌ಪಿ ಶಕ್ತಿ ಹಾಗೂ 170 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, 1.5-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೂ ಇದು ಸಿಗುತ್ತದೆ.

READ ON APP