Hero Image

ರತನ್ ಟಾಟಾಗೆ 'ಕಳಿಂಗ ಇನ್ಸ್ಟಿಟ್ಯೂಟ್'ನ ಪ್ರತಿಷ್ಠಿತ ಹ್ಯುಮ್ಯಾನಿಟೇರಿಯನ್ ಪ್ರಶಸ್ತಿ

ಮುಂಬಯಿ: ಖ್ಯಾತ ಕೈಗಾರಿಕೋದ್ಯಮಿ, ಟಾಟಾ ಸಮೂಹದ ಗೌರವ ಅಧ್ಯಕ್ಷ ಮತ್ತು ಜನೋಪಯೋಗಿ ಕಾರ್ಯಗಳಿಗೆ ಉದಾರ ದೇಣಿಗೆ ನೀಡುವ ರತನ್‌ ಟಾಟಾ ಅವರಿಗೆ ಪ್ರತಿಷ್ಠಿತ ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ (ಕಿಸ್‌ ವಿಶ್ವವಿದ್ಯಾಲಯ)ನ ಹ್ಯೂಮ್ಯಾನಿಟೇರಿಯನ್‌ ಪ್ರಶಸ್ತಿ - 2021 ಪ್ರದಾನ ಮಾಡಲಾಯಿತು. ರತನ್‌ ಟಾಟಾ ಅವರ ಮುಂಬಯಿ ನಿವಾಸದಲ್ಲಿ ಈ ಪ್ರಶಸ್ತಿಯನ್ನು ನೀಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಟಾಟಾ ಗ್ರೂಪ್‌ ಅಧ್ಯಕ್ಷ ಎನ್‌ ಚಂದ್ರಶೇಖರನ್‌ ಮತ್ತು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. "ಈ ಗೌರವವನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗಿದೆ. ಇದು ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ," ಎಂದು ರತನ್‌ ಟಾಟಾ ಪ್ರಶಸ್ತಿ ಸ್ವೀಕರಿಸಿ ಹೇಳಿದರು. 'ರತನ್‌ ಟಾಟಾ ಅವರಂತಹ ಮಹೋನ್ನತ ವ್ಯಕ್ತಿಗೆ ಈ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ' ಎಂದು ಕಿಸ್‌ ವಿವಿ ಸಂಸ್ಥಾಪಕ ಅಚ್ಯುತ್‌ ಸಮಂತಾ ಬಣ್ಣಿಸಿದರು. "ರತನ್‌ ಟಾಟಾ ಅವರ ಸಾಮಾಜಿಕ ಕಾರ್ಯಗಳು ಮತ್ತು ನಾಯಕತ್ವವು ನನ್ನ ಬಾಲ್ಯದಿಂದಲೂ ನನ್ನ ಮೇಲೆ ಪ್ರಭಾವ ಬೀರುತ್ತಿದೆ.
ನಾನು ಚಿಕ್ಕ ವಯಸ್ಸಿನಿಂದಲೂ ಅವರನ್ನು ಇಷ್ಟಪಟ್ಟಿದ್ದೇನೆ. ನನ್ನ ತಂದೆ ಟಾಟಾ ಕಂಪನಿಯ ಉದ್ಯೋಗಿಯಾಗಿದ್ದರು,'' ಎಂದು ಅವರು ತಮ್ಮ ಜೀವನದಲ್ಲಿ ರತನ್‌ ಟಾಟಾ ಬೆರತುಕೊಂಡ ಬಗೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ, ಕಿಸ್‌ ಸಾವಿರಾರು ವಿದ್ಯಾರ್ಥಿಗಳು ರತನ್‌ ಟಾಟಾ ಅವರಿಗೆ ಶುಭ ಕೋರಿದರು. ಪ್ರತಿಯೊಬ್ಬರೂ ಉದ್ಯಮಿಗಳಾಗಲು ಸಾಧ್ಯಬೆಂಗಳೂರು: ಉದ್ಯಮಶೀಲತೆ ಎಂಬುದು ಕೇವಲ ಮನಸ್ಸಿನ ಸ್ಥಿತಿ. ಕಂಪನಿಗಳನ್ನು ಪ್ರಾರಂಭಿಸುವವರು ಉದ್ಯಮಿಗಳಲ್ಲ, ಕೆಲಸಗಳನ್ನು ವೇಗವಾಗಿ ಮಾಡುವುದು ಮತ್ತು ಉತ್ಕೃಷ್ಟತೆಗಾಗಿ ಶ್ರಮಿಸುವುದು, ಸ್ಪರ್ಧಾತ್ಮಕ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದು ಉದ್ಯಮಶೀಲತೆಯಾಗಿದೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಹೇಳಿದ್ದಾರೆ.
ಅವರು ಸುಧಾರಿತ ಬ್ಯಾಟರಿ ತಂತ್ರಜ್ಞಾನದ ನವೋದ್ಯಮ ಸ್ಟಾರ್ಟ್‌ಅಪ್‌ ಲಾಗ್‌ 9 ಮೆಟೀರಿಯಲ್ಸ್‌ ಆಯೋಜಿಸಿದ್ದ ‘ಡೇ ಝೀರೋ 2024’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ‘‘ಎಲ್ಲಿಯ ತನಕ ನಾನು ಹೇಳಿದ ವ್ಯಾಖ್ಯಾನವನ್ನು ಮನದಲ್ಲಿ ಇಟ್ಟುಕೊಂಡಿರುತ್ತೇವೆಯೋ ಅಲ್ಲಿಯ ತನಕ ನಾವೆಲ್ಲರೂ ಉದ್ಯಮಿಗಳು,’’ ಎಂದು ತಿಳಿಸಿದ್ದಾರೆ.‘‘ಪ್ರತಿಯೊಬ್ಬರೂ ಉದ್ಯಮಿಗಳಾಗಬಹುದು ಏಕೆಂದರೆ ಅದೊಂದು ಮನಸ್ಸಿನ ಸ್ಥಿತಿ. ಕಂಪನಿಯ ಪ್ರತಿಯೊಬ್ಬರೂ ಎಲ್ಲಿಯವರೆಗೆ ಕೆಲಸಗಳನ್ನು ವೇಗವಾಗಿ, ಅಗ್ಗವಾಗಿ ಮತ್ತು ಉತ್ತಮವಾಗಿ ಮಾಡಬಹುದು ಎಂದು ತಮ್ಮನ್ನು ತಾವು ಕೇಳಿಕೊಳ್ಳುತ್ತಾರೋ ಅಲ್ಲಿಯವರೆಗೆ ಸ್ಪರ್ಧಾತ್ಮಕ ಸುಸ್ಥಿರ ಪ್ರಯೋಜನವನ್ನು ಗಳಿಸುವ ಸ್ಥಾನದಲ್ಲಿರುತ್ತಾರೆ ಎಂದು ನಾನು ಭಾವಿಸುತ್ತೇನೆ’’ ಎಂದರು.‘‘ಕಂಪನಿಯ ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುವ ಅಂಶಗಳೆಂದರೆ ಮೊದಲನೆಯದು ಮಾರುಕಟ್ಟೆಗೆ ಪ್ರವೇಶ.
ಕಂಪನಿಯು ಮಾರುಕಟ್ಟೆಗೆ ತನ್ನ ಪ್ರವೇಶವನ್ನು ಹೆಚ್ಚಿಸದ ಹೊರತು, ನಿಮ್ಮ ಕಲ್ಪನೆ ಎಷ್ಟೇ ಉತ್ತಮವಾಗಿದ್ದರೂ, ಅದು ಶೂನ್ಯ ಮೌಲ್ಯವನ್ನು ಹೊಂದಿದೆ ’’ ಎಂದು ವಿಶ್ಲೇಷಿಸಿದರು. ‘‘ಎರಡನೆಯದು ಪ್ರತಿಭೆಗೆ ಪ್ರವೇಶ. ಅತ್ಯುತ್ತಮ ಗುಣಮಟ್ಟದ ಮನಸ್ಸುಗಳನ್ನು ತರದ ಹೊರತು ಕಂಪನಿ ಬೆಲೆಯುಳ್ಳದ್ದಾಗಿರುವುದಿಲ್ಲ. ಮನಸ್ಸಿನ ಶಕ್ತಿ ಹೊಸತನವನ್ನು ಶೋಧಿಸುತ್ತದೆ. ಅದನ್ನು ಮೇಜಿನ ಮೇಲೆ ತಂದಿಡುತ್ತದೆ. ನಿಮ್ಮ ಅತ್ಯುನ್ನತವಾದ ಕೆಲಸ ಯಾವುದು ಎಂದರೆ ಅತ್ಯುತ್ತಮ, ಸಬಲ ಹಾಗೂ ಪ್ರಕಾಶಮಾನ ಪ್ರತಿಭೆ ಇರುವವರನ್ನು ನೇಮಿಸಿಕೊಳ್ಳುವುದೇ ಆಗಿದೆ,’’ ಎಂದು ತಿಳಿ ಹೇಳಿದ್ದಾರೆ.

READ ON APP