Hero Image

ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಇಂದಿನಿಂದ ಅರ್ಜಿ ಸ್ವೀಕಾರ: ವಿಧಾನ, ಲಿಂಕ್ ಇಲ್ಲಿದೆ..

ಕಳೆದ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಬರೋಬರಿ 16 ಸರ್ಕಾರಿ ಇಲಾಖೆಗಳ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಆ ಇಲಾಖೆಗಳ ಪೈಕಿ ಸಾರಿಗೆ ಇಲಾಖೆಯ ಹುದ್ದೆಗಳು ಇದ್ದು, ಆ ಹುದ್ದೆಗಳಿಗೆ ಇಂದಿನಿಂದ ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭವಾಗಿದೆ. ಕೆಪಿಎಸ್‌ಸಿ ಮಾರ್ಚ್ ತಿಂಗಳಲ್ಲಿ ಅಧಿಸೂಚಿಸಿದ್ದ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರು (ಗ್ರೂಪ್‌ ಸಿ) - 76 ಹುದ್ದೆಗಳಿಗೆ ಇಂದಿನ ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಏಪ್ರಿಲ್ 22, 2024 ರಿಂದ ಮೇ 21, 2024 ರವರೆಗೆ ಅರ್ಜಿಯನ್ನು ಆಯೋಗ ಸ್ವೀಕಾರ ಮಾಡಲಿದೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ವಿಧಾನ, ಲಿಂಕ್‌ ಇಲ್ಲಿ ನೀಡಲಾಗಿದ್ದು, ಒಮ್ಮೆ ಓದಿಕೊಳ್ಳಿ. ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸಂಸ್ಥೆ : ಸಾರಿಗೆ ಇಲಾಖೆ ಹುದ್ದೆ ಹೆಸರು : ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ಸಂಖ್ಯೆ : 76 (70RPC+6HK) ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ. ಸಾರಿಗೆ ಇಲಾಖೆಯ 76 ಮೋಟಾರು ವಾಹನ ನಿರೀಕ್ಷಕರ ಭರ್ತಿಗೆ ಕೆಪಿಎಸ್‌ಸಿ ಅಧಿಸೂಚನೆ: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ
ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನಕೆಪಿಎಸ್‌ಸಿ ಯ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪ್ರಮುಖವಾಗಿ 3 ಹಂತಗಳಿರುತ್ತವೆ. ಮೊದಲನೇ ಹಂತ : ಪ್ರೊಫೈಲ್ ಕ್ರಿಯೇಟ್‌ / ಅಪ್‌ಡೇಟ್‌ ಎರಡನೇ ಹಂತ : ಅಪ್ಲಿಕೇಶನ್ ಸಬ್‌ಮಿಷನ್ ಮೂರನೇ ಹಂತ : ಅಪ್ಲಿಕೇಶನ್‌ ಶುಲ್ಕ ಪಾವತಿ ಮಾಡುವುದು. ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ? - ಆಯೋಗದ ವೆಬ್‌ಸೈಟ್‌ 'http://www.kpsc.kar.nic.in/' ಗೆ ಭೇಟಿ ನೀಡಿ. - ತೆರೆದ ಆಯೋಗದ ಮುಖಪುಟದಲ್ಲಿ 'Apply Online for Various Notifications' ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ಮತ್ತೊಂದು ವೆಬ್‌ ಪೇಜ್‌ ತೆರೆಯುತ್ತದೆ. - ಇಲ್ಲಿ ' MVI RPC, HK Posts' ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ. - ಆಯೋಗದ ಹೊಸ ಜಾಬ್‌ ಅಪ್ಲಿಕೇಶನ್‌ ವೆಬ್‌ಪೇಜ್‌ ತೆರೆಯುತ್ತದೆ. ಡೈರೆಕ್ಟ್‌ ಲಿಂಕ್‌ಗಾಗಿ ಕ್ಲಿಕ್ ಮಾಡಿ- ಈಗಾಗಲೇ ಕೆಪಿಎಸ್‌ಸಿ ವೆಬ್‌ನಲ್ಲಿ ರಿಜಿಸ್ಟ್ರೇಷನ್‌ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಲು 'Login' ಎಂದಿರುವಲ್ಲಿ ಕ್ಲಿಕ್ ಮಾಡಿ. ನಂತರ ಅರ್ಜಿ ಸಲ್ಲಿಸಿ. - ಇದೇ ಮೊದಲ ಬಾರಿ ಕೆಪಿಎಸ್‌ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳಾಗಿದ್ದಲ್ಲಿ, 'New Registration' ಎಂದಿರುವಲ್ಲಿ ಕ್ಲಿಕ್ ಮಾಡಿ.
- ಬೇಸಿಕ್ ವಿವರಗಳನ್ನು ನೀಡಿ, ರಿಜಿಸ್ಟ್ರೇಷನ್‌ ಮಾಡಿಕೊಳ್ಳಿ. ನಂತರ ಪ್ರೊಫೈಲ್‌ ಕ್ರಿಯೇಟ್‌ ಮಾಡಿ.- ಅಗತ್ಯ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ. - ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

READ ON APP