Hero Image

ಪದವಿ ಪಾಸಾದವರಿಗೆ ಕೇಂದ್ರ ಪೊಲೀಸ್ ಪಡೆಗಳಲ್ಲಿ ಉದ್ಯೋಗ: ಇಂದಿನಿಂದಲೇ ಅರ್ಜಿ ಹಾಕಿ

ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳಾದ ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್‌ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಇಂಡೊ-ಟೆಬೆಟನ್ ಗಡಿ ಪೊಲೀಸ್‌ ಮತ್ತು ಸಶಸ್ತ್ರ ಸೀಮಾ ಬಲ ಪಡೆಗಳಲ್ಲಿ ಅಗತ್ಯ ಗ್ರೂಪ್‌ ಎ ಅಸಿಸ್ಟಂಟ್‌ ಕಮಾಂಡಂಟ್‌ ಹುದ್ದೆಗಳ ಭರ್ತಿಗಾಗಿ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 506 ಹುದ್ದೆಗಳಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ, ಅರ್ಹತೆ, ಇತರೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ. ಸಿಎಪಿಎಫ್‌ ಪಡೆಗಳವಾರು ಹುದ್ದೆಗಳ ವಿವರ ಗಡಿ ಭದ್ರತಾ ಪಡೆ: 186ಕೇಂದ್ರ ಮೀಸಲು ಪೊಲೀಸ್‌ ಪಡೆ : 120ಕೇಂದ್ರ ಕೈಗಾರಿಕಾ ಭದ್ರತಾ ಪಡೆ: 100ಇಂಡೊ-ಟೆಬೆಟನ್ ಗಡಿ ಪೊಲೀಸ್‌: 58ಸಶಸ್ತ್ರ ಸೀಮಾ ಬಲ : 42 ವಿದ್ಯಾರ್ಹತೆಸಿಎಪಿಎಫ್‌ ಪಡೆಗಳ ಅಸಿಸ್ಟಂಟ್ ಕಮಾಂಡಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಪದವಿ / ತತ್ಸಮಾನ ಶೈಕ್ಷಣಿಕ ಅರ್ಹತೆ ಪಡೆದಿರಬೇಕು. UPSC CSE 2023 ಫಲಿತಾಂಶದ ಕಟ್‌ಆಫ್‌ ಅಂಕ ಪ್ರಕಟ: ಯಾವ ಹುದ್ದೆಗೆ ಎಷ್ಟು ಅಭ್ಯರ್ಥಿಗಳ ಆಯ್ಕೆ? ಡೀಟೇಲ್ಸ್‌ ಇಲ್ಲಿದೆ.. ವಯಸ್ಸಿನ ಅರ್ಹತೆಗಳು
ಕನಿಷ್ಠ 20 ವರ್ಷ ಆಗಿರುವ, ಗರಿಷ್ಠ ವಯಸ್ಸು 25 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ವರ್ಗವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ. ಇದರ ಪ್ರಕಾರ ಒಬಿಸಿ ವರ್ಗದವರಿಗೆ 3 ವರ್ಷ, ಇತರೆ ಹಿಂದುಳಿದ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ. ಪ್ರಮುಖ ದಿನಾಂಕಗಳು ನೋಟಿಫಿಕೇಶನ್‌ ಬಿಡುಗಡೆ ದಿನಾಂಕ: 24-04-2024 ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-04-2024 ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-05-2024 ರ 18-00 ಗಂಟೆವರೆಗೆ. ಅರ್ಜಿ ತಿದ್ದುಪಡಿಗೆ ಅವಕಾಶ ದಿನಾಂಕ: 15-05-2024 ರಿಂದ 21-05-2024 ರವರೆಗೆ. ಲಿಖಿತ ಪರೀಕ್ಷೆ ದಿನಾಂಕ : 04-08-2024 ಕರ್ನಾಟಕದಲ್ಲಿ ಪರೀಕ್ಷೆ ನಡೆಯುವ ಸ್ಥಳ : ಬೆಂಗಳೂರು. ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಇರುತ್ತದೆ. ಇತರೆ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯ ಪಿಡಿಎಫ್‌ ಲಿಂಕ್ ಕೆಳಗಿನಂತೆ ನೀಡಲಾಗಿದೆ. UPSC CAPFs Assistant Commandant Exam 2024 Notification ಅರ್ಜಿ ಸಲ್ಲಿಸುವ ವಿಧಾನ
- ಯುಪಿಎಸ್‌ಸಿ ಒಟಿಆರ್‌ಪಿ‌ ಪೋರ್ಟಲ್ https://upsconline.nic.in/upsc/OTRP/ ಗೆ ಭೇಟಿ ನೀಡಿ. - ತೆರೆದ ವೆಬ್‌ಪುಟದಲ್ಲಿ ಇಮೇಲ್‌ ಐಡಿ ಅಥವಾ ಮೊಬೈಲ್‌ ನಂಬರ್ ನೀಡಿ ಲಾಗಿನ್‌ ಆಗಲು ಮೊದಲು ರಿಜಿಸ್ಟ್ರೇಷನ್‌ ಪಡೆಯಿರಿ. - ನಂತರ ಅರ್ಜಿಗೆ ಕೇಳಲಾದ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ. - ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ. ಅರ್ಜಿ ಶುಲ್ಕ ರೂ.200. ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ಪಿಎಸ್‌ಟಿ, ಪಿಇಟಿ, ವೈದ್ಯಕೀಯ ಪರೀಕ್ಷೆ ಮೂಲಕ.

READ ON APP