Hero Image

76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಅರ್ಜಿಗೆ ದಿನಾಂಕ ವಿಸ್ತರಣೆ ಮಾಡಿದ ಕೆಪಿಎಸ್ಸಿ

ಕರ್ನಾಟಕ ಲೋಕಸೇವಾ ಆಯೋಗವು ಸಾರಿಗೆ ಇಲಾಖೆಯಲ್ಲಿನ ಗ್ರೂಪ್‌ ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು 70 (RPC) ಮತ್ತು 06 (HK) ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ 14-03-2024 ರಂದು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿ ಆನ್‌ಲೈನ್‌ ಅರ್ಜಿ ಆಹ್ವಾನಿಸಿತ್ತು. ಏಪ್ರಿಲ್ 22 ರಿಂದ ಮೇ 21 ರವರೆಗೆ ಅರ್ಜಿಗೆ ಅವಕಾಶ ಇರುತ್ತದೆ ಎಂದು ಈ ಹಿಂದೆ ಹೇಳಿತ್ತು. ಆದರೆ ಇದೀಗ ಕಾರಣಾಂತರಗಳಿಂದ ಕೆಪಿಎಸ್‌ಸಿ ಅರ್ಜಿಗೆ ದಿನಾಂಕ ವಿಸ್ತರಣೆ ಮಾಡಿದ್ದು, ಹೊಸ ವೇಳಾಪಟ್ಟಿ ಪ್ರಕಟಿಸಿದೆ.
ಅರ್ಜಿ ದಿನಾಂಕ ವಿಸ್ತರಣೆಗೆ ಕಾರಣ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ವಾಹನ ಚಾಲನಾ ಪರವಾನಿಗೆಗೆ (ಡಿಎಲ್) ಸಂಬಂಧಿಸಿದಂತೆ ಅರ್ಜಿಯಲ್ಲಿ ಡಿಎಲ್ ಸಂಖ್ಯೆಯನ್ನು ನಮೂದಿಸಿದಾಗ ಡಿಎಲ್‌ ನ ಸಂಪೂರ್ಣ ಮಾಹಿತಿಯು ಅಪ್ಲಿಕೇಶನ್‌ ಪ್ರೋಗ್ರಾಮಿಂಗ್ ಇಂಟರ್‌ಫೇಸ್(API) ತಂತ್ರಾಂಶದ ಮೂಲಕ ಅರ್ಜಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕಾರಣದಿಂದ ಅರ್ಜಿ ಸ್ವೀಕಾರ ವಿಳಂಬವಾಗಲಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಕಾಲಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಿದೆ. ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಅರ್ಜಿಗೆ ಪರಿಷ್ಕೃತ ದಿನಾಂಕಗಳು ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02-05-2024 ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 01-06-2024 ಶುಲ್ಕ ಪಾವತಿಸಲು ಕೊನೆಯ ದಿನಾಂಕ: 01-06-2024 ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ವಯಸ್ಸಿನ ಅರ್ಹತೆ, ಅರ್ಜಿ ಶುಲ್ಕ, ವೇತನ ಮಾಹಿತಿಗಳು, ಇತರೆ ಡೀಟೇಲ್ಸ್‌ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಸಾರಿಗೆ ಇಲಾಖೆಯ 76 ಮೋಟಾರು ವಾಹನ ನಿರೀಕ್ಷಕರ ಭರ್ತಿಗೆ ಕೆಪಿಎಸ್‌ಸಿ ಅಧಿಸೂಚನೆ ಪ್ರಕಟ: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ ಕೆಪಿಎಸ್‌ಸಿ ಪೋರ್ಟಲ್‌ ಮೂಲಕ ಅರ್ಜಿ ಹಾಕುವ ವಿಧಾನ - ಆಯೋಗದ ಅಫೀಶಿಯಲ್ ವೆಬ್‌ ವಿಳಾಸ 'http://www.kpsc.kar.nic.in/' ಗೆ ಭೇಟಿ ನೀಡಿ. - ಓಪನ್ ಆಗುವ ಕೆಪಿಎಸ್‌ಸಿ ಮುಖಪುಟದಲ್ಲಿ 'Apply Online for Various Notifications' ಎಂದಿರುವಲ್ಲಿ ಕ್ಲಿಕ್ ಮಾಡಿ. - ನಂತರ ಮತ್ತೊಂದು ವೆಬ್‌ಪುಟ ತೆರೆಯುತ್ತದೆ. - ಈ ಹಂತದಲ್ಲಿ ' MVI RPC, HK Posts' ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ.
- ಆಯೋಗದ ಹೊಸ ಜಾಬ್ ಅಪ್ಲಿಕೇಶನ್‌ ವೆಬ್‌ಪೇಜ್‌ ತೆರೆಯುತ್ತದೆ. ಲಿಂಕ್‌ಗಾಗಿ ಕ್ಲಿಕ್ ಮಾಡಿ- ಕೆಪಿಎಸ್‌ಸಿ ವೆಬ್‌ನಲ್ಲಿ ಮೊದಲೇ ರಿಜಿಸ್ಟ್ರೇಷನ್‌ ಮಾಡಿದ್ದಲ್ಲಿ, ಯೂಸರ್ ನೇಮ್, ಪಾಸ್‌ವರ್ಡ್‌ ನೀಡಿ ಲಾಗಿನ್ ಆಗಲು, 'Login' ಬಟನ್‌ ಆಯ್ಕೆ ಮಾಡಿ ಕ್ಲಿಕ್ ಮಾಡಿ.- ನಂತರ ಅರ್ಜಿ ಸಲ್ಲಿಸಿ. - ಇದೇ ಮೊದಲ ಬಾರಿ ಕೆಪಿಎಸ್‌ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವವರು ನೀವಾಗಿದ್ದಲ್ಲಿ, 'New Registration' ಎಂದಿರುವಲ್ಲಿ ಕ್ಲಿಕ್ ಮಾಡಿ. - ಬೇಸಿಕ್ ವಿವರಗಳನ್ನು ನೀಡಿ, ರಿಜಿಸ್ಟ್ರೇಷನ್‌ ಮಾಡಿಕೊಳ್ಳಿ. ನಂತರ ಪ್ರೊಫೈಲ್‌ ಕ್ರಿಯೇಟ್‌ ಮಾಡಿ.- ಅಗತ್ಯ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.
- ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.

READ ON APP