Hero Image

500 ಶಿಕ್ಷಕರ ಹುದ್ದೆಗೆ ನವೋದಯ ವಿದ್ಯಾಲಯ ಸಮಿತಿ ಇಂದ ಅರ್ಜಿ ಆಹ್ವಾನ: ಸಂದರ್ಶನದ ಮೂಲಕ ಆಯ್ಕೆ

ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಡಿಯ ನವೋದಯ ವಿದ್ಯಾಲಯ ಸಮಿತಿಯ ವಸತಿ ಸಹಿತ ಸಹ-ಶಿಕ್ಷಣ ವ್ಯವಸ್ಥೆ ಶಾಲೆಗಳು) ಖಾಲಿ ಇರುವ ಟಿಜಿಟಿ, ಪಿಜಿಟಿ ಶಿಕ್ಷಕರ ನೇಮಕಾತಿಗಾಗಿ ನೋಟಿಫಿಕೇಶನ್‌ ಬಿಡುಗಡೆ ಆಗಿದೆ. ಬಿ.ಇಡಿ ಶಿಕ್ಷಣ ಮತ್ತು ಸ್ನಾತಕೋತ್ತರ ಪದವಿ ಜತೆಗೆ, ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸ್‌ ಮಾಡಿರುವ ಅಭ್ಯರ್ಥಿಗಳಿಗೆ, ಶಿಕ್ಷಕರಾಗುವ ಕನಸನ್ನು ನನಸು ಮಾಡಿಕೊಳ್ಳಲು, ಅದರಲ್ಲೂ ಎನ್‌ವಿಎಸ್‌ನಲ್ಲಿ ಹುದ್ದೆ ಪಡೆಯಲು ಆಸಕ್ತರಾಗಿದ್ದಲ್ಲಿ ಇದು ಗುಡ್‌ ನ್ಯೂಸ್‌.
ಒಟ್ಟು 500 ಶಿಕ್ಷಕರ ಹುದ್ದೆಗಳಿಗೆ ನವೋದಯ ವಿದ್ಯಾಲಯ ಸಮಿತಿ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತರು ಕೆಳಗಿನ ಹೆಚ್ಚಿನ ವಿವರಗಳನ್ನು ಒಮ್ಮೆ ಓದಿಕೊಂಡು ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ ಟ್ರೈನ್ಡ್‌ ಗ್ರಾಜುಯೇಟ್ ಟೀಚರ್ ಹುದ್ದೆಗಳ ಸಂಖ್ಯೆ: 283. ಸ್ನಾತಕೋತ್ತರ ಪದವೀಧರ ಟೀಚರ್‌ ಹುದ್ದೆಗಳ ಸಂಖ್ಯೆ: 217. ಅರ್ಹತೆಗಳು ಟಿಜಿಟಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಉದ್ಯೋಗಾಕಾಂಕ್ಷಿಗಳು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಬಿ.ಇಡಿ ಶಿಕ್ಷಣದ ಜತೆಗೆ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸ್‌ ಮಾಡಿರಬೇಕು. ಪಿಜಿಟಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಉದ್ಯೋಗಾಕಾಂಕ್ಷಿಗಳು ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಬಿ.ಇಡಿ ಶಿಕ್ಷಣದ ಜತೆಗೆ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 50 ವರ್ಷ ಮೀರಿರಬಾರದು. ಎನ್‌ವಿಎಸ್‌ ಮಾಜಿ ಶಿಕ್ಷಕರಾಗಿದ್ದಲ್ಲಿ ಗರಿಷ್ಠ 65 ವರ್ಷ ಮೀರಿರಬಾರದು. UPSC CSE 2023 ಫಲಿತಾಂಶದ ಕಟ್‌ಆಫ್‌ ಅಂಕ ಪ್ರಕಟ: ಯಾವ ಹುದ್ದೆಗೆ ಎಷ್ಟು ಅಭ್ಯರ್ಥಿಗಳ ಆಯ್ಕೆ? ಡೀಟೇಲ್ಸ್‌ ಇಲ್ಲಿದೆ.. ಯಾವೆಲ್ಲ ವಿಷಯಗಳಲ್ಲಿ ಪಿಜಿಟಿ, ಟಿಜಿಟಿ ಹುದ್ದೆಗಳ ನೇಮಕ? ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಹಿಂದಿ, ದೈಹಿಕ ಶಿಕ್ಷಣ, ಸಂಗೀತ, ಕಲೆ, ಕಂಪ್ಯೂಟರ್ ಸೈನ್ಸ್‌, ಒರಿಯಾ, ಗ್ರಂಥಾಲಯ ವಿಷಯ, ವೊಕೇಷನಲ್ ಟೀಚರ್. ಪಿಜಿ ಟೀಚರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಕ್ಲಿಕ್ ಮಾಡಿ. ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್‌ಗಾಗಿ ಕ್ಲಿಕ್ ಮಾಡಿ. ಮೇಲೆ ನೀಡಲಾದ ಲಿಂಕ್‌ಗಳನ್ನು ಕ್ಲಿಕ್ ಮಾಡಿ. ಯಾವೆಲ್ಲ ವಿಷಯಕ್ಕೆ ಟೀಚರ್‌ ಹುದ್ದೆಗಳಿಗೆ ಎಂಬುದನ್ನು ಮೊದಲು ಚೆಕ್‌ ಮಾಡಿಕೊಳ್ಳಿ. ಮುಂದುವರೆದು ನಿಮ್ಮ ಇ-ಮೇಲ್‌ ವಿಳಾಸದೊಂದಿಗೆ ವೈಯಕ್ತಿಕ ಮಾಹಿತಿಗಳು, ಶೈಕ್ಷಣಿಕ ಮಾಹಿತಿಗಳನ್ನು ನೀಡಿ, ಹುದ್ದೆಗೆ ನಿಯೋಜನೆಗೊಳ್ಳಲು ಆಸಕ್ತಿ ಇರುವ ಪ್ರದೇಶ ಆಯ್ಕೆ ಮಾಡಿಕೊಂಡು, ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 26, 2024 ರ ರಾತ್ರಿ 11 ಗಂಟೆವರೆಗೆ. ನೇರ ಸಂದರ್ಶನದ ಸಂಭಾವ್ಯ ದಿನಾಂಕ : 16-05-2024 ಮಾಸಿಕ ಸಂಭಾವನೆ ವಿವರ
ಪಿಜಿ ಟೀಚರ್‌ ಹುದ್ದೆಗಳಿಗೆ ಸಂಭಾವನೆ: Rs.35,750 (Hard Station Rs.42,250.)ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್‌ ಹುದ್ದೆಗಳಿಗೆ ಸಂಭಾವನೆ: Rs.34,125. ( Rs.40,625. ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಧಾನ: ನೇರ ಸಂದರ್ಶನದ ಮೂಲಕ. ಸಂದರ್ಶನಕ್ಕೆ ಶಾರ್ಟ್‌ ಲಿಸ್ಟ್‌ ಆದವರಿಗೆ ಇ-ಮೇಲ್‌ ಮೂಲಕ ಅಥವಾ ಕರೆ ಮೂಲಕ ಎನ್‌ವಿಎಸ್‌ ಸಂಪರ್ಕ ಮಾಡಿ, ಆಹ್ವಾನ ನೀಡಲಿದೆ. ಹುದ್ದೆಗಳ ನೇಮಕಾತಿ ಸ್ಥಳ : ಮಧ್ಯಪ್ರದೇಶ, ಛತ್ತೀಸಗಡ, ಒಡಿಶಾ ರಾಜ್ಯಗಳ ಜವಾಹರ ನವೋದಯ ವಿದ್ಯಾಲಯಗಳು.

READ ON APP