Hero Image

ಕೆಇಎ ಇಂದ 5 ನಿಗಮ, ಮಂಡಳಿಗಳ ಹುದ್ದೆ ನೇಮಕ: ಪರೀಕ್ಷೆ ಫಲಿತಾಂಶ, ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2023ನೇ ಸಾಲಿನಲ್ಲಿ ಅಧಿಸೂಚಿಸಿದ್ದ ವಿವಿಧ 5 ನಿಗಮ, ಮಂಡಳಿಗಳ 600 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಸಂಬಂಧ, ಇದೀಗ ಪರೀಕ್ಷೆಗಳ ಫಲಿತಾಂಶ ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕೆಳಗಿನ ಇಲಾಖೆಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡವರು ಈಗ ತಮ್ಮ ತಾತ್ಕಾಲಿಕ ಅಂಕಪಟ್ಟಿಯನ್ನು ಚೆಕ್‌ ಮಾಡಿಕೊಳ್ಳಬಹುದು.
ಹಾಗೂ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಆನ್‌ಲೈನ್‌ ಮೂಲಕವೇ ಸಲ್ಲಿಸಬಹುದಾಗಿದೆ. ಈ ಕೆಳಗಿನ ನಿಗಮ, ಮಂಡಳಿಗಳ ಹುದ್ದೆಗಳಿಗೆ ಪರೀಕ್ಷೆಯ ತಾತ್ಕಾಲಿಕ ಅಂಕಪಟ್ಟಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಆಕ್ಷೇಪಣೆ ಅರ್ಜಿ ಆಹ್ವಾನ ಕೆಇಎ ಪ್ರಸ್ತುತ ಬಿಡುಗಡೆ ಮಾಡಿರುವ ಸದರಿ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ kea2023exam@gmail.com ಗೆ ಇ-ಮೇಲ್ ಅನ್ನು ದಿನಾಂಕ 29-04-2024 ರ ಒಳಗಾಗಿ ಕಳುಹಿಸುವ ಮೂಲಕ ಸಲ್ಲಿಸಬಹುದು. ಸೂಚನೆ : ದಿನಾಂಕ 22-04-2024 ರಂದು ಪ್ರಕಟಿಸಿರುವ ಅಂಕಪಟ್ಟಿಗೆ ಆಕ್ಷೇಪಣೆಗಳು ಇದ್ದಲ್ಲಿ ಮಾತ್ರ ಇ-ಮೇಲ್‌ ಮೂಲಕ ಸಲ್ಲಿಸುವುದು. ತಾತ್ಕಾಲಿಕ ಅಂಕಪಟ್ಟಿಗಳನ್ನು ಚೆಕ್‌ ಮಾಡುವುದು ಹೇಗೆ? - ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ. - ತೆರೆದ ವೆಬ್‌ಸೈಟ್‌ನಲ್ಲಿ ನೇಮಕಾತಿ >> ಕೆಎಸ್‌ಡಿಸಿ/ಕೆಎಫ್‌ಸಿಎಸ್‌ಸಿ/ ಕೆಬಿಸಿಡಬ್ಲ್ಯೂಬಿ / ಎಂಎಸ್‌ಐಎಲ್‌-2023' ಆಯ್ಕೆ ಮಾಡಿ ಕ್ಲಿಕ್ ಮಾಡಿ. - ತೆರೆದ ವೆಬ್‌ಪೇಜ್‌ನಲ್ಲಿ ಎರಡನೇ ಲಿಂಕ್‌ ಕ್ಲಿಕ್ ಮಾಡಿ. - ಇತ್ತೀಚೆಗೆ ಪ್ರಕಟಿತವಾದ ಮಂಡಳಿ ಹಾಗೂ ಹುದ್ದೆವಾರು ತಾತ್ಕಾಲಿಕ ಅಂಕಪಟ್ಟಿ ಲಿಂಕ್ ಇರುತ್ತದೆ. - ನೀವು ಪರೀಕ್ಷೆ ಬರೆದ ಹುದ್ದೆಯ ಲಿಂಕ್‌ ಕ್ಲಿಕ್ ಮಾಡಿ, ಅಂಕಗಳನ್ನು ಚೆಕ್‌ ಮಾಡಿಕೊಳ್ಳಬಹುದು. KPSC ಇಂದ ಈವರೆಗೆ 10 ಅಧಿಸೂಚನೆಗಳು ಪ್ರಕಟ: ಯಾವ್ಯಾವ ಹುದ್ದೆಗಳಿವೆ, ಅರ್ಜಿ ಸಲ್ಲಿಕೆ ಯಾವಾಗ ತಿಳಿಯಿರಿಯಾವೆಲ್ಲ ನಿಗಮ, ಮಂಡಳಿಗಳಲ್ಲಿ ಯಾವೆಲ್ಲ ಎಷ್ಟು ಹುದ್ದೆಗಳಿಗೆ ಈ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬುದನ್ನು ಕೆಳಗಿನಂತೆ ತಿಳಿಯಬಹುದು. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
ಸಹಾಯಕ ವ್ಯವಸ್ಥಾಪಕರು : 10ಗುಣಮಟ್ಟ ನಿರೀಕ್ಷಕರು : 23ಹಿರಿಯ ಸಹಾಯಕರು (ಲೆಕ್ಕ): 33ಹಿರಿಯ ಸಹಾಯಕರು: 57ಕಿರಿಯ ಸಹಾಯಕರು: 263ಒಟ್ಟು ಹುದ್ದೆಗಳು : 386 ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹುದ್ದೆಗಳು ಕಲ್ಯಾಣ ಅಧಿಕಾರಿ : 12ಕ್ಷೇತ್ರ ನಿರೀಕ್ಷಕರು : 60 ಪ್ರಥಮ ದರ್ಜೆ ಸಹಾಯಕರು: 12ಆಪ್ತ ಸಹಾಯಕರು : 02 ದ್ವಿತೀಯ ದರ್ಜೆ ಸಹಾಯಕರು: 100. ಒಟ್ಟು ಹುದ್ದೆಗಳು : 186 ಡಿಗ್ರಿ ಅರ್ಹತೆಯ ಗ್ರೂಪ್‌ ಸಿ ಹುದ್ದೆಗಳಿಗೆ KPSC ಅಧಿಸೂಚನೆ: ವಿವಿಧ ಇಲಾಖೆಗಳಲ್ಲಿವೆ ಜಾಬ್‌ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ'ದ ಹುದ್ದೆಗಳು ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಗ್ರೂಪ್‌ ಬಿ : 4ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)-ಗ್ರೂಪ್‌ ಬಿ : 2ಆಪ್ತ ಕಾರ್ಯದರ್ಶಿ - ಗ್ರೂಪ್ ಸಿ : 1ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್‌ ಸಿ : 4ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ : 3ಸಹಾಯಕರು (ತಾಂತ್ರಿಕ) ಗ್ರೂಪ್‌ ಸಿ: 6ಸಹಾಯಕರು (ತಾಂತ್ರಕೇತರ) ಗ್ರೂಪ್ ಸಿ : 6 ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್'ನ ಹುದ್ದೆಗಳು ಸಹಾಯಕ ವ್ಯವಸ್ಥಾಪಕರು : 23ಮೇಲ್ವಿಚಾರಕರು : 23ಪದವೀಧರ ಗುಮಾಸ್ತರು : 6ಗುಮಾಸ್ತರು : 14ಲೆಕ್ಕಗುಮಾಸ್ತರು : 06ಸೇಲ್ಸ್‌ ಇಂಜಿನಿಯರ್ : 04ಸೇಲ್ಸ್‌ ಮೇಲ್ವಿಚಾರಕರು: 19 ಮಾರಾಟ ಪ್ರತಿನಿಧಿ : 6

READ ON APP