Hero Image

454 ಸಿಪಿಸಿ, 420 ಎಪಿಸಿ ಕಾನ್ಸ್ಟೇಬಲ್ ನೇಮಕ: ವೈದ್ಯಕೀಯ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಬಿಡುಗಡೆ

ರಾಜ್ಯ ಪೊಲೀಸ್‌ ಇಲಾಖೆಯ ಕಲ್ಯಾಣ-ಕರ್ನಾಟಕ ಪ್ರದೇಶದ ಪೊಲೀಸ್‌ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) ಮತ್ತು (ತೃತೀಯಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ - 454 ಖಾಲಿ ಹುದ್ದೆಗಳ ನೇರ ನೇಮಕಾತಿ ಹಾಗೂ 420 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ (ಸಿಎಆರ್‌-ಡಿಎಆರ್) ಹುದ್ದೆಗಳಿಗೆ 2022-23 ನೇ ಸಾಲಿನಲ್ಲಿ ಅಧಿಸೂಚನೆ ಪ್ರಕಟಿಸಿತ್ತು. ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಈಗ ಕೊನೆ ಹಂತದಲ್ಲಿದ್ದು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಪ್ರಸ್ತುತ ವಿಜಯನಗರ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸ್‌ ಇಲಾಖೆ ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆ, ಪಿಎಸ್‌ಟಿ, ಪಿಇಟಿ ಪರೀಕ್ಷೆಗಳನ್ನು ಬರೆದು ಈಗ ಮೆಡಿಕಲ್‌ ಟೆಸ್ಟ್‌ಗೆ ಅರ್ಹರಾದವರು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಪ್ರವೇಶ ಪತ್ರದಲ್ಲಿ ನಿಗದಿತ ದಿನಾಂಕದಂದು, ನಿಗದಿತ ಸ್ಥಳಕ್ಕೆ ತಪ್ಪದೇ ಹಾಜರಾಗುವ ಮೂಲಕ ಮೆಡಿಕಲ್ ಟೆಸ್ಟ್‌ ಪೂರ್ಣಗೊಳಿಸಿಕೊಳ್ಳಿ. ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಲು ಕ್ಲಿಕ್ ಮಾಡಿ
ಪ್ರವೇಶ ಪತ್ರ ಡೌನ್‌ಲೋಡ್‌ ಮಾಡುವ ವಿಧಾನ - ಕೆಎಸ್‌ಪಿ ಎಪಿಸಿ ಹುದ್ದೆಗಳ ನೇಮಕಾತಿ ಪೋರ್ಟಲ್ https://cpc454.ksp-recruitment.in/# ಗೆ ಭೇಟಿ ನೀಡಿ. - ತೆರೆದ ವೆಬ್‌ಪೇಜ್‌ನಲ್ಲಿ 'My Application' ಎಂದಿರುವಲ್ಲಿ ಕ್ಲಿಕ್ ಮಾಡಿ. - ಹೊಸ ವೆಬ್‌ಪೇಜ್‌ ತೆರೆಯುತ್ತದೆ. ಅಪ್ಲಿಕೇಶನ್‌ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆಗಿ. - ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ಅಭ್ಯರ್ಥಿಗಳು ಸಹ ವೆಬ್‌ಸೈಟ್‌ https://apc420.ksp-recruitment.in/ ಗೆ ಭೇಟಿ ನೀಡಿ ಮೇಲಿನ ವಿಧಾನಗಳನ್ನು ಅನುಸರಿಸಿ ಅಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.ಅಭ್ಯರ್ಥಿಗಳು ಮೆಡಿಕಲ್ ಟೆಸ್ಟ್‌ ಅಡ್ಮಿಟ್‌ ಕಾರ್ಡ್‌ ನಲ್ಲಿ ನೀಡಲಾದ ಸೂಚನೆಗಳನ್ನು ಓದಿಕೊಂಡು, ಸೂಚಿಸಲಾದ ದಾಖಲೆಗಳೊಂದಿಗೆ ಹಾಜರಾಗಬೇಕಿರುತ್ತದೆ.

READ ON APP