Hero Image

ಯುಪಿಎಸ್ಸಿ ಅಧಿಸೂಚನೆ, ಪರೀಕ್ಷೆಗಳಿಗೆ ಸಂಬಂಧ ಪರಿಷ್ಕೃತ ವಾರ್ಷಿಕ ವೇಳಾಪಟ್ಟಿ ಪ್ರಕಟ

ಕೇಂದ್ರ ಲೋಕಸೇವಾ ಆಯೋಗವು ಪ್ರತಿವರ್ಷವು ಸಹ ತಾನು ನಡೆಸುವ ವಿವಿಧ ನೇಮಕಾತಿಗಳ ಅಧಿಸೂಚನೆ ಬಿಡುಗಡೆ ದಿನಾಂಕ, ಪರೀಕ್ಷೆಗಳ ದಿನಾಂಕಗಳ ಸಂಬಂಧ ಇದೀಗ ಪರಿಷ್ಕೃತ ವಾರ್ಷಿಕ ವೇಳಾಪಟ್ಟಿಯನ್ನು 2024ನೇ ಸಾಲಿನ ವಾರ್ಷಿಕ ವೇಳಾಪಟ್ಟಿಗೆ ಸಂಬಂಧ ಬಿಡುಗಡೆ ಮಾಡಿದೆ. ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಸಿವಿಲ್‌ ಸರ್ವೀಸ್ ಪರೀಕ್ಷೆಗಳು, ಐಇಎಸ್‌, ಐಎಸ್‌ಎಸ್‌, ಇಂಜಿನಿಯರಿಂಗ್ ಸೇವೆಗಳು, ಕಂಬೈನ್ಡ್‌ ಜಿಯೋ ಸೈಂಟಿಸ್ಟ್‌ ಮೇನ್‌ ಪರೀಕ್ಷೆ, ಕಂಬೈನ್ಡ್‌ ಮೆಡಿಕಲ್ ಸರ್ವೀಸ್‌ ಪರೀಕ್ಷೆ, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ ಪರೀಕ್ಷೆ, ಎನ್‌ಡಿಎ, ಎನ್‌ಎ, ಕಂಬೈನ್ಡ್‌ ಡಿಫೆನ್ಸ್‌ ಪರೀಕ್ಷೆ, ಸಿವಿಲ್ ಸರ್ವೀಸ್ ಮೇನ್ಸ್ ಪರೀಕ್ಷೆ, ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆ, ಎಸ್‌ಒ, ಸ್ಟೆನೋಗ್ರಾಫರ್‌, ಇತರೆ ಹಲವು ಪರೀಕ್ಷೆಗಳ ಅಧಿಸೂಚನೆಗಳು, ಪರೀಕ್ಷೆಗಳ ದಿನಾಂಕಗಳಿಗೆ ಸಂಬಂಧಿತ ಪರಿಷ್ಕೃತ ವಾರ್ಷಿಕ ವೇಳಾಪಟ್ಟಿಯನ್ನು ಈಗ ಯುಪಿಎಸ್‌ಸಿ ಬಿಡುಗಡೆ ಮಾಡಿದೆ.
ಈ ಯಾವುದೇ ಸೇವೆಗಳಲ್ಲಿ ಆಸಕ್ತಿ ಇರುವವರು ದಿನಾಂಕಗಳ ಕುರಿತು ವಿಶೇಷವಾಗಿ ಚೆಕ್‌ ಮಾಡಿಕೊಳ್ಳಲು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಥವಾ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿಕೊಳ್ಳಬಹುದು. ಏಪ್ರಿಲ್, ಮೇ, ಜೂನ್‌ ತಿಂಗಳುಗಳಲ್ಲಿ ಭಾರತ ಲೋಕಸಭಾ ಚುನಾವಣೆ ಚಟುವಟಿಕೆಗಳು ನಿಗದಿಯಾಗಿರುವ ಕಾರಣ, ಯುಪಿಎಸ್‌ಸಿ ತನ್ನ ಪರೀಕ್ಷಾ ಸುಗಮ ಚಟುವಟಿಕೆಗಳಿಗಾಗಿ ವಾರ್ಷಿಕ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಿದೆ. ಅದನ್ನು ಅಭ್ಯರ್ಥಿಗಲು ಚೆಕ್‌ ಮಾಡಿಕೊಳ್ಳಬೇಕಾಗಿದೆ. UPSC Revised Annual Calendar 2024 ಯುಪಿಎಸ್‌ಸಿ ಸಿಎಸ್‌ಇ, ಐಎಫ್‌ಎಸ್‌ ಪ್ರಿಲಿಮ್ಸ್‌ ದಿನಾಂಕಗಳು ಮುಂದೂಡಿಕೆ ಕೇಂದ್ರ ಲೋಕಸೇವಾ ಆಯೋಗವು 2024ನೇ ಸಾಲಿನ ಸಿವಿಲ್‌ ಸರ್ವೀಸ್‌ ಪ್ರಿಲಿಮ್ಸ್‌ ಪರೀಕ್ಷೆ ಹಾಗೂ ಭಾರತೀಯ ಅರಣ್ಯ ಸೇವೆ ಪ್ರಿಲಿಮ್ಸ್‌ ಪರೀಕ್ಷೆಯನ್ನು ಮೊದಲು 26-05-2024 ರಂದು ನಿಗದಿ ಮಾಡಿತ್ತು.
ಆದರೆ ಈಗ ಜೆನೆರಲ್ ಎಲೆಕ್ಷನ್ ಹಿನ್ನೆಲೆ ಈ ಪ್ರಿಲಿಮ್ಸ್‌ ಪರೀಕ್ಷೆಯನ್ನು ಮುಂದೂಡಿ ದಿನಾಂಕ 16-06-2024 ಕ್ಕೆ ನಿಗದಿ ಮಾಡಿದೆ. ಇದರಿಂದ ಯುಪಿಎಸ್‌ಸಿ ಸಿವಿಲ್ ಸೇವೆಗಳ ಆಕಾಂಕ್ಷಿಗಳು ಉತ್ತಮ ತಯಾರಿಗೆ ಒಂದು ರೀತಿಯಲ್ಲಿ ಹೆಚ್ಚಿನ ಅವಕಾಶ ಪಡೆದಂತೆಯೂ ಆಗಿದೆ.

READ ON APP