Hero Image

KREIS 2024: 6ನೇ ಕ್ಲಾಸ್ ಪ್ರವೇಶ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿ ಪ್ರಕಟ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಸಂಬಂಧ, ಎಂಟ್ರ್ಯಾನ್ಸ್‌ ಎಕ್ಸಾಮ್‌ ಬರೆದ ವಿದ್ಯಾರ್ಥಿಗಳ ಅಂತಿಮ ಮೆರಿಟ್‌ ಪಟ್ಟಿಯನ್ನು ಇದೀಗ ಕೆಇಎ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು / ಅವರ ಪೋಷಕರು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಜಿಲ್ಲೆಯ ಲಿಂಕ್ ಕ್ಲಿಕ್ ಮಾಡಿ ಮೆರಿಟ್‌ ಪಟ್ಟಿ ಚೆಕ್‌ ಮಾಡಿಕೊಳ್ಳಬಹುದು. ಪ್ರಸ್ತುತ ಬಿಡುಗಡೆ ಮಾಡಿರುವ ಕೆಆರ್‌ಇಐಎಸ್‌ ಅಂತಿಮ ಮೆರಿಟ್‌ ಪಟ್ಟಿಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಇ-ಮೇಲ್ keauthority-ka@nic.in ಗೆ ಏಪ್ರಿಲ್ 17, 2024 ರ ಸಂಜೆ 05-00 ಗಂಟೆಯೊಳಗೆ ತಲುಪಿಸಬಹುದು.
ಜಿಲ್ಲಾವಾರು ಅಂತಿಮ ಶ್ರೇಣಿ ಪಟ್ಟಿಯಲ್ಲಿ ವಿದ್ಯಾರ್ಥಿಗಳ STATS ನಂಬರ್, ರಿಜಿಸ್ಟ್ರೇಷನ್ ನಂಬರ್, ವಿದ್ಯಾರ್ಥಿಗಳ ಹೆಸರು, ಲಿಂಗ, ಜನ್ಮ ದಿನಾಂಕ ಮಾಹಿತಿ, ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ರಾಜ್ಯ ಶ್ರೇಣಿಯ ಮಾಹಿತಿಗಳನ್ನು ನೀಡಿದೆ. ಆಕ್ಷೇಪಣೆ ಸ್ವೀಕಾರ ನಂತರ, ಅವುಗಳನ್ನು ಪರಿಶೀಲಿಸಿ ಮುಂದಿನ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಲಿದೆ. ಸಮಾಜ ಕಲ್ಯಾಣ ಇಲಾಖೆಯಡಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ: ಮೊದಲ ಸುತ್ತಿನ ಆಯ್ಕೆಪಟ್ಟಿ ಪ್ರಕಟ KREIS 2024 ಅಂತಿಮ ಮೆರಿಟ್‌ ಪಟ್ಟಿ ಚೆಕ್‌ ಮಾಡುವ ವಿಧಾನ - ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ ವಿಳಾಸ https://cetonline.karnataka.gov.in/kea/ ಕ್ಕೆ ಭೇಟಿ ನೀಡಿ.
- 'ಇತ್ತೀಚಿನ ಪ್ರಕಟಣೆಗಳು' ಅಡಿಯಲ್ಲಿ ಗಮನಿಸಿ. - ಏಪ್ರಿಲ್ 12 ರಂದು ಪ್ರಕಟವಾಗಿರುವ ಜಿಲ್ಲಾವಾರು ಆಯ್ಕೆಪಟ್ಟಿಗಳ ಲಿಂಕ್‌ ಇರುತ್ತದೆ. - ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ. - ಪಿಡಿಎಫ್‌ ಫೈಲ್‌ ಓಪನ್ ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ಹೆಸರು ಇರುವ ಬಗ್ಗೆ ಚೆಕ್‌ ಮಾಡಿಕೊಳ್ಳಿ. ಯಾದಗಿರಿ, ವಿಜಯಪುರ, ವಿಜಯನಗರ, ಉತ್ತರ ಕನ್ನಡ, ಉಡುಪಿ, ತುಮಕೂರು, ಶಿವಮೊಗ್ಗ, ರಾಮನಗರ, ರಾಯಚೂರು, ಮೈಸೂರು, ಮಂಡ್ಯ, ಕೊಪ್ಪಳ, ಕೋಲಾರ, ಕೊಡಗು, ಕಲಬುರಗಿ, ಹಾವೇರಿ, ಹಾಸನ, ಗದಗ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕೋಡಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳ ಪ್ರತ್ಯೇಕ ಅಂತಿಮ ಮೆರಿಟ್‌ ಪಟ್ಟಿಯ ಲಿಂಕ್‌ಗಳನ್ನು ನೀಡಲಾಗಿದೆ.

READ ON APP