Hero Image

2024, 25ನೇ ಸಾಲಿನ ಪ್ರಾಥಮಿಕ, ಪ್ರೌಢ ಶಾಲೆಗಳ ರಜೆ, ಶೈಕ್ಷಣಿಕ ಚಟುವಟಿಕೆಗಳಿಗೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ 2024-25ನೇ ಸಾಲಿನ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆ / ಮಾರ್ಗಸೂಚಿ ಅನುಷ್ಠಾನಗೊಳಿಸುವ ಕುರಿತು ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದೆ. ಕ್ರಿಯಾಯೋಜನೆಯ ಮಾರ್ಗಸೂಚಿಯಲ್ಲಿ ವಾರ್ಷಿಕ / ಮಾಹೆವಾರು ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ) ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ ಸಿಸಿಇ (ಪರೀಕ್ಷೆಗಳು / ಮೌಲ್ಯಾಂಕನ ವಿಶ್ಲೇಷಣೆ) ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ ಸಿದ್ಧಪಡಿಸಲಾಗಿದೆ.
ಒಟ್ಟಾರೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ 2 ವಿಷಯವಾರು ಅಂತಿಮ ವೇಳಾಪಟ್ಟಿ ಬಿಡುಗಡೆ: ಇಲ್ಲಿ ಚೆಕ್‌ ಮಾಡಿಕೊಳ್ಳಿ.. 2024-25ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು ಮೊದಲನೇ ಅವಧಿ : ದಿನಾಂಕ 29-05-2024 ರಿಂದ 02-10-2024 ರವರೆಗೆ.
ಎರಡನೇ ಅವಧಿ: ದಿನಾಂಕ 21-10-2024 ರಿಂದ ದಿನಾಂಕ 10-04-2025 ರವರೆಗೆ. 2024-25ನೇ ಸಾಲಿನ ಶಾಲಾ ರಜಾ ದಿನಗಳು ದಸರಾ ರಜೆ : ದಿನಾಂಕ 03-10-2024 ರಿಂದ 20-10-2024 ರವರೆಗೆ. ಬೇಸಿಗೆ ರಜೆ : ದಿನಾಂಕ 11-04-2025 ರಿಂದ 28-05-2025 ರವರೆಗೆ. 2024-25ನೇ ಸಾಲಿನಲ್ಲಿ ಲಭ್ಯವಿರುವ ಶಾಲಾ ಕರ್ತವ್ಯದ ದಿನಗಳು 244, ಒಟ್ಟು ರಜಾ ದಿನಗಳು 121. ಬೋಧನಾ -ಕಲಿಕಾ ಪ್ರಕ್ರಿಯೆಗೆ 180 ದಿನಗಳು ಉಳಿಯಲಿವೆ. 26 ದಿನಗಳು ಪರೀಕ್ಷೆಗಳು ಮತ್ತು ಮೌಲ್ಯಾಂಕನಕ್ಕಾಗಿ ನಿಗದಿಯಾಗಿವೆ. ಶಾಲಾ ಸ್ಥಳೀಯ ರಜೆಗಳು 04 ಇರಲಿವೆ. ಈ ವೇಳಾಪಟ್ಟಿಗೆ ಅನುಗುಣವಾಗಿ ಹಲವು ಕಾರ್ಯಯೋಜನೆಗಳು, ಮಾರ್ಗಸೂಚಿಗಳು, ನಿರ್ವಹಿಸಬೇಕಾದ ಅಂಶಗಳ ಕುರಿತು ನೋಟಿಸ್‌ ಅನ್ನು ಶಾಲಾ ಶಿಕ್ಷಣ ಹೊರಡಿಸಿದ್ದು, ರಾಜ್ಯದಾದ್ಯಂತ ಎಲ್ಲ ಉಪನಿರ್ದೇಶಕರು (ಶಾಲಾ ಶಿಕ್ಷಣ ಇಲಾಖೆ), ಇತರೆ ಸಂಬಂಧಿಸಿದ ಅಧಿಕಾರಿಗಳು ಪಾಲಿಸುವಂತೆ ತಿಳಿಸಲಾಗಿದೆ.
ಈ ನೋಟಿಸ್‌ ಅನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಚೆಕ್‌ ಮಾಡಬಹುದು.

READ ON APP