Hero Image

UGCET 2024 ವಿದ್ಯಾರ್ಥಿಗಳಿಗಾಗಿ: ಬಿಇ ಪ್ರವೇಶಕ್ಕೆ ಕರ್ನಾಟಕದಲ್ಲಿನ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳು ಇವೆ ನೋಡಿ..

ಕರ್ನಾಟಕದಲ್ಲಿ ವೃತ್ತಿಪರ ಇಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡುವ ಸಂಬಂಧ, ಯುಜಿಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಅವರು ಪಡೆದ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಕಾಲೇಜುಗಳ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಈ ಪ್ರವೇಶ ಪರೀಕ್ಷೆ, ಸೀಟು ಹಂಚಿಕೆ, ಕೌನ್ಸಿಲಿಂಗ್ ಪ್ರಕ್ರಿಯೆಗಳನ್ನು ಪ್ರತಿವರ್ಷವು ನಿರ್ವಹಣೆ ಮಾಡುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ. ಈಗ ಈ ವರ್ಷದ ಯುಜಿಸಿಇಟಿ 2024 ಇದೇ ಏಪ್ರಿಲ್ 18ರಿಂದ 20 ರವರೆಗೆ ನಡೆಯಲಿದೆ.
ನಂತರದಲ್ಲಿ ವಿದ್ಯಾರ್ಥಿಗಳು ಬಿಇ ಕಾಲೇಜುಗಳಿಗೆ ಪ್ರವೇಶ ಪಡೆಯಲು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಬೇಕಾಗುತ್ತದೆ. ಈ ವಿದ್ಯಾರ್ಥಿಗಳಿಗೆಲ್ಲಾ ಮೊದಲನೇ ಟಾಸ್ಕ್‌ ಸಿಇಟಿಯಲ್ಲಿ ಉತ್ತಮ ಅಂಕಪಡೆಯುವುದು. ನಂತರದಲ್ಲಿ ಎರಡನೇ ಟಾಸ್ಕ್‌ ಆಗುವುದು ಕರ್ನಾಟಕದಲ್ಲಿ ಇಂಜಿನಿಯರಿಂಗ್ ಕೋರ್ಸ್‌ ಅಧ್ಯಯನಕ್ಕೆ ಬೆಸ್ಟ್‌ ಬಿಇ ಕಾಲೇಜು ಯಾವುದು ಎಂದು ತಿಳಿದು, ಪ್ರವೇಶಕ್ಕೆ ಮುಂದಾಗುವುದು. ಬಹುಶಃ ಈ ಎರಡನೇ ಟಾಸ್ಕ್‌ ವಿದ್ಯಾರ್ಥಿಗಳ ಪೋಷಕರಿಗೂ ಅನ್ವಯವಾಗುತ್ತದೆ. ಕಾರಣ ತಮ್ಮ ಮಕ್ಕಳನ್ನು ಉತ್ತಮ ಕಾಲೇಜಿಗೆ ಅಡ್ಮಿಷನ್‌ ಮಾಡಿಸಬೇಕು ಎಂಬ ತುಡಿತ ಅವರಿಗೆ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಪೋಷಕರ ಹಾಗೂ ಬಿಇ ಸೇರಲು ಬಯಸುವ ವಿದ್ಯಾರ್ಥಿಗಳ ಚಿಂತೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಕರ್ನಾಟಕದ ಟಾಪ್‌ ಅಂಡ್‌ ಬೆಸ್ಟ್‌ ಇಂಜಿನಿಯರಿಂಗ್ ಕಾಲೇಜುಗಳು ಯಾವುವು ಎಂಬ ಲಿಸ್ಟ್‌ ಅನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಅಂದಹಾಗೆ ಈ ಕಾಲೇಜುಗಳ ಲಿಸ್ಟ್‌ ಅನ್ನು ಭಾರತ ಸರ್ಕರದ ಶಿಕ್ಷಣ ಸಚಿವಾಲಯ 2023 ರಲ್ಲಿ ಬಿಡುಗಡೆ ಮಾಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ರ್ಯಾಂಕಿಂಗ್ ಫ್ರೇಮ್‌ವರ್ಕ್ 2023 ಆಧಾರಿತವಾಗಿ ನೀಡಲಾಗಿದೆ. ಈ ಎನ್‌ಐಆರ್‌ಎಫ್‌ Ranking ಅನ್ನು ಬೋಧನೆ, ಸಂಶೋಧನೆ, ಸಂಪನ್ಮೂಲ ಸಂಗ್ರಹ, ವೃತ್ತಿಪರತೆ ಮತ್ತು ಕಲಿಕೆಯ ಗುಣಮಟ್ಟವನ್ನು ಆಧರಿಸಿ ಕಾಲೇಜುಗಳ ಲಿಸ್ಟ್‌ ಅನ್ನು ಬಿಡುಗಡೆ ಮಾಡಲಾಗುತ್ತದೆ. ಅದರ ಪ್ರಕಾರ 2023ನೇ ಸಾಲಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಟಾಪ್‌ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಅನ್ನು ಇಲ್ಲಿ ನೀಡಲಾಗಿದೆ. ಈ ವರ್ಷ ಬಿಇ'ಗೆ ಸೇರಬೇಕು ಎಂದಿಕೊಂಡಿರುವ ವಿದ್ಯಾರ್ಥಿಗಳು ತಪ್ಪದೇ ಈ ಲಿಸ್ಟ್‌ ಅನ್ನು ಚೆಕ್‌ ಮಾಡಿಕೊಳ್ಳಿ. NIRF Ranking 2023 ಪ್ರಕಾರ ಕರ್ನಾಟಕದ ಟಾಪ್‌ ಇಂಜಿನಿಯರಿಂಗ್ ಕಾಲೇಜುಗಳು ಇವೆ ನೋಡಿ ಸ್ಥಳ - ಸುರತ್ಕಲ್
ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕರ್ನಾಟಕ (NITK) - 12ನೇ ರ‍್ಯಾಂಕ್ ಸ್ಥಳ-ಬೆಳಗಾಂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) - 52ನೇ ರ‍್ಯಾಂಕ್. ಸ್ಥಳ-ಮಣಿಪಾಲ್ ಮಣಿಪಾಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (MIT) - 61ನೇ ರ‍್ಯಾಂಕ್ ಸ್ಥಳ-ಬೆಂಗಳೂರುಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ( IIIT)- 74ನೇ ರ‍್ಯಾಂಕ್ ಸ್ಥಳ-ಬೆಂಗಳೂರು ಎಮ್ ಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (MSRIT)- 78ನೇ ರ‍್ಯಾಂಕ್ ಸ್ಥಳ - ಧಾರವಾಡ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಧಾರವಾಡ - 93ನೇ ರ‍್ಯಾಂಕ್ ಸ್ಥಳ - ಬೆಂಗಳೂರು
ಆರ್.ವಿ. ಕಾಲೇಜ್ ಆಫ್‌ ಇಂಜಿನಿಯರಿಂಗ್ - 96ನೇ ರ‍್ಯಾಂಕ್ 2023ನೇ ಸಾಲಿನ ಎನ್‌ಐಆರ್‌ಎಫ್‌ ರ‍್ಯಾಂಕಿಂಗ್ ಪ್ರಕಾರ ಈ ಮೇಲಿನ ಶಿಕ್ಷಣ ಸಂಸ್ಥೆಗಳು ಟಾಪ್‌ 100 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಕರ್ನಾಟಕ ಬೆಸ್ಟ್‌ ಇಂಜಿನಿಯರಿಂಗ್ ಕಾಲೇಜುಗಳಾಗಿದ್ದು, ಅವುಗಳ ರ‍್ಯಾಂಕ್ ಅನ್ನು ಸಹ ನೀವು ನೋಡಬಹುದು. ಮೇಲಿನ ಕಾಲೇಜುಗಳ ಮಾತ್ರವಲ್ಲದೇ ಇತರೆ ಯಾವೆಲ್ಲ ಬಿಇ ಕಾಲೇಜುಗಳು ಕರ್ನಾಟಕ ಬೆಸ್ಟ್‌ ಎಂದು ತಿಳಿಯಬೇಕು ಎಂದರೆ ಕೆಳಗಿನಂತೆ ಒಮ್ಮೆ ಕಣ್ಣಾಡಿಸಿ. ಇವುಗಳ ಸಹ 2023 ಕ್ಕೂ ಹಿಂದಿನ ವರ್ಷಗಳಲ್ಲಿ ಎನ್‌ಐಆರ್‌ಎಫ್‌ ರ‍್ಯಾಂಕ್ ಲಿಸ್ಟ್‌ನಲ್ಲಿ ಹೆಸರು ಪಡೆದಿದ್ದವು. NEET UG 2024 ನಂತರ ಯಾವೆಲ್ಲ ಕೋರ್ಸ್‌, ಯಾವೆಲ್ಲ ಕರಿಯರ್ ಆಯ್ಕೆಗಳಿವೆ? ಸ್ಥಳ-ಬೆಂಗಳೂರು
ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ( IIIT)ಬಿ.ಎಂ.ಎಸ್‌. ಇಂಜಿನಿಯರಿಂಗ್ ಕಾಲೇಜು ಆರ್.ವಿ. ಕಾಲೇಜ್ ಆಫ್‌ ಇಂಜಿನಿಯರಿಂಗ್ ಪಿಇಎಸ್‌ ವಿಶ್ವವಿದ್ಯಾಲಯ, ಬೆಂಗಳೂರು ಜೈನ್‌ ವಿಶ್ವವಿದ್ಯಾಲಯ, ಬೆಂಗಳೂರು ಸ್ಥಳ-ತುಮಕೂರುಸಿದ್ದಗಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (SIT) ಈ ಹಿಂದಿನ ಎನ್‌ಐಆರ್‌ಎಫ್‌ ರ‍್ಯಾಂಕಿಂಗ್ ಲಿಸ್ಟ್‌ ಪ್ರಕಾರ ಮೈಸೂರಿನಲ್ಲಿರುವ ಬೆಸ್ಟ್‌ ಇಂಜಿನಿಯರಿಂಗ್ ಕಾಲೇಜುಗಳ ಲಿಸ್ಟ್‌ ಇಲ್ಲಿದೆ ನೋಡಿ. ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಪ್‌ ಇಂಜಿನಿಯರಿಂಗ್ (ಎನ್‌ಐಇ) ಜೆಎಸ್‌ಎಸ್‌ ಸೈನ್ಸ್‌ ಅಂಡ್ ಟೆಕ್ನಾಲಜಿ ಯುನಿವರ್ಸಿಟಿ. ಜೆಇಇ ಮೇನ್‌ ಫಲಿತಾಂಶದ ನಂತರ ಮುಂದಿನ ಆಯ್ಕೆಗಳೇನು?.., ಇಲ್ಲಿದೆ ಮಾಹಿತಿCareer360 ರ‍್ಯಾಂಕಿಂಗ್ ಪ್ರಕಾರ AAAA, AA+, AAA+ ಶ್ರೇಣಿಗಳನ್ನು ಪಡೆದ ಮೈಸೂರಿನ ಬೆಸ್ಟ್‌ ಬಿಇ ಕಾಲೇಜುಗಳು ವಿದ್ಯಾವರ್ಧಕ ಕಾಲೇಜ್‌ ಆಫ್‌ ಇಂಜಿನಿಯರಿಂಗ್, ಮೈಸೂರು. ಜಿಎಸ್‌ಎಸ್‌ಎಸ್‌ ಇನ್‌ಸ್ಟಿಟ್ಯೂಟ್ ಆಫ್‌ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವೂಮೆನ್, ಮೈಸೂರು. ವಿದ್ಯಾ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್‌ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮೈಸೂರು. ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್, ಮೈಸೂರು. ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್, ಮೈಸೂರು. ಮೈಸೂರು ವಿಶ್ವವಿದ್ಯಾಲಯ ಜೆಎಸ್‌ಎಸ್‌ ಪಾಲಿಟೆಕ್ನಿಕ್ ಆಫ್‌ ವೂಮೆನ್.

READ ON APP