Hero Image

ಡಿಪ್ಲೊಮ ಸಿಇಟಿ 2024 ವಿಧಾನದ ಕುರಿತು ಮಹತ್ವದ ಮಾಹಿತಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್ ಕೋರ್ಸ್‌ಗಳ ಲ್ಯಾಟರಲ್ ಎಂಟ್ರಿಗೆ ನಡೆಸುವ ಡಿಪ್ಲೊಮ ಸಿಇಟಿ 2024 ವಿಧಾನದ ಕುರಿತು ಮಹತ್ವದ ಮಾಹಿತಿಗಳನ್ನು ಹೊರಡಿಸಲಾಗಿದೆ. ನೀವು ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಾಗಿದ್ದಲ್ಲಿ ತಪ್ಪದೇ ಈ ವಿಷಯವನ್ನು ಕೆಳಗಿನಂತೆ ಓದಿಕೊಳ್ಳಿ. ಡಿಪ್ಲೊಮ ಸಿಇಟಿ ಈ ಬಾರಿಯಿಂದ ಆನ್‌ಲೈನ್‌ ಮೂಲಕ ಹೌದು. ಇಷ್ಟು ವರ್ಷ ಆಫ್‌ಲೈನ್‌ ಮಾದರಿಯಲ್ಲಿ ನಡೆಸಲಾಗುತ್ತಿದ್ದ ಡಿಪ್ಲೊಮ ಸಿಇಟಿ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸಲು ಕೆಇಎ ಮುಂದಾಗಿದೆ.
ಆಫ್‌ಲೈನ್‌ ಪ್ರವೇಶ ಪರೀಕ್ಷೆಯನ್ನು ರದ್ದು ಮಾಡಿದೆ. ಈ ಕುರಿತು ಕೆಇಎ ಅಧಿಸೂಚನೆ ಹೊರಡಿಸಿದೆ. ಇನ್ನುಮುಂದೆ ಡಿಪ್ಲೊಮ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್‌ ಮೂಲಕ ಪ್ರವೇಶ ಪರೀಕ್ಷೆ ಬರೆಯಬೇಕಿರುತ್ತದೆ. ಈ ವರ್ಷದವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಿ, ಆಫ್‌ಲೈನ್‌ ಮಾದರಿಯಲ್ಲಿ ಡಿಪ್ಲೊಮ ಸಾಮಾನ್ಯ ಪ್ರವೇಶಾತಿ ಪರೀಕ್ಷೆ ನಡೆಸುತ್ತಿತ್ತು ಕೆಇಎ. ಆದರೆ ಇತ್ತೀಚೆಗೆ ಕೆಇಎ ಹೊರಡಿಸಿರುವ ಕೆಇಎ ಅಧಿಸೂಚನೆಯಲ್ಲಿ ಆನ್‌ಲೈನ್‌ ಡಿಪ್ಲೊಮ ಸಿಇಟಿ ನಡೆಸುವುದಾಗಿ ಹೇಳಲಾಗಿದೆ.
ಕೆಇಎ ಈ ಮೊದಲು ಎಂಬಿಎ ಪ್ರವೇಶಕ್ಕೆ ಸಿಎಟಿ ಅನ್ನು ಆನ್‌ಲೈನ್‌ ಮೂಲಕ ನಡೆಸುತ್ತಿತ್ತು. ಇದೇ ರೀತಿ ಈಗ ಡಿಪ್ಲೊಮ ಸಿಇಟಿ ಅನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ ಎಂದಿದೆ. ಡಿಪ್ಲೊಮ ಸಿಇಟಿ 2024 ನೋಟಿಫಿಕೇಶನ್‌ ಪ್ರಕಟ: ಅರ್ಜಿ ಆಹ್ವಾನಕೆಇಎ 2024ನೇ ಸಾಲಿನ ಡಿಪ್ಲೊಮ ಸಿಇಟಿ ಪರೀಕ್ಷೆಗೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 20 ರಿಂದ ಮೇ 03 ರವರೆಗೆ ಅರ್ಜಿ ಸ್ವೀಕಾರ ಮಾಡುವುದಾಗಿ ಹೇಳಿದೆ. ಆದರೆ ಡಿಸಿಇಟಿ ಆನ್‌ಲೈನ್‌ ಪರೀಕ್ಷೆ ದಿನಾಂಕ ಮತ್ತು ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.
ವಿಶೇಷ ಸೂಚನೆ ಎರಡನೇ ವರ್ಷದ ಮೂರನೇ ಸೆಮಿಸ್ಟರ್ ಬಿಇ ಕೋರ್ಸ್‌ಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಬಾರಿ ತಮ್ಮ ದಾಖಲೆಗಳನ್ನು ಭೌತಿಕವಾಗಿ ಪ್ರಸ್ತುತ ಪಡಿಸುವ ಅಗತ್ಯವಿಲ್ಲ. ಆನ್‌ಲೈನ್‌ ಮೂಲಕವೇ ದಾಖಲೆ ಪರಿಶೀಲನೆ ಮಾಡಲಿದ್ದು, ಅದಕ್ಕಾಗಿ 'ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡ್ಯೂಲ್' ಆಗಿ ಸಿದ್ಧಪಡಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರಮಾಣಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡುವ ಅಗತ್ಯವಿಲ್ಲ. ಅವುಗಳ ಆರ್‌ಡಿ ನಂಬರ್ ನಮೂದಿಸಿದರೆ ಸಾಕು. ಕೆಇಎ ಎಸ್‌ಎಟಿಎಸ್‌ (ಸ್ಟೂಡೆಂಟ್ ಅಚೀವ್ ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಮತ್ತು ಕಂದಾಯ ಇಲಾಖೆಯ ವೆಬ್‌ ಸರ್ವೀಸ್ ಮೂಲಕ ಆನ್‌ಲೈನ್‌ ನಲ್ಲೇ ದಾಖಲೆಗಳನ್ನು ಪರಿಶೀಲನೆ ನಡೆಸಲಿದೆ.
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸುವ ವೇಳೆ ನೀಡಿದ ಮಾಹಿತಿಗಳೇ ಅಂತಿಮ ಎಂದು ಪರಿಗಣಿಸಲಿದ್ದು, ಈ ಮಾಹಿತಿಯೇ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ಆಧಾರವಾಗಿರುತ್ತದೆ ಹಾಗೂ ಯಾವುದೇ ಕಾರಣಕ್ಕೂ ದಾಖಲಿಸಿದ ಮಾಹಿತಿಯನ್ನು ಬದಲಾಯಿಸಲು ಅವಕಾಶ ಇರುವುದಿಲ್ಲ. ಯುಜಿಸಿಇಟಿ'ಗೆ ಹೋಲಿಕೆ ಮಾಡಿದರೆ ಡಿಸಿಇಟಿಗೆ ಬಹಳ ಕಡಿಮೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಹಾಜರಾಗುತ್ತಾರೆ. ಕಳೆದ ವರ್ಷ ಸುಮಾರು 18,000 ಅಭ್ಯರ್ಥಿಗಳು ಡಿಸಿಇಟಿಗೆ ರಿಜಿಸ್ಟ್ರೇಷನ್‌ ಪಡೆದಿದ್ದರು. ಹಾಗಾಗಿ ಆನ್‌ಲೈನ್‌ನಲ್ಲಿ ಡಿಸಿಇಟಿ ನಡೆಸುವುದು ಸೂಕ್ತವೆಂದು ನಿರ್ಧರಿಸಿದ್ದೇವೆ. ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಯು ಸಹ ಆನ್‌ಲೈನ್‌ ಮೂಲಕವೇ ನಡೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌ ರಮ್ಯಾ ರವರು ತಿಳಿಸಿದ್ದಾರೆ.

READ ON APP