Hero Image

ಕರ್ನಾಟಕ ಯುಜಿಸಿಇಟಿ 2024 ಬೆಲ್ ಸಮಯ ವಿಷಯವಾರು ಬಿಡುಗಡೆ: ಇಲ್ಲಿ ಚೆಕ್ ಮಾಡಿಕೊಳ್ಳಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಏಪ್ರಿಲ್ 18, 19 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆ ಬರೆಯುವವರ ಮಾಹಿತಿಗಾಗಿ ವಿಷಯವಾರು ಬೆಲ್‌ ಸಮಯವನ್ನು ಬಿಡುಗಡೆ ಮಾಡಲಾಗಿದೆ. ಸಿಇಟಿ-2024 ರ ಪ್ರವೇಶ ಪತ್ರವನ್ನು ಈಗಾಗಲೇ ಪ್ರಾಧಿಕಾರದ ಲಾಗಿನ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದನ್ನು ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಿಕೊಂಡು, ಜತೆಗೆ ಮಾನ್ಯತೆ ಇರುವ ಗುರುತಿನ ಚೀಟಿಯನ್ನು ತೋರಿಸಿ ಪರೀಕ್ಷಾ ಕೊಠಡಿಯೊಳಗೆ ಹಾಜರಾಗಬೇಕು.
ಸಾಮಾನ್ಯ ಪ್ರವೇಶ ಪರೀಕ್ಷೆ-2024 ವೇಳಾಪಟ್ಟಿ ಮೊದಲನೇ ಸೆಷನ್‌ ಪರೀಕ್ಷೆಗಳಿಗೆ ಮೊದಲ ಬೆಲ್‌ ಬೆಳಿಗ್ಗೆ 10-20 ಕ್ಕೆ ಆಗುತ್ತದೆ. ಎರಡನೇ ಬೆಲ್ 10-30 ಕ್ಕೆ ಆಗಲಿದ್ದು ಇದು ಪರೀಕ್ಷೆ ಪ್ರಶ್ನೆ ಪತ್ರಿಕಾ ಲಕೋಟೆಯನ್ನು ಕೊಠಡಿಯೊಳಗೆ ತಂದುಕೊಂಡುವ ಸಮಯ. ಮೂರನೇ ಬೆಲ್ 10-40 ಕ್ಕೆ ಆಗಲಿದ್ದು, ಈ ಸಮಯದಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಮೊದಲ ಸೆಷನ್‌ ಕೊನೆಯ ಬೆಲ್ ಬೆಳಿಗ್ಗೆ 11-50 ಆಗಲಿದ್ದು ಪರೀಕ್ಷೆ ಮುಕ್ತಾಯದ ಸಮಯ ಇದಾಗಿದೆ. ಇದೇ ರೀತಿ ಮಧ್ಯಾಹ್ನದ ಸೆಷನ್‌ಗೂ ಸಹ ಪರೀಕ್ಷೆ ಬೆಲ್‌ ಸಮಯವನ್ನು ಕೆಇಎ ಬಿಡುಗಡೆ ಮಾಡಿದೆ. ಮಧ್ಯಾಹ್ನದ ಸೆಷನ್‌ ಮೊದಲ ಬೆಲ್ 02-20 ಕ್ಕೆ ಆಗಲಿದೆ.
ಕೊನೆಯ ಬೆಲ್ 03-50ಕ್ಕೆ ಆಗಲಿದೆ. ಈ ಪರೀಕ್ಷೆಗಳ ನಡುವೆ ಕೊನೆ 30 ನಿಮಿಷದಲ್ಲಿ ಮೊದಲ ಎಚ್ಚರಿಕೆ ಬೆಲ್‌ ಆಗಲಿದೆ. ನಂತರ 10 ನಿಮಿಷಗಳಿಗೊಮ್ಮೆ ಎರಡು ಎಚ್ಚರಿಕೆ ಬೆಲ್‌ ಆಗಲಿವೆ. ಸಿಇಟಿ ಬೆಲ್‌ ಸಮಯದ ನೋಟಿಸ್‌ಗಾಗಿ ಕ್ಲಿಕ್ ಮಾಡಿ ಅಭ್ಯರ್ಥಿಗಳು ಯುಜಿಸಿಇಟಿ ಪರೀಕ್ಷಾ ಕೊಠಡಿಯಲ್ಲಿ ಪ್ರಾಧಿಕಾರ ನಿಗದಿಪಡಿಸಿದ ಸೂಚನೆಗಳು, ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಬೇಕು. ಗಲಾಟೆ ಮಾಡುವುದು, ಪುಸ್ತಕ ಚೀಟಿ ಇತ್ಯಾದಿ ಬಳಕೆ, ಇತರ ಅಭ್ಯರ್ಥಿಗಳ ಜತೆ ಮಾತನಾಡುವುದು ಎಲ್ಲವೂ ಸಹ ಅಭ್ಯರ್ಥಿಗಳ ವಿರುದ್ಧ ಶಿಸ್ತು ಕ್ರಮ ಮತ್ತು ಅಪರಾಧ ಮೊಕದ್ದಮೆಗೆ ಒಳಪಡುವುದು.

READ ON APP