Hero Image

ಸಂಜು ಮತ್ತು ಗೀತಾ ಲವ್ ಸಾಂಗ್ಗೆ ಖರ್ಚಾಯ್ತು ಬರೋಬ್ಬರಿ ₹50 ಲಕ್ಷ!

ಕನ್ನಡ ಚಿತ್ರರಂಗದಲ್ಲಿ 'ಸಂಜು ವೆಡ್ಸ್‌ ಗೀತಾ' ಸಿನಿಮಾ ಅದ್ಭುತ ಪ್ರೇಮಕಥೆಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಈ ಸಿನಿಮಾದ ಮುಂದುವರಿದ ಭಾಗ 'ಸಂಜು ವೆಡ್ಸ್‌ ಗೀತಾ 2' ಈಗ ಆಗುತ್ತಿದೆ. ಆರಂಭದಿಂದಲೂ ಹಲವು ಕಾರಣಗಳಿಂದ ಈ ಸಿನಿಮಾ ಸುದ್ದಿ ಮಾಡುತ್ತಿದೆ. ಈಗ ಆ ಸಿನಿಮಾದ ವಿಶೇಷ ಹಾಡೊಂದನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗ ರಚಿತಾ ರಾಮ್ ನಾಯಕಿಒಂದು ಪ್ರೇಮಕಥೆ ಅಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು.
ಇಂಥ ಕಥೆಗಳನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್‌. ಅದಕ್ಕೆ ‘ಮೈನಾ’, ‘ಸಂಜು ವೆಡ್ಸ್‌ ಗೀತಾ’ಗಿಂತ ಉದಾಹರಣೆ ಬೇಕಿಲ್ಲ. ಈಗ ಹೊಸ ‘ಸಂಜು ವೆಡ್ಸ್‌ ಗೀತಾ 2’ ಮೂಲಕ ಶ್ರೀನಗರ ಕಿಟ್ಟಿ ಜೊತೆ ರಮ್ಯಾ ಬದಲು ರಚಿತಾರಾಮ್‌ ಬಂದಿದ್ದಾರೆ. ಕುಣಿಗಲ್‌ನಲ್ಲಿ ಹಾಡಿನ ಶೂಟಿಂಗ್‌"ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಾವ್ಯವಿದು. ಸದ್ಯ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಈಗಾಗಲೇ ಸ್ವಿಟ್ಜರ್‌ಲೆಂಡ್‌ನಲ್ಲಿ 15 ದಿನ ಹನ್ನೊಂದು ಲೊಕೇಶನ್‌ಗಳಲ್ಲಿ ಮೂರನೇ ಹಂತದ ಚಿತ್ರೀಕರಣ ಮುಗಿಸಿದ್ದು, ಈಗ ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ.
ಕುಣಿಗಲ್‌ನಲ್ಲಿ ಅದ್ಧೂರಿ ಹಾಡೊಂದರ ಶೂಟಿಂಗ್‌ ಮಾಡುತ್ತಿದ್ದೇವೆ. ಐದು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಇದು ಹೈ ಬಜೆಟ್‌ನ ಹಾಡಾಗಿದ್ದು, ಸಿನಿಮಾ ಕೂಡ ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗಿದೆ" ಎಂದಿದ್ದಾರೆ ನಿರ್ದೇಶಕ ನಾಗಶೇಖರ್‌. ಒಂದು ಹಾಡಿಗೆ 45ರಿಂದ 50 ಲಕ್ಷ ರೂ. ವರೆಗೆ ಖರ್ಚು "ಕುಣಿಗಲ್‌ನ ಯುಬಿ ಸ್ಟೆಡ್‌ ಫಾರಂ (ಕುದುರೆ ಫಾರಂ)ನಲ್ಲಿ ಸುಮಾರು ಐದು ದಿನಗಳ ಕಾಲ ಪ್ರಮುಖವಾದ ಕಲರ್‌ಫುಲ್‌ ಹಾಡಿನ ಚಿತ್ರೀಕರಣ ನಡೆಸಲಾಯಿತು. ತುಂಬಾ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಸುಮಾರು 45ರಿಂದ 50 ಲಕ್ಷ ರೂ. ವರೆಗೆ ಖರ್ಚು ಮಾಡಲಾಗಿದೆ. ಇದಕ್ಕಾಗಿ ಕಲರ್‌ಫುಲ್‌ ಸೆಟ್‌ ಹಾಕಲಾಗಿತ್ತು.
ನಾಯಕ ನಟ ಕಿಟ್ಟಿ ಮತ್ತು ರಚಿತಾ ರಾಮ್‌ ಪಾಲ್ಗೊಂಡಿದ್ದರು. ಇದಲ್ಲದೆ ಉಳಿದ ಹಾಡುಗಳನ್ನೂ ಸಹ ಇನ್ನೂ ಅದ್ಧೂರಿಯಾಗಿ ಆಗಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆ ಇಡೀ ಚಿತ್ರ ವೈಭವಯುತವಾಗಿ ಮೂಡಿಬರಬೇಕು. ಅದ್ಭುತ ದೃಶ್ಯಕಾವ್ಯವಾಗಿ ‘ಸಂಜು ವೆಡ್ಸ್‌ ಗೀತಾ’ ಮೂಡಿಬರಬೇಕು ಎಂಬುದೇ ನಮ್ಮ ಉದ್ದೇಶ" ಎಂದು ಹೇಳುತ್ತಾರೆ ನಿರ್ದೇಶಕ ನಾಗಶೇಖರ್‌.ಸಂಗೀತ ನಿರ್ದೇಶಕ ಶ್ರೀಧರ ವಿ ಸಂಭ್ರಮ್‌ 5 ಸುಂದರವಾದ ಹಾಡುಗಳನ್ನು ಕಂಪೋಸ್‌ ಮಾಡಿದ್ದು, ಸೋನು ನಿಗಮ್‌, ಶ್ರೇಯಾ ಘೋಷಾಲ್‌, ಮಂಗ್ಲಿ ಹಾಡಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್‌ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಗಿಚ್ಚಿ ಗಿಲಿಗಿಲಿ ವಿನೋದ್‌ ಅಲ್ಲದೆ ಖಳನಟ ಸಂಪತ್‌ ಕುಮಾರ್‌ ಸೇರಿದಂತೆ ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ.

READ ON APP