Hero Image

ನಿಮ್ಮ ಹೃದಯ ಆರೋಗ್ಯದಿಂದಿರಬೇಕಾದ್ರೆ ಈ ಡೈರಿ ಉತ್ಪನ್ನಗಳನ್ನು ಕಡಿಮೆ ಮಾಡ್ಲೇ ಬೇಕು

ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಅಗತ್ಯವಾಗಿದೆ. ಇದರಲ್ಲಿ ಡೈರಿ ಉತ್ಪನ್ನಗಳೂ ಸಾಕಷ್ಟಿರಬೇಕು. ಇವುಗಳಲ್ಲಿ ಅವಶ್ಯಕ ವಿಟಮಿನ್‌ಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ವಿಟಮಿನ್ ಡಿ ಮೊದಲಾದ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿವೆ. ಆದರೆ, ಎಲ್ಲಾ ಡೈರಿ ಉತ್ಪನ್ನಗಳು ಹೃದಯದ ಆರೋಗ್ಯಕ್ಕೆ ಅಷ್ಟೊಂದು ಉಪಕಾರಿಯಲ್ಲ. ಕೆಲವು ಡೈರಿ ಉತ್ಪನ್ನಗಳಲ್ಲಿ ಸಂತೃಪ್ತ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿದ್ದು ಇವು LDL ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳನ್ನು ಹೆಚ್ಚಿಸುತ್ತವೆ ಮತ್ತು ಹೃದ್ರೋಗ ಎದುರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಕೆಲವು ಡೈರಿ ಉತ್ಪನ್ನವನ್ನು ಮಿತಿಗಿಂತ ಹೆಚ್ಚು ತಿನ್ನಬಾರದು

ಡೈರಿ ಉತ್ಪನ್ನಗಳು ಅಮೂಲ್ಯ ಪೋಷಕಾಂಶಗಳ ಭಂಡಾರವೇ ಆದರೂ, ಕೆಲವು ಉತ್ಪನ್ನಗಳನ್ನು ಮಿತಿಗಿಂತಲೂ ಹೆಚ್ಚಾಗಿ ಸೇವಿಸಿದರೆ ಇದು ಒಳ್ಳೆಯದನ್ನು ಮಾಡುವುದಕ್ಕಿಂತ ಹೃದಯದ ಆರೋಗ್ಯ ಸಂಬಂಧಿತ ತೊಂದರೆಗಳ ಸಾಧ್ಯತೆಯನ್ನು ಹೆಚ್ಚಿಸಬಹುದು. ಇಂದಿನ ಲೇಖನದಲ್ಲಿ ಇಂತಹ ಐದು ಉತ್ಪನ್ನಗಳ ಬಗ್ಗೆ ವಿವರಿಸಲಾಗಿದ್ದು ಇವುಗಳನ್ನು ಆದಷ್ಟೂ ಮಟ್ಟಿಗೆ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಈ ಮೂಲಕ ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.


ಪೂರ್ಣ-ಕೊಬ್ಬಿನ ಉತ್ಪನ್ನಗಳು

ಪೂರ್ಣ ಕೊಬ್ಬಿನ ಹಾಲು, ಚೀಸ್ ಮತ್ತು ಬೆಣ್ಣೆಗಳಲ್ಲಿ ಅಧಿಕ ಪ್ರಮಾಣದ ಸಂತೃಪ್ತ ಕೊಬ್ಬುಗಳಿರುತ್ತವೆ. ಇವು ಹೃದ್ರೋಗಗಳೂ ಎದುರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇವುಗಳ ಬದಲು ಕಡಿಮೆ ಕೊಬ್ಬಿನ ಅಥವಾ ಕೊಬ್ಬು ಇಲ್ಲದ ಉತ್ಪನ್ನಗಳನ್ನೇ ಆಯ್ದುಕೊಳ್ಳುವುದು ಉತ್ತಮ.ಇದನ್ನೂ ಓದಿ:

ಬೇಸಿಗೆಯಲ್ಲಿ ಹೃದಯದ ಆರೋಗ್ಯದಿಂದಿರಬೇಕಾದ್ರೆ ಈ ಸಲಹೆಯನ್ನು ಪಾಲಿಸಿ


ಐಸ್ ಕ್ರೀಂ

ಇದು ರುಚಿಯಾಗಿದ್ದರೂ ಇದರಲ್ಲಿ ಅತಿ ಹೆಚ್ಚಿನ ಮಟ್ಟದ ಸಕ್ಕರೆ, ಸಂತೃಪ್ತ ಕೊಬ್ಬುಗಳು ಮತ್ತು ಕ್ಯಾಲೋರಿಗಳಿವೆ. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಮಾರಕವಾಗಿವೆ. ಇದರ ಬದಲಿಗೆ ಶೀತಲೀಕರಿಸಿದ ಮೊಸರು, ಮನೆಯಲ್ಲಿಯೇ ತಯಾರಿಸಿದ ಹಣ್ಣುಗಳಿಂದ ಮಾಡಲ್ಪಟ್ಟ ಸಿಹಿ ಪದಾರ್ಥಗಳನ್ನು ಸೇವಿಸಿ ಹೃದಯದ ಆರೋಗ್ಯವನ್ನು ಪಣಕ್ಕಿಡದೇ ಜಿಹ್ವಾಚಾಪಲ್ಯವನ್ನು ತಣಿಸಿಕೊಳ್ಳಿ.


ಸಿಹೀಕರಿಸಿದ ಸಾಂದ್ರೀಕೃತ ಹಾಲು

ಈ ಹಾಲಿನಲ್ಲಿ ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ತೂಕ ಹೆಚ್ಚಳಕ್ಕೆ ಹಾಗೂ ಹೃದ್ರೋಗಗಳು ಎದುರಾಗುವ ಸಾಧ್ಯತೆಗಳ ಹೆಚ್ಚಳಕ್ಕೆ ಕಾರಣವಾಗುತ್ತವೆ. ಇವುಗಳ ಬದಲಿಗೆ ಇವಾಪೊರೇಟೆಡ್ ಅಥವಾ ಆವೀಕರಿಸಿದ ಹಾಲು ಅಥವಾ ಸಕ್ಕರೆ ರಹಿತ ಸಾಂದ್ರೀಕೃತ ಹಾಲನ್ನು ನಿಮ್ಮ ಖಾದ್ಯಗಳಲ್ಲಿ ಬಳಸಿ.


ಸಂಸ್ಕರಿತ ಚೀಸ್

ಸಂಸ್ಕರಿತ ಚೀಸ್ ಮೊದಲಾದ ಉತ್ಪನ್ನಗಳಲ್ಲಿ ಅಧಿಕ ಮಟ್ಟದ ಸೋಡಿಯಂ ಮತ್ತು ಸಂತೃಪ್ತ ಕೊಬ್ಬುಗಳಿರುತ್ತವೆ, ಇವು ಹೃದಯದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು. ಬದಲಿಗೆ ಮಿತ ಪ್ರಮಾಣದಲ್ಲಿ ನೈಸರ್ಗಿಕ ಚೀಸ್ ಅನ್ನು ಬಳಸಿ ಹಾಗೂ ಮಿತವಾದ ಸೋಡಿಯಂ ಇರುವ ಲಭ್ಯತೆಯನ್ನು ಪರಿಶೀಲಿಸಿ.


ಸ್ವಾದವುಳ್ಳ ಮೊಸರು

ಇವು ರುಚಿಕರವಾಗಿದ್ದರೂ, ಹೆಚ್ಚುವರಿ ಸಕ್ಕರೆ ಹಾಗೂ ರುಚಿಕಾರಕಗಳನ್ನು ಬೆರೆಸಿರುವ ಈ ಮೊಸರು ತೂಕವನ್ನು ಏರಿಸುವ ಹಾಗೂ ಹೃದ್ರೋಗಗಳ ಸಾಧ್ಯತೆ ಹೆಚ್ಚಿಸುವ ಆಹಾರವಾಗಿದೆ. ಇವುಗಳ ಬದಲು ಸಕ್ಕರೆ ಬೆರೆಸದ ಸಾಮಾನ್ಯ ಮೊಸರನ್ನು ಬಳಸಿ ಹಾಗೂ ಸಿಹಿಕಾರಕವಾಗಿ ತಾಜಾ ಹಣ್ಣುಗಳನ್ನು ಬೆರೆಸಿ ಸೇವಿಸಿ.

READ ON APP