Hero Image

ಕರಿಬೇವಿನ ಎಲೆಯ ಈ ಪಾನೀಯ ಮಧುಮೇಹಿಗಳಿಗೆ ಒಳ್ಳೆಯದು, ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಬೆಸ್ಟ್

ಭಾರತೀಯರು ಕರಿಬೇವಿನ ಎಲೆಗಳನ್ನು ಹೆಚ್ಚಾಗಿ ಒಗ್ಗರಣೆ ಬಳಕೆ ಮಾಡಲಾಗುತ್ತದೆ. ಈ ಎಲೆಗಳಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಇದನ್ನು ಚಟ್ನಿ ಹಾಗೂ ಇನ್ನಿತರ ರೀತಿಯಿಂದಲೂ ಬಳಕೆ ಮಾಡುವರು. ಈ ಎಲೆಗಳನ್ನು ಬಳಸಿಕೊಂಡು ದೇಹವನ್ನು ನಿರ್ವಿಷಗೊಳಿಸಬಹುದು. ಹಲವಾರು ಬಗೆಯ ಪೋಷಕಾಂಶಗಳನ್ನು ಹೊಂದಿರುವ ಇದು ನೈಸರ್ಗಿಕ ನಿರ್ವಿಷಕಾರಿಯಾಗಿ ಕೆಲಸ ಮಾಡುವುದು, ಉರಿಯೂತ ತಗ್ಗಿಸುವುದು ಮತ್ತು ಪೋಷಕಾಂಶಗಳನ್ನು ಪಡೆಯಲು ಇದು ಸಹಕಾರಿ.
ಕರಿಬೇವಿನ ಎಲೆಗಳನ್ನು ನಿರ್ವಿಷಕಾರಿ ಪಾನೀಯಕ್ಕೆ ಸೇರ್ಪಡೆ ಮಾಡಿದರೆ ಅದರಿಂದ ಯಾವೆಲ್ಲಾ ಲಾಭಗಳು ಸಿಗುವುದು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಆ್ಯಂಟಿಆಕ್ಸಿಡೆಂಟ್ ಗುಣಗಳು

ಕರಿಬೇವಿನ ಎಲೆಗಳಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳಾಗಿರುವಂತಹ ಫ್ಲಾವನಾಯ್ಡ್, ಫೆನಾಲಿಕ್ ಅಂಶ ಮತ್ತು ವಿಟಮಿನ್ ಸಿ ಇದೆ. ಈ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು ಮತ್ತು ಜೀವಕೋಶಗಳಿಗೆ ಆಗುವ ಹಾನಿ ಮತ್ತು ವಯಸ್ಸಾಗುವುದನ್ನು ತಪ್ಪಿಸುವುದು.


ನಿರ್ವಿಷಕಾರಿ

ದೇಹದಲ್ಲಿ ಇರುವ ವಿಷಕಾರಿ ಅಂಶ ಮತ್ತು ಕಲ್ಮಷವನ್ನು ಹೊರಹಾಕುವ ಮೂಲಕ ಇದು ದೇಹದಲ್ಲಿ ನೈಸರ್ಗಿಕ ನಿರ್ವಿಷಕಾರಿಯಾಗಿ ಕೆಲಸ ಮಾಡುವುದು. ಕರಿಬೇವಿನ ಎಲೆಗಳನ್ನು ಸೇವನೆ ಮಾಡಿದರೆ ಆಗ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಗೆ ಹಾಕಬಹುದು ಮತ್ತು ಇದು ದೇಹವನ್ನು ಸಂಪೂರ್ಣವಾಗಿ ನಿರ್ವಿಷಗೊಳಿಸಲು ಸಹಕಾರಿ.ಇದನ್ನೂ ಓದಿ:

ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಲು ಉತ್ತಮ ಮನೆಮದ್ದುಗಳಿವು


ಜೀರ್ಣಕ್ರಿಯೆ ಆರೋಗ್ಯ

ಆಯುರ್ವೇದ ಔಷಧಿಗಳಲ್ಲಿ ಕೂಡ ಕರಿಬೇವಿನ ಎಲೆಗಳನ್ನು ಬಳಕೆ ಮಾಡಲಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಜಠರಕರುಳಿನ ಸಮಸ್ಯೆಗಳಾಗಿರುವಂತಹ ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯನ್ನು ಇದು ಕಡಿಮೆ ಮಾಡುವುದು. ಕರಿಬೇವಿನ ಎಲೆ ಹಾಕಿರುವ ನಿರ್ವಿಷಕಾರಿ ಪಾನೀಯ ಸೇವನೆ ಮಾಡಿದರೆ ಆಗ ಜೀರ್ಣಕ್ರಿಯೆ ಆರೋಗ್ಯವು ಸುಧಾರಣೆ ಆಗುವುದು ಮತ್ತು ಕರುಳಿನ ಕ್ರಿಯೆಗಳು ಸರಾಗವಾಗುವುದು.


ತೂಕ ನಿರ್ವಹಣೆ

ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಕೆಲವು ಅಂಶಗಳು ಚಯಾಪಚಯ ನಿಯಂತ್ರಣದಲ್ಲಿ ಇಡುವುದು ಮತ್ತು ತೂಕ ಇಳಿಸಲು ಇದು ಸಹಕಾರಿ. ಕರಿಬೇವಿನ ಎಲೆಗಳನ್ನು ಹಾಕಿದ ಪಾನೀಯ ಸೇವನೆ ಮಾಡಿದರೆ ಆಗ ತೂಕ ಇಳಿಸಬಹುದು.


ಮಧುಮೇಹ ನಿಯಂತ್ರಣ

ಕರಿಬೇವಿನಲ್ಲಿ ಇರುವಂತಹ ಬಯೋಆ್ಯಕ್ಟಿವ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದು ಹಾಗೂ ಇನ್ಸುಲಿನ್ ಪ್ರತಿರೋಧವನ್ನು ಇದು ಕಡಿಮೆ ಮಾಡುವುದು. ಕರಿಬೇವಿನ ಎಲೆಯ ಪಾನೀಯ ಸೇವನೆಯನ್ನು ನಿಯಮಿತವಾಗಿ ಮಾಡಿದರೆ ಆಗ ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಿ ಮಧುಮೇಹಿಗಳಿಗೆ ಸಹಕಾರಿ ಆಗುವುದು.ಇದನ್ನೂ ಓದಿ: ಕೊತ್ತಂಬರಿ ಹಾಗೂ ಜೀರಿಗೆ ನೀರು ಕುಡಿದ್ರೆ ತೂಕ ಇಳಿಯುತ್ತಂತೆ!


ಉರಿಯೂತ ಶಮನಕಾರಿ ಗುಣ

ಕರಿಬೇವಿನ ಎಲೆಗಳನ್ನು ಉರಿಯೂತ ಶಮನಕಾರಿ ಗುಣಗಳು ಇದ್ದು, ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಉರಿಯೂತದಿಂದ ಬರುವ ಸಮಸ್ಯೆಗಳಾಗಿರುವ ಸಂಧಿವಾತ, ಐಬಿಡಿ ಲಕ್ಷಣಗಳನ್ನು ಕಡಿಮೆ ಮಾಡುವುದು.


ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ

ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಅಂಶವು ಕರಿಬೇವಿನ ಎಲೆಗಳನ್ನು ಸಮೃದ್ಧವಾಗಿದೆ. ಇದು ಕೂದಲು ಮತ್ತು ಚರ್ಮದ ಆರೋಗ್ಯ ಕಾಪಾಡುವುದು. ಕರಿಬೇವಿನ ಎಲೆಯ ಪಾನೀಯ ಸೇವನೆ ಮಾಡಿದರೆ, ಅದು ಚರ್ಮಕ್ಕೆ ಪೋಷಣೆ ನೀಡಿ, ಚರ್ಮದ ಕಾಂತಿ ವೃದ್ಧಿಸುವುದು ಮತ್ತು ಕೂದಲಿನ ಕಿರುಚೀಲಗಳನ್ನು ಬಲಪಡಿಸುವುದು. ಇದರಿಂದ ಚರ್ಮ ಮತ್ತು ಕೂದಲು ಆರೋಗ್ಯವಾಗಿರುವುದು.


ಕರಿಬೇವಿನ ಪಾನೀಯ ತಯಾರಿಸುವುದು ಹೇಗೆ?
  • ದೇಹವನ್ನು ನಿರ್ವಿಷಗೊಳಿಸುವ ಕರಿಬೇವಿನ ಪಾನೀಯ ತಯಾರಿಸಲು ಮೊದಲಿಗೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಸರಿಯಾಗಿ ತೊಳೆಯಿರಿ.
  • ಸ್ವಲ್ಪ ನೀರು ಇಟ್ಟು ಕುದಿಸಿ ಮತ್ತು ಅದಕ್ಕೆ ಅರಶಿನ ಹಾಕಿ ಮತ್ತು ಇದರ ಬಳಿಕ ಕರಿಬೇವಿನ ಎಲೆಗಳನ್ನು ಹಾಕಿ ಸರಿಯಾಗಿ ಕುದಿಸಿ.
  • ಇದರ ಬಳಿಕ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಲಿಂಬೆರಸ ಹಾಕಿಕೊಂಡು ಕುಡಿಯಿರಿ.
  • READ ON APP