Hero Image

ವಾಕಿಂಗ್ ವೇಳೆ ಈ ತಪ್ಪುಗಳನ್ನು ಮಾಡಿದರೆ, ನಿಮ್ಮ ಟೈಮ್ ವೇಸ್ಟ್, ಹೆಲ್ತ್ಗೂ ಕೂಡ ಪ್ರಯೋಜನವಿಲ್ಲ!

ವಾಹನಗಳು ಇಲ್ಲದೆ ಇರುವಂತಹ ಸಮಯದಲ್ಲಿ ಪ್ರತಿಯೊಬ್ಬರು ದಿನಕ್ಕೆ ಇಂತಿಷ್ಟು ಕಿ.ಮೀ. ನಡೆಯುತ್ತಿದ್ದರು. ಆಗ ಏನೇ ಬೇಕಿದ್ದರೂ ಆಗ ನಡೆದುಕೊಂಡು ಹೋಗಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಒಂದು ಪ್ಯಾಕೇಟ್ ಬಿಸ್ಕೆಟ್ ಬೇಕಿದ್ದರೂ ಬೈಕ್ ಸ್ಟಾರ್ಟ್ ಮಾಡಿ ಹೋಗುತ್ತಾರೆ. ಇದರಿಂದ ನಡೆಯುವುದು ತುಂಬಾ ಕಡಿಮೆ ಆಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಲಿದೆ. ನಡೆಯುವುದು ತುಂಬಾ ಒಳ್ಳೆಯ ವ್ಯಾಯಾಮ ಎಂದು ಪರಿಗಣಿಸಲಾಗಿದೆ.


ಇದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಣೆ ಮಾಡುವುದು, ಮೂಳೆಗಳನ್ನು ಬಲಪಡಿಸಿ, ತೂಕ ನಿರ್ವಹಣೆಗೆ ಸಹಕರಿಸುವುದು. ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಡೆಯುವ ಇದು ಮಾನಸಿಕ ಸ್ಪಷ್ಟತೆ ನೀಡುವುದು. ನಡೆಯುವುದರಿಂದ ದೇಹಕ್ಕೆ ಎಲ್ಲಾ ಲಾಭಗಳು ಸಿಗಬೇಕು ಎಂದಿದ್ದರೆ ಆಗ ನೀವು ಈ ತಪ್ಪುಗಳನ್ನು ಮಾಡಬಾರದು.
ಭೂಮಿ ನೋಡಿ ನಡೆಯುವುದು
  • ಇತ್ತೀಚಿನ ದಿನಗಳಲ್ಲಿ ನಡೆಯುವ ವೇಳೆ ಕೂಡ ಮೊಬೈಲ್ ಬಳಕೆ ಮಾಡುವುದು ಸಹಜ. ಹೀಗೆ ಮಾಡುವುದರಿಂದ ಕುತ್ತಿಗೆಗೆ ಒತ್ತಡ ಬೀಳಬಹುದು ಮತ್ತು ಊತ ಕಾಣಿಸಬಹುದು.
  • ನಡೆಯುವ ವೇಳೆ ತಲೆಯನ್ನು ನೇರವಾಗಿಡಿ ಮತ್ತು ಸರಿಯಾದ ಕೋನದಲ್ಲಿ ತಲೆಯು ಇರಲಿ. ನಡೆಯುವ ವೇಳೆ ಕೆಳಗೆ ನೋಡಿದರೆ ಆಗ ಕಣ್ಣಿಗೆ ಒತ್ತಡ ಮತ್ತು ಎದುರಿಗೆ ಏನಾದರೂ ಇದ್ದರೆ ಅದಕ್ಕೆ ಢಿಕ್ಕಿಯಾಗುವ ಸಾಧ್ಯತೆಯು ಇದೆ.

ವಿಶ್ರಾಂತಿ ಪಡೆಯದಿರುವುದು

ದೇಹಕ್ಕೆ ಸರಿಯಾಗಿ ವಿಶ್ರಾಂತಿ ನೀಡಿ, ವ್ಯಾಯಾಮ ಅಥವಾ ಹಿಂದಿನ ದೇಹ ದಂಡನೆಯಿಂದ ಚೇತರಿಕೆಗೆ ಅವಕಾಶ ನೀಡಬೇಕು. ಇದರಿಂದ ನೀವು ಪ್ರತಿನಿತ್ಯವೂ ನಡೆಯುವ ಅಭ್ಯಾಸ ಇಟ್ಟುಕೊಂಡಿದ್ದರೆ ಆಗ ಒಂದು ದಿನ ವಿಶ್ರಾಂತಿ ಮಾಡಿ. ಇದರಿಂದ ಸ್ನಾಯುಗಳಿಗೆ ಚೇತರಿಸಿಕೊಳ್ಳಲು, ಒತ್ತಡ ಕಡಿಮೆ ಆಗಲು ನೆರವಾಗುವುದು.


ಸರಿಯಾದ ಆಹಾರ ಸೇವನೆ ಮಾಡದಿರುವುದು

ಸೂಕ್ತ ಪೋಷಕಾಂಶಗಳು ಇರುವ ಆಹಾರ ಸೇವನೆ ಮಾಡದೆ ಇದ್ದರೆ ಆಗ ದೇಹದ ಶಕ್ತಿಯ ಮಟ್ಟವು ಕಡಿಮೆ ಆಗುವುದು ಮತ್ತು ನಡೆಯುವಾಗ ಅಥವಾ ಬೇರೆ ದೈಹಿಕ ಚಟುವಟಿಕೆ ಮಾಡುವಾಗ ದೇಹದ ಶಕ್ತಿಯು ಇರದು.


ನೋವು ಕಡೆಗಣಿಸುವುದು

ನಡೆಯುವ ಸಂದರ್ಭದಲ್ಲಿ ಬಳಲಿಕೆ ಅಥವಾ ಬೇರೆ ರೀತಿಯ ಸಮಸ್ಯೆಗಳು ಕಂಡುಬರುತ್ತಲಿದ್ದರೆ, ಆಗ ಅದನ್ನು ಕಡೆಗಣಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಿಮ್ಮ ದೇಹದ ಮಾತನ್ನು ಕೇಳಿ ಮತ್ತು ಬೇಕಿರುವಾಗ ವಿಶ್ರಾಂತಿ ಪಡೆಯಿರಿ. ದೇಹದಲ್ಲಿ ನೋವು ಕಂಡುಬರುತ್ತಲಿದ್ದರೆ, ಆಗ ಇದರ ಕಡೆಗೆ ತಕ್ಷಣ ಗಮನಹರಿಸಿ. ಸಂಪೂರ್ಣ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಿ.


ದೊಡ್ಡ ಹೆಜ್ಜೆ ಇಡುವುದು

ಸಾಮಾನ್ಯಕ್ಕಿಂತಲೂ ದೊಡ್ಡ ಹೆಜ್ಜೆಯನ್ನು ಇಟ್ಟು ನಡೆದರೆ ಆಗ ಇದರಿಂದ ಸ್ನಾಯುಗಳು ಹಾಗೂ ಗಂಟುಗಳ ಮೇಲೆ ಒತ್ತಡ ಬಿದ್ದು ಬಳಲಿಕೆ ಕಾಣಿಸಿಕೊಳ್ಳಬಹುದು. ಇದರಿಂದ ನಡೆಯುವ ಕ್ರಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಸ್ನಾಯುಗಳಲ್ಲಿ ಅಸಮತೋಲನ ಉಂಟಾಗಿ ಗಾಯದ ಅಪಾಯವು ಹೆಚ್ಚಾಗಬಹುದು. ಅದರಲ್ಲೂ ಮೊಣಕಾಲು, ಸೊಂಟ ಮತ್ತು ಬೆನ್ನಿನ ಕೆಳಭಾಗದಲ್ಲಿ ನೋವು ಕಂಡುಬರಬಹುದು.


ಕೈಗಳನ್ನು ಬಳಸದೆ ಇರುವುದು
  • ನಡೆಯುವ ವೇಳೆ ಯಾವಾಗಲೂ ಕೈಗಳನ್ನು ಬಳಸಿಕೊಳ್ಳಿ. ಕೈಗಳನ್ನು ಹಾಗೆ ಜೋತು ಬಿಟ್ಟುಕೊಂಡು ನಡೆಯಬೇಡಿ. ನಡೆಯುವ ವೇಳೆ ಕೈಗಳನ್ನು ಕೂಡ ಬಳಸಿದರೆ ಆಗ ಇದರಿಂದ ಸಮತೋಲನ ಇರುವುದು ಮತ್ತು ನಡಿಗೆಯು ಪರಿಣಾಮಕಾರಿ ಆಗುವುದು.
  • ಕೈಗಳನ್ನು ಕೂಡ ಬಳಸಿದರೆ ಆಗ ಹೆಚ್ಚು ಸ್ನಾಯುಗಳು ಬಳಕೆ ಆಗುವುದು ಮತ್ತು ಇದರಿಂದ ಒತ್ತಡವನ್ನು ಕೂಡ ಕಡಿಮೆ ಮಾಡಬಹುದು.

  • ವಾರ್ಮ್ ಅಪ್ ಮಾಡದೆ ಇರುವುದು

    ನಡೆಯುವ ಮೊದಲು ಸರಿಯಾಗಿ ವಾರ್ಮ್ ಅಪ್ ಮಾಡದೆ ಇದ್ದರೆ ಆಗ ಇದು ಸ್ನಾಯುಗಳ ಮೇಲೆ ಒತ್ತಡ ಹಾಕಬಹುದು. ಯಾವುದೇ ದೈಹಿಕ ಚಟುವಟಿಕೆ ಮೊದಲು ಸರಿಯಾದ ರೀತಿಯಲ್ಲಿ ವಾರ್ಮ್ ಅಪ್ ಮಾಡಿದರೆ ಆಗ ಇದು ಸ್ಥಿತಿಸ್ಥಾಪಕತ್ವ ಸುಧಾರಿಸುವುದು, ರಕ್ತ ಸಂಚಾರ ಉತ್ತಮಪಡಿಸುವುದು, ಸ್ನಾಯುಗಳ ಪ್ರದರ್ಶನ ವೃದ್ಧಿಸುವುದು ಮತ್ತು ಗಾಯದ ಸಮಸ್ಯೆ ಕಡಿಮೆ ಮಾಡುವುದು.


    ಹೈಡ್ರೇಟ್ ಆಗದೆ ಇರುವುದು

    ನಡೆಯುವ ವೇಳೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೆ ಇರುವ ಪರಿಣಾಮವಾಗಿ ನಿರ್ಜಲೀಕರಣವು ಉಂಟಾಗಬಹುದು. ಇದರಿಂದ ನಿಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು ಮತ್ತು ಬಿಸಿಲಾಘಾತ ಆಗಬಹುದು. ನಿರ್ಜಲೀಕರಣದಿಂದಾಗಿ ದೇಹಕ್ಕೆ ಇತರ ಕೆಲವು ಹಾನಿಕಾರಕ ಪರಿಣಾಮ ಉಂಟಾಗಬಹುದು. ಸ್ನಾಯುಗಳ ಸೆಳೆತ ಮತ್ತು ಕಿಡ್ನಿ ಸಮಸ್ಯೆಗಳು ಬರಬಹುದು.​ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುವ ನೈಸರ್ಗಿಕ ಪಾನೀಯಗಳು


    ಪಾದರಕ್ಷೆಗಳು ಸರಿಯಾಗಿಲ್ಲದೆ ಇರುವುದು

    ಸರಿಯಾಗಿ ಹೊಂದಾಣಿಕೆ ಆಗದ ಮತ್ತು ಕಾಲುಗಳಿಗೆ ಆರಾಮ ನೀಡದೆ ಇರುವ ಪಾದರಕ್ಷೆಗಳನ್ನು ಧರಿಸಿದರೆ ಆಗ ಇದರಿಂದ ಕಾಲುಗಳಲ್ಲಿ ನೋವು, ಬೊಕ್ಕೆ ಮತ್ತು ಗಂಟುಗಳಲ್ಲಿ ನೋವು ಉಂಟಾಗುವುದು. ಇದರಿಂದ ಗಾಯಾಳುವಾಗುವ ಸಾಧ್ಯತೆಯು ಹೆಚ್ಚು. ಸ್ಥಿರತೆ ಒದಗಿಸದೆ ಇರುವ ಪಾದರಕ್ಷೆಗಳನ್ನು ಧರಿಸಿದರೆ ಆಗ ಅದರಿಂದ ಜಾರಿ ಬೀಳುವ ಅಪಾಯವು ಇರುವುದು.


    ಕೆಟ್ಟ ಭಂಗಿ

    ಹೆಚ್ಚಿನ ಜನರು ಭುಜಗಳಿಗೆ ಒತ್ತಡ ಹಾಕಿ ಅಥವಾ ಬೆನ್ನು ಬಗ್ಗಿಸಿಕೊಂಡು ನಡೆಯುವರು. ಇದರಿಂದ ಸ್ನಾಯುಗಳಲ್ಲಿ ಊತ ಅಥವಾ ಬೆನ್ನು ಹಿಡಿದುಕೊಂಡರೆ ಆಗಬಹುದು. ಕೆಟ್ಟ ಭಂಗಿಯಿಂದ ಉಸಿರಾಟದ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ತಲೆನೋವು ಮತ್ತು ದಿನವಿಡಿ ಬಳಲಿಕೆ ಕಂಡುಬರಬಹುದು.Read in English:

    READ ON APP