Hero Image

ಮಧುಮೇಹ ಇರುವವರು, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು ನಿಮ್ಮ ಶುಗರ್ ಯಾವಾಗಲೂ ಕಂಟ್ರೋಲ್ ನಲ್ಲಿರುತ್ತದೆ...

ದೈನಂದಿನ ಆಹಾರಪದ್ಧತಿ ಹಾಗೂ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆಯಾದರೂ ಕೂಡ ಇದ್ದಕ್ಕಿದ್ದಂತೆ ನಮಗೆ ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳು ಕಾಣಿಸಿ ಕೊಳ್ಳಲು ಶುರುವಾಗುತ್ತವೆ! ಇದಕ್ಕೆ ಮಧುಮೇಹ ಕಾಯಿಲೆ ಒಂದು ಬೆಸ್ಟ್ ಎಕ್ಸಾಂಪಲ್ ಎಂದು ಹೇಳಬಹುದು!. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ ಯಾವಾಗ ನಮ್ಮ ದೈನಂದಿನ ಜೀವನಶೈಲಿಯಲ್ಲಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆಯೋ, ಇಂತಹ ಸಂದರ್ಭದಲ್ಲಿ ಬಹಳ ಬೇಗನೇ, ದೀರ್ಘಕಾಲದವರೆಗೆ ಕಾಡುವ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಸಕ್ಕರೆಕಾಯಿಲೆ ಕಾಯಿಲೆಯ ಬಗ್ಗೆ ಹೇಳುವುದಾದರೆ...
  • ಇನ್ನು ಸಕ್ಕರೆಕಾಯಿಲೆ ಅಥವಾ ಮಧುಮೇಹ ಕಾಯಿಲೆಯ ಬಗ್ಗೆ ಹೇಳುವುದಾದರೆ, ಯಾವುದೇ ವಯಸ್ಸಿನಲ್ಲಿ ಜನರಿಗೆ ಈ ಕಾಯಿಲೆ ಕಾಣಿಸಿಕೊಳ್ಳಬಹುದು.
  • ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆ ಕಂಡರೆ ಅದರಿಂದ ವಿವಿಧ ಬಗೆಯ ಅಡ್ಡಪರಿಣಾಮಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಹಾಗೂ ಜೀವನಶೈಲಿಯಲ್ಲಿ ಕಟ್ಟುನಿಟ್ಟಿನ ಬದಲಾವಣೆಗಳನ್ನು ತಂದು ಕೊಳ್ಳಬೇಕಾಗುತ್ತದೆ.
  • ಇಂದಿನ ಲೇಖನದಲ್ಲಿ ಈಗಾಗಲೇ ಶುಗರ್ ಕಾಯಿಲೆ ಇರುವವರು, ಈ ಕಾಯಿಲೆಯನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕೆಂದ್ರೆ, ವೈದ್ಯರು ನೀಡಿರುವ ಮಾತ್ರೆಯ ಜೊತೆಗೆ ಏನೆಲ್ಲಾ ಆರೋಗ್ಯ ಕಾರಿ ಜೀವನಶೈಲಿ ಹಾಗೂ ಆಹಾರಪದ್ಧತಿಯನ್ನು ಅನುಸರಿಸ ಬೇಕು ಎನ್ನುವುದನ್ನು ನೋಡೋಣ ಬನ್ನಿ... ​

ಶುಗರ್ ಲೆವೆಲ್ ಕಂಟ್ರೋಲ್‌ ಮಾಡೋದು ಹೇಗೆ​ ​
ಕಾರ್ಬೋಹೈಡ್ರೇಟ್ ಅಂಶವನ್ನು ಒಳಗೊಂಡಿರುವ ಆಹಾರಗಳಿಂದ ದೂರವಿರಬೇಕು

ವೈದ್ಯರು ನೀಡುವ ಸಲಹೆಗಳ ಪ್ರಕಾರ ಅಧಿಕ ಪ್ರಮಾಣದಲ್ಲಿ ಕಾರ್ಬೋ ಹೈಡ್ರೇಟ್ ಅಂಶವನ್ನು ಒಳಗೊಂಡಿ ರುವ ಆಹಾರಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆ ಕಂಡು ಬರುವ ಸಾಧ್ಯತೆ ಇರುತ್ತದೆ ಎಂದು ಸಲಹೆ ನೀಡುತ್ತಾರೆ. ಹಾಗಾಗಿ ಕಾರ್ಬೋ ಹೈಡ್ರೇಟ್ ಅಂಶ ಅಧಿಕವಿರುವ ಆಹಾರಗಳಿಂದ ದೂರ ಉಳಿಯ ಬೇಕಾಗುತ್ತದೆ


ಸಂಸ್ಕರಿಸಿದ ಉತ್ಪನ್ನ
  • ಸಂಸ್ಕರಿಸಿದ ಉತ್ಪನ್ನಗಳು ಯಾವತ್ತಿಗೂ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ವಿಶೇಷ ವಾಗಿ ಈಗಾಗಲೇ ಶುಗರ್ ಇರುವವರು, ಸಂಸ್ಕರಿಸಿದ ಉತ್ಪನ್ನ ಗಳಾದ ತಕ್ಷಣ ರೆಡಿ ಮಾಡಿ ತಿನ್ನಬಹುದಾದ ನೂಡಲ್ಸ್, ಪಾಸ್ತಾ, ಬೇಕರಿಯಲ್ಲಿ ಸಿಗುವ ಮೈದಾದಿಂದ ಮಾಡಿದ ಬ್ರೆಡ್, ಹಾಗೂ ಊಟಕ್ಕೆ ಬೆಳ್ತಿಗೆ ಅಕ್ಕಿಯಿಂದ ಮಾಡಿದ ಅನ್ನದಿಂದ ದೂರವಿದ್ದರೆ ಒಳ್ಳೆಯದು.
  • ಯಾಕೆಂದ್ರೆ ಇಂತಹ ಅಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರ ಬದಲು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವಂತಹ ಆಹಾರಗಳಾದ ನಾರಿನಾಂಶ ಹೆಚ್ಚಿರುವ ಓಟ್ಸ್, ಬ್ರೌನ್ ರೈಸ್, ಕೆಂಪಕ್ಕಿಯ ಗಂಜಿ, ಗೋಧಿ ಮುಂತಾದ ಆಹಾರ ಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು.

  • ಸಿಹಿ ಪದಾರ್ಥಗಳಿಂದ ದೂರ ಇದ್ದಷ್ಟು ಒಳ್ಳೆಯದು

    ಬೇಕರಿ ಸಿಹಿ ತಿಂಡಿಗಳು ಇಲ್ಲಾಂದ್ರೆ ಮನೆಯಲ್ಲಿ ತಯಾರು ಮಾಡಿದ ಸಿಹಿ ಅಡುಗೆಗಳಿಂದ ದೂರವಿದ್ದರೆ ಒಳ್ಳೆಯದು. ಇಷ್ಟು ಮಾತ್ರವಲ್ಲ ದಿನಾ ಕುಡಿಯುವ ಟೀ-ಕಾಫಿಗೆ ಸಕ್ಕರೆ ಬೆರೆಸದೆ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಇನ್ನೂ ಒಳ್ಳೆಯದು. ಯಾಕೆಂದ್ರೆ ಇಂತಹ ಅಭ್ಯಾಸಗಳನ್ನು ಅನುಸರಿಸುತ್ತಾ ಹೋದರೆ, ಬ್ಲಡ್ ಶುಗರ್ ಲೆವೆಲ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ


    ನಾರಿನಾಂಶ ಹಾಗೂ ಪ್ರೋಟೀನ್ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಬೇಕು

    ಮಧುಮೇಹ ಇರುವವರು ಸಾಧ್ಯವಾದಷ್ಟು ಹೆಚ್ಚು ಹಸಿರೆಲೆ ತರಕಾರಿಗಳ ಜೊತೆಗೆ ಪ್ರೋಟೀನ್ ಹಾಗೂ ನಾರಿನಾಂಶ ಹೆಚ್ಚಿರುವ ಬೇಳೆಕಾಳುಗಳನ್ನು ಸೇವಿಸಬೇಕು ಎಂದು ಹೇಳುತ್ತಾರೆ. ಯಾಕೆಂದ್ರೆ ಇಂತಹ ಆಹಾರಗಳು ಮಧುಮೇಹಿಗಳು ಸೇವಿಸಿದ ಆಹಾರಗಳನ್ನು ಹೊಟ್ಟೆಯಲ್ಲಿ ನಿಧಾನವಾಗಿ ಜೀರ್ಣಮಾಡುವ ಮೂಲಕ, ಶುಗರ್ ಲೆವೆಲ್ ಹೆಚ್ಚಾಗದಂತೆ ನೋಡಿ ಕೊಳ್ಳುತ್ತದೆ.


    ವ್ಯಾಯಾಮ ಹಾಗೂ ಯೋಗಾಭ್ಯಾಸ ಮಾಡುವ ಅಭ್ಯಾಸ ಇಟ್ಟುಕೊಳ್ಳಿ...

    ಪ್ರತಿದಿನ ವ್ಯಾಯಾಮ ಹಾಗೂ ಯೋಗಾಭ್ಯಾಸ ಮಾಡುವುದರಿಂದ, ರಕ್ತ ದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಪ್ರತಿದಿನ ಮುಂಜಾನೆ ವ್ಯಾಯಾಮ ಹಾಗೂ ಕೆಲವೊಂದು ಯೋಗಾಭ್ಯಾಸ ಮಾಡುವುದರಿಂದ, ಶುಗರ್ ಲೆವೆಲ್ ಕಂಟ್ರೋಲ್ ತಪ್ಪದಂತೆ ನೋಡಿಕೊಳ್ಳಬಹುದು.


    ರಾತ್ರಿ ಊಟದ ಮೇಲೆ ವಾಕಿಂಗ್ ಮಾಡುವುದು

    ರಾತ್ರಿ ಊಟ ಮಾಡಿದ ಮೇಲೆ, 15 ನಿಮಿಷಗಳವರೆಗೆ ಆದರೂ ಕೂಡ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನಿರ್ವಹಣೆ ಆಗುವುದರ ಜೊತೆಗೆ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗದಂತೆ ನೋಡಿಕೊಂಡು, ಇನ್ಸುಲಿನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

    ಈ ತರ ವಾಕಿಂಗ್ ಮಾಡಿದರೆ ಸಕ್ಕರೆ ಕಾಯಿಲೆ ಕಮ್ಮಿ ಆಗುತ್ತಂತೆ!

    READ ON APP