Hero Image

ದೇಹದಲ್ಲಿ ಇದ್ದಕ್ಕಿದಂತೆ ಈ ರೀತಿಯಾದ್ರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ!

undefined
ಕೊಲೆಸ್ಟ್ರಾಲ್ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ!
  • ಬಿಪಿ ಶುಗರ್ ಕಾಯಿಲೆಯಂತೆ, ಅಧಿಕ ಕೊಲೆಸ್ಟ್ರಾಲ್ ಕೂಡ ಸೈಲೆಂಟ್ ಕಿಲ್ಲರ್ ಕಾಯಿಲೆ! ಆರಂಭದಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಇರುವುದರಿಂದ, ಈ ಕಾಯಿಲೆ ಯನ್ನು ಆರಂಭದಲ್ಲಿ ಪತ್ತೆ ಹಚ್ಚಲು ಸ್ವಲ್ಪ ಕಷ್ಟವಾಗುತ್ತದೆ.
  • ಒಮ್ಮೆ ಈ ಕಾಯಿಲೆ ಮಿತಿ ಮೀರಿ ಹೋದರೆ, ಆನಂತರದಲ್ಲಿ ಪಾರ್ಶ್ವವಾಯು ಅಥವಾ ಹೃದಯಘಾತ ಸಮಸ್ಯೆಗಳನ್ನು ನೇರವಾಗಿ ತಂದುಕೊಡುತ್ತದೆ, ಎಂದು ತಜ್ಞರು ಕೂಡ ಎಚ್ಚರಿಕೆ ಯನ್ನು ನೀಡುತ್ತಾರೆ.

ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಈ ರೀತಿಯ ಲಕ್ಷಣಗಳು ಪಕ್ಕಾ ಕಾಣಿಸಿಕೊಳ್ಳುತ್ತದೆ!

ಹೃದಯ ಬಡಿತದಲ್ಲಿ ಏರುಪೇರು ಆಗುವುದುಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುವುದುಪಾರ್ಶ್ವವಾಯು ಲಕ್ಷಣಗಳು ಕಾಣಿಸಿಕೊಳ್ಳುವುದುಅಧಿಕರೊತ್ತಡಶುಗರ್ ಕಂಟ್ರೋಲ್ ತಪ್ಪುವುದುಆಗಾಗ ಎದೆ ನೋವು ಕಾಣಿಸಿಕೊಳ್ಳುವುದುನಡೆಯುವಾಗ ನೋವು ಕಾಣಿಸುವುದುಕಣ್ಣುಗಳು ಕೆಂಪಗೆ ಆಗುವುದು, ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು


ಕಣ್ಣಿನ ದೃಷ್ಟಿ ಮಂಜಾಗುವುದು!

ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ ಹೋದಂತೆ, ವ್ಯಕ್ತಿಯಲ್ಲಿ ಇದ್ದಕ್ಕಿದ್ದಂತೆ ಕಣ್ಣಿನ ದೃಷ್ಟಿ ಮಂಜಾಗುತ್ತಾ ಹೋಗುತ್ತದೆ! ಅಷ್ಟೇ ಅಲ್ಲದೆ ಕಣ್ಣಿನಲ್ಲಿ ನೋವು ಕೂಡ ಕಾಣಿಸಿಕೊಳ್ಳುತ್ತದೆ.

ಇದೇ ಕಾರಣಕ್ಕೆ ಕಣ್ಣಿನ ದೃಷ್ಟಿ ಮಂಜಾಗುವುದು! ಇರಲಿ ಎಚ್ಚರ


ಸೂಜಿ ಚುಚ್ಚಿದಂತಹ ನೋವು ಕಾಣಿಸಿಕೊಳ್ಳುವುದು
  • ರಾತ್ರಿಯ ಹೊತ್ತಿನಲ್ಲಿ ಕಾಲಿನ ಪಾದಗಳಲ್ಲಿ ಚಿಕ್ಕದಾಗಿ ಸೂಜಿ ಚುಚ್ಚಿ ದಂತಹ ನೋವು ಮತ್ತು ಮೀನಖಂಡಗಳು ಸೆಳೆದಂತೆ ನೋವು ಕಾಣಿಸಿಕೊಳ್ಳುವುದು ಕೂಡ, ಕೊಲೆಸ್ಟ್ರಾಲ್ ಹೆಚ್ಚಾಗಿ ರುವ ರೋಗ ಲಕ್ಷಣಗಳು.
  • ವಾಸ್ತವದಲ್ಲಿ ರಕ್ತದಲ್ಲಿ ಕೆಟ್ಟ ಕೊಲೆ ಸ್ಟ್ರಾಲ್ ಸಂಗ್ರಹ ಹೆಚ್ಚಾದರೆ ರಕ್ತನಾಳಗಳ ಕಿರಿದಾಗಿ ದೇಹದ ತುದಿಭಾಗಗಳಿಗೆ ರಕ್ತ ಸರಬರಾಜು ಕಡಿಮೆಯಾಗುತ್ತದೆ. ಕೊನೆಗೆ ಇದೇ ಕಾರಣಕ್ಕೆ ಕಾಲಿನ ಭಾಗಕ್ಕೆ ರಕ್ತ ಪರಿಚಲನೆ ಕಡಿಮೆಯಾಗಿ ಸೂಜಿ ಚುಚ್ಚಿದಂತಹ ಅನುಭವ ಕಾಣಿಸಿಕೊಳ್ಳುವುದು.​

ಪಾದ ಹಾಗೂ ಮಣಿಕಟ್ಟಿನ ಭಾಗಗಳ ಊತ ಕಾಣಿಸಿಕೊಳ್ಳುವುದು!

ಸಾಮಾನ್ಯವಾಗಿ ದಿನವಿಡೀ ನಡೆದ ಬಳಿಕ ಸಂಜೆ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಪಾದಗಳು ಊದಿಕೊಳ್ಳುವುದು ಸಹಜ ಆದರೆ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ಬಿಟ್ಟರೆ, ಪಾದ ಹಾಗೂ ಮಣಿಕಟ್ಟಿನ ಜಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ. . ಈ ಊದಿಕೊಳ್ಳುವಿಕೆ ಸಾಮಾನ್ಯ ವಾಗಿ ಅನಿಯಂತ್ರಿತ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹದ ಪರಿಣಾಮ ಎಂದು ಹೇಳಲಾಗುತ್ತದೆ.


ಕೈ ಹಾಗೂ ಕಾಲಿನ ಬೆರಳುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು

ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ, ಕೈ ಹಾಗೂ ಕಾಲಿನ ಬೆರಳುಗಳಲ್ಲಿ ಇದ್ದಕ್ಕಿದ್ದಂತೆ ವಿಪರೀತ ನೋವು ಕಾಣಿಸಿಕೊಳ್ಳು ತ್ತದೆ. ಯಾಕೆಂದ್ರೆ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋದಂತೆ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವುದಿಲ್ಲ! ಇದೇ ಕಾರಣದಿಂದಾಗಿ ಈ ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುವುದು.


ಕೈಗಳ ಅಂಗೈಯಲ್ಲಿ ಸಮಸ್ಯೆ ಕಂಡು ಬರುವುದು

ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ನಿಯಂತ್ರಣ ಮೀರಿ ಹೋದರೆ, ಕೈಗಳ ಅಂಗೈ ಭಾಗದ ಚರ್ಮದಲ್ಲಿ ಹಳದಿ ಬಣ್ಣದ ಲಕ್ಷಣಗಳು ಕಾಣಿಸಿಕೊಳ್ಳುತ್ತ ವೆಯಂತೆ. ಒಂದು ವೇಳೆ ನಿಮಗೂ ಕೂಡ ಇಂತಹ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ, ಸಂಬಂಧ ಪಟ್ಟ ಚಿಕಿತ್ಸೆಯನ್ನು ಪಡೆದುಕೊಳ್ಳಿ.


ಪರಿಹಾರಗಳು ಏನು?
  • ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಲುವಾಗಿ ಜೀವನಶೈಲಿಯಲ್ಲಿ ಹಾಗೂ ಆಹಾರಪದ್ಧತಿಯಲ್ಲಿ ಕೆಲವೊಂದು ಕಟ್ಟುನಿಟ್ಟಿನ ಬದಲಾವಣೆಗಳನ್ನು ಅಗತ್ಯವಾಗಿ ತಂದುಕೊಳ್ಳಬೇಕು.
  • ಉದಾಹರಣೆಗೆ ಆಹಾರ ಪದ್ಧತಿಯಲ್ಲಿ ಕಡಿಮೆ ಉಪ್ಪಿನ ಅಂಶ ಇರಬೇಕು, ಎಣ್ಣೆಯಾಂಶ ಇರುವ ಆಹಾರಗಳಿಂದ ದೂರವಿರ ಬೇಕು. ಅಧಿಕ ಕೊಬ್ಬಿನಾಂಶ ಇರುವ ಕೆಂಪು ಮಾಂಸದಿಂದ ದೂರವಿರಬೇಕು. ದೇಹದ ತೂಕ ಹೆಚ್ಚಾಗದಂತೆ ನೋಡಿ ಕೊಳ್ಳಬೇಕು.
  • ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರ ಇರಬೇಕು. ನೈಸರ್ಗಿಕವಾಗಿ ಸಿಗುವ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಫ್ಯಾಟಿ ಮೀನು, ಅಗಸೆ ಬೀಜಗಳು, ಚಿಯಾ ಬೀಜಗಳು, ವಾಲ್ನಟ್ ಬೀಜಗಳನ್ನು ಸೇವನೆ ಮಾಡಬೇಕು.
  • ಬೆಳಗಿನ ಸಮಯದಲ್ಲಿ ಆಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ.
  • ವಿಶೇಷವಾಗಿ ಬೇಸಿಗೆಯಲ್ಲಿ ಸಿಗುವ ಈ ಹಣ್ಣು ತರಕಾರಿಗಳು ಕೊಲೆಸ್ಟ್ರಾಲ್ ಗೆ ರಾಮಬಾಣ...

    READ ON APP