Hero Image

ಹೆಸರು ಬೇಳೆಯನ್ನು ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿದ್ರೆ ಪಿಂಪಲ್ಸ್ ನಿವಾರಣೆಯಾಗುತ್ತಂತೆ

ಅನೇಕರಿಗೆ ಮುಖದಲ್ಲಿ ಮೊಡವೆಗಳಿವೆ. ಕೆಲವರಿಗೆ ಮೊಡವೆಗಳು ಬರುತ್ತಾ ಹೋಗುತ್ತಾ ಇರುತ್ತವೆ. ಈ ಮೊಡವೆಗಳಿಂದಾಗಿ ಸೌಂದರ್ಯ ಹಾಳಾಗುತ್ತದೆ. ಬೇಸಿಗೆ ಕಾಲದಲ್ಲಿ ಮೊಡವೆಗಳು, ಜಿಗುಟುತನ ಮತ್ತು ಮುಖದಲ್ಲಿ ಕಲೆಗಳಿಗೆ ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಈ ಮೊಡವೆಗಳನ್ನು ತೊಡೆದುಹಾಕಲು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ.
​ಕಾಂತಿಯುತ ತ್ವಚೆಗೆ ಮನೆಮದ್ದು​

ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್‌ಗಳನ್ನು ಮುಖಕ್ಕೆ ಬಳಸೋದಕ್ಕಿಂತ , ಮನೆಯಲ್ಲೇ ಸುಲಭವಾಗಿ ತಯಾರಿಸಬಲ್ಲ ಸ್ಕ್ರಬ್‌ ಒಂದನ್ನು ನಿಮಗೆ ತಿಳಿಸಲಿದ್ದೇವೆ. ಈ ಸ್ಕ್ರಬ್‌ನ್ನು ನಿಯಮಿತವಾಗಿ ನಿಮ್ಮ ತ್ವಚೆಗೆ ಬಳಸುವುದರಿಂದ ಚರ್ಮ ಕ್ಲೀನ್‌ ಆಗುವುದಲ್ಲದೆ, ಮೊಡವೆಗಳು ಮೂಡದಂತೆ ತಡೆಯುತ್ತದೆ. ಮುಖದಲ್ಲಿನ ಕಲೆಗಳನ್ನು ನಿವಾರಿಸುತ್ತದೆ.


​ಹೆಸರು ಬೇಳೆ ಬಳಕೆ​

ಹೆಸರು ಬೇಳೆ ಅನ್ನು ಹೆಚ್ಚಾಗಿ ಅಡುಗೆಮನೆಯಲ್ಲಿ ಬಳಸಲಾಗುತ್ತದೆ. ಬೇಳೆಕಾಳುಗಳು, ಒಣ ತರಕಾರಿಗಳು, ಖಿಚಡಿ ಮುಂತಾದ ಭಕ್ಷ್ಯಗಳನ್ನು ತಯಾರಿಸಲು ಇದನ್ನು ಬಳಸುತ್ತಾರೆ. ಆದರೆ ಹೆಸರು ಬೇಳೆಯನ್ನು ಮುಖಕ್ಕೂ ಬಳಸಬಹುದು ಎನ್ನುವುದು ನಿಮಗೆ ಗೊತ್ತಾ? ಹೆಸರು ಬೇಳೆಯು ಚರ್ಮವನ್ನು ಶುದ್ಧೀಕರಿಸಲು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದರಿಂದ ನಿಮ್ಮ ಮುಖ ಕಾಂತಿಪಡೆಯುತ್ತದೆ. ಇದನ್ನೂ ಓದಿ:

ತುಪ್ಪವನ್ನು ಈ ರೀತಿ ಚರ್ಮಕ್ಕೆ ಬಳಸೋದ್ರಿಂದ ತ್ವಚೆ ಕೋಮಲವಾಗಿರುವುದು


​ಸ್ಕ್ರಬ್ ತಯಾರಿಸುವುದು ಹೇಗೆ?​

ನೀವು ಹೆಸರುಬೇಳೆಯಿಂದ ಮುಖವನ್ನು ಸ್ಕ್ರಬ್ ಮಾಡಬಹುದು. ಇದಕ್ಕಾಗಿ ನೀವು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ನಂತರ ಬೆಳಿಗ್ಗೆ ಅದನ್ನು ಗ್ರೈಂಡರ್‌ನಲ್ಲಿ ರುಬ್ಬಿಕೊಳ್ಳಿ ಮತ್ತು ನಂತರ ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪವನ್ನು ಎರಡು ಚಮಚ ರುಬ್ಬಿದ ಹೆಸರು ಬೇಳೆಯೊಂದಿಗೆ ಸೇರಿಸಿ.

ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ನಿಧಾನವಾಗಿ ಹಚ್ಚಿ ಮತ್ತು ಮಸಾಜ್ ಮಾಡಿ. 10 ನಿಮಿಷಗಳ ನಂತರ, ನಿಮ್ಮ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.


​ಮಾಯಿಶ್ಚರೈಸರ್ ಹಚ್ಚಿ​

ಮುಖ ತೊಳೆದ ನಂತರ ನೀವು ನಿಮ್ಮ ಮುಖದ ಮೇಲೆ ಮಾಯಿಶ್ಚರೈಸರ್ ಅನ್ನು ಹಚ್ಚಿರಿ. ಇದನ್ನು ವಾರಕ್ಕೆ 1 ರಿಂದ 2 ಬಾರಿ ಮಾಡಿ. ಇದರೊಂದಿಗೆ ನೀವು ಪರಿಣಾಮವನ್ನು ಕಾಣಲಾರಂಭಿಸುತ್ತೀರಿ. ನಿಮ್ಮ ಚರ್ಮವು ಹೊಳೆಯುತ್ತದೆ.

ಕೆಲವರಿಗೆ ಹೆಸರುಬೇಳೆಯನ್ನು ಬಳಸುವುದರಿಂದ ಅಲರ್ಜಿ ಉಂಟಾಗಬಹುದು ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಮುಖದ ಮೇಲೆ ಕೆಂಪು ದದ್ದುಗಳು, ಮೊಡವೆಗಳು ಅಥವಾ ಅಲರ್ಜಿಯಂತಹ ಯಾವುದನ್ನಾದರೂ ನೀವು ಗಮನಿಸಿದರೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

READ ON APP