Hero Image

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನಾಗುತ್ತೆ? ನಿಮ್ಮ ಬಳಿ 2 ಬೈಕ್, 2 ಮನೆ ಇದ್ರೆ ಏನ್ ಮಾಡ್ತಾರೆ?: ಪ್ರಹ್ಲಾದ ಜೋಶಿ ಹೇಳಿದ್ದೇನು?

ಹುಬ್ಬಳ್ಳಿ: ರಾಹುಲ್ ಗಾಂಧಿ ಭಾಷಣ, ಕಾಂಗ್ರೆಸ್ ಮ್ಯಾನಿಫ್ಯಾಸ್ಟೋ ದೇಶವನ್ನು ಮಾವೋವಾದಿ ದೇಶ ಮಾಡಲು ಹೊರಟಿದೆ. ಜನರ ಬಳಿ ಎರಡು ಬೈಕ್, ಮನೆ ಇದ್ದರೆ ಒಂದು ಕಸಿದುಕೊಳ್ಳುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಾರ್ಟಿ ದೇಶಕ್ಕೆ ವೆಲ್ತ್ ಕ್ರಿಯೇಟ್ ಮಾಡುವವರ ವಿರುದ್ಧ ಹೊರಟಿದೆ.
ಮಾವೋವಾದಿ ಮನಸ್ಥಿತಿ ಇಟ್ಟುಕೊಂಡು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು‌ ತುಷ್ಟೀಕರಣದ ಪರಾಕಾಷ್ಟೆ ತಲುಪುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೂ ನಟಿ ಹರ್ಷಿಕಾ ಪೂಣಚ್ಚ, ಭುವನ್ ಕನ್ನಡ‌ ಮಾತಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಭೇಟಿಯಾಗಿ ತಮಗೆ ಸೂಕ್ತ ಭದ್ರತೆ ಇಲ್ಲಾ ಅಂತಾ ಹೇಳಲು ಬಂದಿದ್ದರು. ನಟ, ನಟಿಗೆ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಪಾಡೇನು? ಹನುಮಾನ್ ಚಾಲಿಸಾ ಕೇಳುವವನ ಮೇಲೆ ಹಲ್ಲೆ ಆಯಿತು. ಹೋರಾಟ ಮಾಡಿದ ಮೇಲೆ ಆರೋಪಿಗಳ‌ನ್ನು ಬಂಧಿಸಿದರು. ಅಪರಾಧಿ ಕೃತ್ಯ ಮಾಡುವವರಿಗೆ ಸರ್ಕಾರದಿಂದ ತಮಗೆ ರಕ್ಷಣೆ ಇದೆ ಅನ್ನಿಸುತ್ತಿದೆ.
ಹೀಗೆ ಮಾಡುವವರ ಕೊರಳಲ್ಲಿ ಅಲ್ಪಸಂಖ್ಯಾತರು ಅನ್ನೋ‌ ಟ್ಯಾಗ್ ಇದೆ ಎಂದು ಆರೋಪ ಮಾಡಿದರು. ಕಾಂಗ್ರೆಸ್ ಪಾರ್ಟಿ ಬಂದಾಗ ಪಾಕಿಸ್ತಾನ ಮಾದರಿ‌ ಆಡಳಿತ ಬರುತ್ತದೆ. ಅವರಿಗೆ ಕಳಕಳಿಯಿಲ್ಲ. ಜನ ಎದ್ದಿದ್ದಕ್ಕೆ ಕ್ರಮ ಅಂತಿದ್ದಾರೆ. ಮನೆಮನೆಗಳಲ್ಲಿ ಜನ ಮಾತಾಡುತ್ತಿದ್ದಾರೆ. ಇಂಟಲಿಜನ್ಸ್ ರಿಪೋರ್ಟ್ ಹೋಗಿರಬಹುದು. ಆದ್ದರಿಂದಲಾಸ್ ಆಗುತ್ತೆ ಎಂದು ರಾಜಕೀಯಕ್ಕಾಗಿ ಈಗ ಕ್ರಮ ಎನ್ನುತ್ತಿದ್ದಾರೆ. ಏನಾಗಿದೆ ನಿರಂಜನ ಅಂತಾ ಸಿಎಂ ಅವರದೇ‌ ಭಾಷೆಯಲ್ಲಿ ಕೇಳಬೇಕಿತ್ತು ಎಂದರು. ಇದರ ಜೊತೆಗೆ ಸಚಿವ ಸಂತೋಷ್ ಲಾಡ್ ಮೊದಲ ದಿನ ಭೇಟಿ‌ ಕೊಟ್ಟಾಗ ಸಿಎಮ್ ಜೊತೆ ಮಾತಾಡಿಸಬೇಕಿತ್ತು.
ನಾವು ಹಿಂದೂ ಮುಸ್ಲಿಂ ಭೇದಭಾವ ಮಾಡಲ್ಲ. ಯಾರ ವಿರುದ್ಧ ಅನ್ಯಾಯವಾದರೂ ನಾವು‌ ವಿರೋಧಿಸುತ್ತೇವೆ ಎಂದರು. ಬರ ಪರಿಹಾರದಲ್ಲಿ ಕಾಂಗ್ರೆಸ್‌ ರಾಜಕಾರಣರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತ ನಡೆಸಿ ಖಜಾನೆ ಲೂಟಿ ಮಾಡಿದ್ದು, ಸರಕಾರ ಪಾಪರ್‌ ಆಗಿದೆ. ತನ್ನ ತಪ್ಪು ಮುಚ್ಚಿಕೊಳ್ಳಲು ಬರ ಪರಿಹಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು. ‘‘ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಚುನಾವಣೆ ಆಯೋಗದ ಅನುಮತಿ ಕೇಳಿದ್ದು, ಅದನ್ನು ಅವರಿಗೆ ತಿಳಿಸಲಾಗಿದೆ. ಆದರೆ, ಎಲ್ಲಾ ನಾವೇ ಕೊಡುವುದಾದರೆ ಇಲ್ಲಿ ಕಾಂಗ್ರೆಸ್‌ ಸರಕಾರ ಏನು ಮಾಡುತ್ತಿದೆ’’ ಎಂದು ಪ್ರಶ್ನಿಸಿದರು.‘‘ರಾಜ್ಯದಲ್ಲಿ ಹಿಂದೆ ಬಿಎಸ್‌ವೈ ಸಿಎಂ ಆಗಿದ್ದಾಗ ಕೇಂದ್ರದ ಅನುದಾನ ಕಾಯದೆ 15,000 ರೂ., 20000 ರೂ.
ಬರ ಪರಿಹಾರ ನೀಡಿದ್ದಾರೆ. ಆದರೆ ನೀವೇನು ಮಾಡಿದ್ದೀರಿ ಸಿದ್ದರಾಮಯ್ಯ ಅವರೇ? ರೈತರಿಗೆ ಬರೀ 2000 ಕೊಟ್ಟು ಕೈ ತೊಳೆದುಕೊಂಡಿದ್ದೀರಿ’’ ಎಂದು ಜೋಶಿ ಹರಿಹಾಯ್ದರು. ರಾಜ್ಯಗಳ ವಿಚಾರದಲ್ಲಿ ತಾರತಮ್ಯ ಇಲ್ಲ‘‘ಕೇಂದ್ರ ಸರಕಾರಕ್ಕೆ ಎಲ್ಲ ರಾಜ್ಯಗಳು ಒಂದೇ. ಯಾವುದೇ ತಾರತಮ್ಯ ಮಾಡದೇ ಎಲ್ಲ ರಾಜ್ಯಗಳನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತದೆ. ಕಾಂಗ್ರೆಸ್‌ ಪಕ್ಷ ಇದರಲ್ಲಿ ರಾಜಕಾರಣ ಮಾಡುತ್ತಿದೆ’’ ಎಂದು ಟೀಕಿಸಿದರು.‘‘ಕೇಂದ್ರ ಸರಕಾರ ಬರ ಪರಿಹಾರಕ್ಕಾಗಿ ರಾಜ್ಯಕ್ಕೆ ಮುಂಗಡವಾಗಿಯೇ 900 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಯುಪಿಎ ಅವಧಿಗಿಂತ ಹೆಚ್ಚಿನ ಅನುದಾನವನ್ನು ನಾವು ನೀಡಿದ್ದೇವೆ’’ ಎಂದು ತಿಳಿಸಿದರು.

READ ON APP