Hero Image

Night Mantra: ರಾತ್ರಿ ಈ ಮಂತ್ರಗಳನ್ನು ಪಠಿಸಿದರೆ ಸಖತ್ ನಿದ್ದೆ ಬರುತ್ತೆ.!

ಮಂತ್ರಗಳಿಗೆ ಅಗಾಧ ಶಕ್ತಿಯಿರುತ್ತದೆ. ಅವುಗಳಿಗೆ ಎಷ್ಟು ಶಕ್ತಿಯಿರುತ್ತದೆಯೆಂದರೆ, ಓರ್ವ ವ್ಯಕ್ತಿಯನ್ನು ತಮ್ಮ ನಿಯಂತ್ರಣಕ್ಕೆ ತರಬಲ್ಲ ಶಕ್ತಿಯನ್ನು ಹೊಂದಿರುತ್ತದೆ. ಮಂತ್ರಗಳನ್ನು ನಾವು ಪಠಿಸುವ ಮೂಲಕ ಅದೆಷ್ಟೇ ದೊಡ್ಡ ಸಮಸ್ಯೆಗಳಾದರೂ ಕ್ಷಣಾರ್ಧದಲ್ಲೇ ನಿವಾರಿಸುವಂತಹ ಸಾಮರ್ಥ್ಯವಿರುತ್ತದೆ. ಸಾಮಾನ್ಯವಾಗಿ ನಾವು ಹಗಲಿನಲ್ಲಿ ಮಂತ್ರಗಳನ್ನು ಪಠಿಸುವುದನ್ನು ನೋಡಿರುತ್ತೇವೆ.
ಅದೇ ರೀತಿ ರಾತ್ರಿ ಸಮಯದಲ್ಲೂ ಕೆಲವೊಂದು ಮಂತ್ರಗಳನ್ನು ಪಠಿಸಲಾಗುತ್ತದೆ. Sanatan Dharma: ಸನಾತನ ಧರ್ಮದ ನಿಯಮಗಳಿಂದ ನಿಮಗೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.! ರಾತ್ರಿ ಮಲಗುವ ಮುನ್ನ ನಾವು ಮಂತ್ರಗಳನ್ನು ಪಠಿಸಿ ನಂತರ ನಿದ್ರೆಗೆ ಜಾರುವುದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ರಾತ್ರಿ ಮಲಗುವ ಮುನ್ನ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಯಶಸ್ಸಿನ ಮಾರ್ಗವು ಅತ್ಯಂತ ಸರಳವಾಗಿ ತೆರೆದುಕೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ನಾವು ಯಾವ ಮಂತ್ರಗಳನ್ನು ಪಠಿಸಬೇಕೆನ್ನುವುದನ್ನು ಇಲ್ಲಿ ನೋಡೋಣ.. 1. ಗಾಯತ್ರಿ ಮಂತ್ರ ಪಠಿಸಿ: ರಾತ್ರಿ ಮಲಗುವ ಮುನ್ನ ಮಂತ್ರಗಳನ್ನು ಪಠಿಸಬೇಕೆಂದುಕೊಂಡಿದ್ದರೆ ಯಾವ ಮಂತ್ರವನ್ನು ಪಠಿಸಬೇಕೆಂದು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಹೌದು ರಾತ್ರಿ ಸಮಯದಲ್ಲಿ ನಾವು ಪಠಿಸಬೇಕಾದ ಮಂತ್ರಗಳಲ್ಲಿ ಮೊದಲನೇಯದು ಗಾಯತ್ರಿ ಮಂತ್ರವಾಗಿದೆ. ರಾತ್ರಿ ಮಲಗುವ ಮುನ್ನ ಗಾಯತ್ರಿ ಮಂತ್ರವನ್ನು ಪಠಿಸಿ ಮಲಗುವುದರಿಂದ ಕೆಟ್ಟ ಕನಸುಗಳು ನಿಮ್ಮನ್ನು ಕಾಡುವುದಿಲ್ಲ. ನಿದ್ರೆಯೂ ಚೆನ್ನಾಗಿ ಬರುತ್ತದೆ. Abrahamic Religion: ವಿಶ್ವದ ಹೊಸ ಧರ್ಮ ಅಬ್ರಹಾಮಿಕ್ ಧರ್ಮ.! ಈ ಧರ್ಮದ ಮಹತ್ವವೇನು.? ಇದನ್ನು ಹೊರತುಪಡಿಸಿ, ನೀವು ಮಾನಸಿಕ ಶಾಂತಿಯನ್ನು ಪಡೆದುಕೊಳ್ಳುತ್ತೀರಿ. ಇದು ಸುಖಕರ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ. ಇದರೊಂದಿಗೆ ನಿತ್ಯ ನಾವು ಗಾಯತ್ರಿ ಮಂತ್ರ ಪಠಿಸುವುದರಿಂದ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. 2. ಮುಕುಂದ ಮಂತ್ರ:
ಗಾಯತ್ರಿ ಮಂತ್ರವನ್ನು ಹೊರತುಪಡಿಸಿ ನಾವು ರಾತ್ರಿ ಮಲಗುವ ಮುನ್ನ ''ಹರ ಹರ ಮುಕುಂದ'' ಎನ್ನುವ ಶ್ರೀಕೃಷ್ಣನ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ಮಾನಸಿಕ ಶಾಂತಿ ದೊರೆಯುತ್ತದೆ ಮತ್ತು ಜೀವನವು ತೊಂದರೆಗಳಿಂದ ಮುಕ್ತವಾಗುತ್ತದೆ. 3. ಒತ್ತಡದಿಂದ ಮುಕ್ತಿಗಾಗಿ ಮಂತ್ರ: ರಾತ್ರಿ ನೀವು ಎಲ್ಲಾ ರೀತಿಯ ಒತ್ತಡದಿಂದ ಮುಕ್ತರಾಗಿ ಮಲಗಬೇಕೆಂದು ಬಯಸಿದರೆ ಮೊದಲು ''ಓಂ ಸಾ ತಾ ನಾ ಮಾ'' ಎನ್ನುವ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮನ್ನು ಕಾಡುತ್ತಿರುವ ನಿದ್ರಾಹೀನತೆ ಸಮಸ್ಯೆಯು ದೂರಾಗುತ್ತದೆ. Hanuman Jayanti 2024 Wishes: ಜೈ ಜೈ ಜೈ ಜೈ ಭಜರಂಗಿ.. ಹನುಮಾನ್‌ 4. ಭಯ ಮುಕ್ತಿಗಾಗಿ ಮಂತ್ರ:
ಭಯದಿಂದ ನಿಮಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲವಾದರೆ, ''ಅಂಗ ಸಂಗ ವಾಹೇಗುರು'' ಎನ್ನುವ ಮಂತ್ರವನ್ನು ಪಠಿಸಬೇಕು. ಈ ಮಂತ್ರದ ಪಠಣವು ನಿಮ್ಮ ಮನಸ್ಸಿನಲ್ಲಿನ ಭಯವನ್ನು ಹೋಗಲಾಡಿಸುತ್ತದೆ ಮತ್ತು ಮಾನಸಿಕ ಶಾಂತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಮೇಲಿನ 4 ಮಂತ್ರಗಳನ್ನು ನೀವು ರಾತ್ರಿ ಮಲಗುವ ಮುನ್ನ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಬಾರಿ ಪಠಿಸಿ. ಈ ಮಂತ್ರಗಳನ್ನು ನೀವು ಅಷ್ಟೇ ಬಾರಿ ಪಠಿಸಬೇಕು, ಇಷ್ಟೇ ಬಾರಿ ಪಠಿಸಬೇಕೆನ್ನುವ ನಿಯಮಗಳಿಲ್ಲ.

READ ON APP