Hero Image

Thursday Tulsi Puja: ಗುರುವಾರ ತುಳಸಿಗೆ ಹೀಗೆ ಮಾಡಿದರೆ ಹಣ ಉಕ್ಕಿ ಬರುತ್ತೆ.!

ಧಾರ್ಮಿಕ ಗ್ರಂಥಗಳ ಪ್ರಕಾರ, ಯಾವ ಮನೆಯಲ್ಲಿ ತುಳಸಿ ಗಿಡವಿರುತ್ತದೆಯೋ ಆ ಮನೆಯಲ್ಲಿ ಸದಾಕಾಲ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ. ತುಳಸಿಯನ್ನು ಪ್ರತಿನಿತ್ಯ ಶುದ್ಧತೆಯೊಂದಿಗೆ ಪೂಜೆ ಮಾಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಗುರುವಾರದಂದು ತುಳಸಿಯ ಪೂಜೆಯು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಗುರುವಾರವು ಶ್ರೀ ಹರಿ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ತುಳಸಿಯು ತಾಯಿ ಲಕ್ಷ್ಮಿಯ ರೂಪವಾಗಿದೆ.
ಅಂತಹ ಪರಿಸ್ಥಿತಿಯಲ್ಲಿ, ಗುರುವಾರದಂದು ಭಗವಾನ್ ವಿಷ್ಣುವಿನ ಜೊತೆಗೆ ತುಳಸಿಯನ್ನು ಪೂಜಿಸಿದರೆ, ಆಗ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಅವಳ ಆಶೀರ್ವಾದವನ್ನು ಮಳೆಯಂತೆ ಸುರಿಸುತ್ತಾಳೆ. ಗುರುವಾರದ ದಿನದಂದು ನಾವು ತುಳಸಿಗೆ ಸಂಬಂಧಿಸಿದ ಯಾವ ಕೆಲಸಗಳನ್ನು ಮಾಡಬೇಕು.?
​ದುರಾದೃಷ್ಟ ದೂರಾಗುವುದು​

ಶಾಸ್ತ್ರದ ಪ್ರಕಾರ, ಗುರುವಾರದ ದಿನದಂದು ವಿಧಿವಿಧಾನಗಳ ಪ್ರಕಾರ ಭಗವಾನ್ ವಿಷ್ಣುವನ್ನು ಪೂಜಿಸಬೇಕು. ನಂತರ ತುಳಸಿ ಗಿಡವನ್ನು ನಿಯಮಾನುಸಾರ ಪೂಜಿಸಬೇಕು. ಈ ದಿನ ತುಳಸಿ ಬೇರಿಗೆ ಹಸಿ ಹಾಲನ್ನು ಅರ್ಪಿಸಿದರೆ ದುರಾದೃಷ್ಟವು ನಿಮ್ಮಿಂದ ಮಾಯವಾಗುತ್ತದೆ. PC: Pixabay

Rudraksha Wearing Tips: ರುದ್ರಾಕ್ಷಿ ಧರಿಸಲು ನಿಮ್ಮ ವಯಸ್ಸು ಎಷ್ಟಾಗಿರಬೇಕು ಗೊತ್ತೇ.?


​ಲಕ್ಷ್ಮಿ ನಾರಾಯಣರ ಕೃಪೆ​

ಮನೆಯಲ್ಲಿ ತುಳಸಿ ಗಿಡವಿದ್ದರೆ ಅದರ ಮುಂದೆ ಅಥವಾ ಅದರ ಬಳಿ ಪ್ರತಿದಿನ ಸಂಜೆ ದೇಸಿ ತುಪ್ಪದ ದೀಪವನ್ನು ಹಚ್ಚಬೇಕು. ಗುರುವಾರ ವಿಶೇಷವಾಗಿ ಈ ಕೆಲಸವನ್ನು ನೀವು ಮಾಡಬೇಕು. ಹೀಗೆ ಮಾಡುವುದರಿಂದ ಭಗವಾನ್ ವಿಷ್ಣು ಮಾತ್ರವಲ್ಲ ತಾಯಿ ಲಕ್ಷ್ಮಿಯೂ ಪ್ರಸನ್ನಳಾಗಿ ನಿಮ್ಮನ್ನು ಆಶೀರ್ವದಿಸುತ್ತಾಳೆ. ಏಕೆಂದರೆ ತುಳಸಿಯೆಂದರೆ ಶ್ರೀಹರಿಗೆ ಹೇಗೆ ಪ್ರಿಯವೋ ಹಾಗೇ ತಾಯಿ ಲಕ್ಷ್ಮಿಗೂ ಪ್ರಿಯವಾದ ಸಸ್ಯವಾಗಿದೆ. PC: Pexel


​ಯಶಸ್ಸಿಗಾಗಿ ಹೀಗೆ ಮಾಡಿ​

ಶಾಸ್ತ್ರದ ಪ್ರಕಾರ, ಗುರುವಾರದ ದಿನದಂದು ಮುಂಜಾನೆ ನೀವು ಸ್ನಾನ ಮಾಡುವಾಗ, ಸ್ನಾನದ ನೀರಿಗೆ 11 ತುಳಸಿ ಎಲೆಗಳನ್ನು ಮತ್ತು ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ಗುರು ಬಲಗೊಂಡು ಜೀವನದಲ್ಲಿ ಯಶಸ್ಸು ಸಿಗುವಂತೆ ಮಾಡುತ್ತಾನೆ. ಇದು ನಿಮ್ಮ ಜೀವನದಲ್ಲಿ ಪ್ರಗತಿಯ ಮಾರ್ಗವನ್ನು ಸುಸೂತ್ರಗೊಳಿಸುತ್ತದೆ. Kumkum Daan: ಕುಂಕುಮ ದಾನ ಮಾಡುವುದರ ಧಾರ್ಮಿಕ, ಜ್ಯೋತಿಷ್ಯ ಮಹತ್ವವೇನು.?


​ಶುಭ ಫಲಕ್ಕಾಗಿ​

ಗುರುವಾರದ ದಿನದಂದು ನೀವು ತುಳಸಿ ಗಿಡಕ್ಕೆ ನೀರು ಹಾಕಿದ ನಂತರ ಮೂರು ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು. ಈ ಪರಿಹಾರವನ್ನು ಪ್ರತಿದಿನ ಮಾಡಿದರೆ ಅದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ತುಳಸಿಗೆ ಪ್ರದಕ್ಷಿಣೆಯನ್ನು ಹಾಕುವಾಗ ನಿಮ್ಮ ಮೈ, ಕೈಗಳು ತುಳಸಿ ಗಿಡಕ್ಕೆ ತಗುಲದಂತೆ ಪ್ರದಕ್ಷಿಣೆಯನ್ನು ಹಾಕಬೇಕು.


​ಹಣದ ಲಾಭಕ್ಕಾಗಿ​

ಇದಲ್ಲದೆ, ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ಹಳದಿ ಬಟ್ಟೆಯಲ್ಲಿ ಕಟ್ಟಿರಿ. ನಂತರ ಅದನ್ನು ನೀವು ಸುರಕ್ಷಿತವಾದ ಸ್ಥಳದಲ್ಲಿ ಅಥವಾ ಹಣ ಇಡುವ ಜಾಗದಲ್ಲಿ ಇಡಬೇಕು. ಶಾಸ್ತ್ರದ ಪ್ರಕಾರ, ಈ ಪರಿಹಾರವನ್ನು ಅಳವಡಿಸಿಕೊಳ್ಳುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಸದೃಢವಾಗಿರುತ್ತದೆ. PC: Pexel

READ ON APP