Hero Image

Kumkum Daan: ಕುಂಕುಮ ದಾನ ಮಾಡುವುದರ ಧಾರ್ಮಿಕ, ಜ್ಯೋತಿಷ್ಯ ಮಹತ್ವವೇನು.?

ವಿವಾಹದ ವೇಳೆ ಸಿಂಧೂರವನ್ನು ದಾನ ಮಾಡುವುದು ತುಂಬಾನೇ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಸಿಂಧೂರ ದಾನವು ಧಾರ್ಮಿಕ ಮತ್ತು ಜ್ಯೋತಿಷ್ಟ ಮಹತ್ವವನ್ನು ಒಳಗೊಂಡಿರುವ ಪದ್ಧತಿಯಾಗಿದೆ. ಪತಿಯು ತನ್ನ ಪತ್ನಿಗೆ ಸಿಂಧೂರವನ್ನು ಹಚ್ಚುವುದು ಹಿಂದೂ ಧರ್ಮದಲ್ಲಿನ ಪುರಾತನ ಸಂಪ್ರದಾಯವಾಗಿದೆ. ಇದು ವೈವಾಹಿಕ ಜೀವನದ ಆನಂದದ ಸಂಕೇತವೆಂದು ಉಲ್ಲೇಖಿಸಲಾಗಿದೆ. ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಪತಿಯು ದೀರ್ಘಾಯುಷ್ಯವನ್ನು ಪಡೆದುಕೊಳ್ಳುತ್ತಾನೆ.
ಇದು ಪತಿಯ ಸಂತೋಷ ಮತ್ತು ಶಾಂತಿಗೆ ಪ್ರಮುಖವೆಂದು ಪರಿಗಣಿಸಲಾಗುತ್ತದೆ. Tulsi Plant: ಈ ತುಳಸಿ ಗಿಡ ಮನೆಯಲ್ಲಿದ್ದರೆ ಅಪಾಯ ತಪ್ಪಿದ್ದಲ್ಲ.! ಸಿಂಧೂರವು ಕೆಂಪು ಬಣ್ಣದಲ್ಲಿರುತ್ತದೆ. ಇದು ಪ್ರೀತಿ ಮತ್ತು ರಕ್ತದ ಸಂಕೇತವಾಗಿದೆ. ಪತಿ ಮತ್ತು ಪತ್ನಿಯ ನಡುವಿನ ಪ್ರೀತಿ ಮತ್ತು ಸಂಬಂಧದ ಆಳವನ್ನು ತೋರಿಸುತ್ತದೆ. ಸಿಂಧೂರ ದಾನವನ್ನು ಅನುಸರಿಸುವುದು ಜೀವನದಲ್ಲಿ ಅದೃಷ್ಟ, ಸಂಪತ್ತು, ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಇದಲ್ಲದೆ, ಇದು ಪತಿಯ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದ ರೂಪವೂ ಆಗಿದೆ. ಆದ್ದರಿಂದ, ಹಿಂದೂ ವಿವಾಹ ಕಾರ್ಯದಲ್ಲಿ ಸಿಂಧೂರದ ಪ್ರಾಮುಖ್ಯತೆ ತುಂಬಾ ಹೆಚ್ಚಾಗಿರುತ್ತದೆ ಮತ್ತು ಇದು ಪತಿಗೆ ಹೆಂಡತಿಗೆ ನಿಷ್ಠೆ ಮತ್ತು ಪ್ರೀತಿಯ ಸಂಕೇತವಾಗಿದೆ.
1. ಸಿಂಧೂರ ದಾನ ಮಾಡುವುದರ ಧಾರ್ಮಿಕ ಮಹತ್ವ: ಪತಿಯ ಮೇಲಿನ ಭಕ್ತಿಯ ಸಂಕೇತವಾಗಿ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳಲಾಗುತ್ತದೆ. ಕುಂಕುಮವನ್ನು ಸುಮಂಗಲಿತನದ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ವಿವಾಹದ ಸಮಯದಲ್ಲಿ, ಪತಿಯಾದವನು ತನ್ನ ಪತ್ನಿಯ ಹಣೆಗೆ ಕುಂಕುಮವನ್ನು ಇಡುವ ಮೂಲಕ ತಾನು ಆಕೆಯ ಪತಿಯಾಗಿ ಸದಾಕಾಲ ಆಕೆಯನ್ನು ರಕ್ಷಿಸುತ್ತೇನೆ ಎನ್ನುವ ಭರವಸೆಯನ್ನು ನೀಡುವುದಾಗಿದೆ. ಸಿಂಧೂರದಾನವು ಪತ್ನಿ ತನ್ನ ಪತಿಯ ಮೇಲಿನ ಭಕ್ತಿಯ ಸಂಕೇತವಾಗಿದೆ ಮತ್ತು ಅವಳು ತನ್ನ ಜೀವನದುದ್ದಕ್ಕೂ ತನ್ನ ಪತಿಗೆ ಸಮರ್ಪಿತಳಾಗಿರುತ್ತಾಳೆ ಎಂದು ತೋರಿಸುತ್ತದೆ. Lucky Dream: ಈ ಕನಸುಗಳು ಕೇವಲ ಅದೃಷ್ಟವಂತರಿಗೆ ಮಾತ್ರ ಬೀಳುತ್ತೆ.! ಕುಂಕುಮವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿಯು ಸಂತೋಷ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದ್ದಾಳೆ. ಮದುವೆಯ ಸಮಯದಲ್ಲಿ, ಪತಿಯು ತನ್ನ ಪತ್ನಿಯ ಹಣೆಯ ಮೇಲೆ ಕುಂಕುಮವನ್ನು ಹಚ್ಚಿದಾಗ, ಲಕ್ಷ್ಮಿ ದೇವಿಯು ಯಾವಾಗಲೂ ಅವನ ಮನೆಯಲ್ಲಿ ನೆಲೆಸುತ್ತಾಳೆ. ಅವನಿಗೆ ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾಳೆ ಎನ್ನುವ ನಂಬಿಕೆಯಿದೆ. ಕುಂಕುಮವನ್ನು ಶಿವ ಮತ್ತು ಪಾರ್ವತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಭಗವಾನ್ ಶಿವ ಮತ್ತು ಪಾರ್ವತಿ ವಿವಾಹದ ಸಂಕೇತವಾಗಿದೆ.
2. ಸಿಂಧೂರ ದಾನದ ಜ್ಯೋತಿಷ್ಯ ಮಹತ್ವ: ಜ್ಯೋತಿಷ್ಯದ ಪ್ರಕಾರ, ಕುಂಕುಮವು ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಮಂಗಳವನ್ನು ಧೈರ್ಯ, ಶೌರ್ಯ ಮತ್ತು ಪುರುಷತ್ವದ ಗ್ರಹವೆಂದು ಪರಿಗಣಿಸಲಾಗಿದೆ. ಮದುವೆಯ ಸಮಯದಲ್ಲಿ, ಪತಿಯು ಪತ್ನಿಯ ಹಣೆಯ ಮೇಲೆ ಸಿಂಧೂರವನ್ನು ಹಚ್ಚುವುದರಿಂದ ಮಂಗಳ ಗ್ರಹವು ಶಾಂತವಾಗುತ್ತದೆ. ಪತಿ ಮತ್ತು ಪತ್ನಿಯ ನಡುವೆ ಪ್ರೀತಿ ಇದು ಸಾಮರಸ್ಯವನ್ನು ಕಾಪಾಡುತ್ತದೆ. ಜ್ಯೋತಿಷ್ಯದಲ್ಲಿ, ಸಿಂಧೂರವು ಮಹಿಳೆಯ ಜಾತಕದೊಂದಿಗೂ ಸಂಬಂಧವನ್ನು ಹೊಂದಿರುತ್ತದೆ ಎನ್ನುವ ನಂಬಿಕೆಯಿದೆ. Chanakya Niti: ಧರ್ಮಕ್ಕೆ ಇವುಗಳೇ ಮಾರಕ ಎಂದಿದ್ದಾರೆ ಚಾಣಕ್ಯ.! ವಿವಾಹಿತ ಮಹಿಳೆ ತನ್ನ ಹಣೆಗೆ ಕುಂಕುಮವನ್ನು ಹಚ್ಚಿಕೊಳ್ಳುವುದು ಕೇವಲ ಒಂದು ಆಚರಣೆಯಲ್ಲ, ಇದು ಧಾರ್ಮಿಕ ಮತ್ತು ಜ್ಯೋತಿಷ್ಯ ಮಹತ್ವವನ್ನು ಹೊಂದಿರುವ ವಿಷಯವಾಗಿದೆ. ಇದು ಪತಿ ಮತ್ತು ಪತ್ನಿಯ ನಡುವಿನ ಪ್ರೀತಿ, ಸಮರ್ಪಣೆ ಮತ್ತು ನಂಬಿಕೆಯ ಸಂಕೇತವಾಗಿದೆ. ಜ್ಯೋತಿಷ್ಯದಲ್ಲಿ, ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಸಾಧಿಸಲು ಸಿಂಧೂರ ದಾನವನ್ನು ಪ್ರಮುಖ ಸಾಧನವೆಂದು ಪರಿಗಣಿಸಲಾಗಿದೆ.

READ ON APP