Hero Image

Rudraksha Wearing Tips: ರುದ್ರಾಕ್ಷಿ ಧರಿಸಲು ನಿಮ್ಮ ವಯಸ್ಸು ಎಷ್ಟಾಗಿರಬೇಕು ಗೊತ್ತೇ.?

ರುದ್ರಾಕ್ಷಿಯು ಅತ್ಯಂತ ಪವಿತ್ರ ಮಣಿಯಾಗಿದೆ. ಇದು ಶಿವನ ರೂಪವೆಂದು, ಶಿವನ ಕಣ್ಣೀರಿನಿಂದ ಸೃಷ್ಟಿಯಾದ ಮಣಿ ಎಂದು ಗುರುತಿಸಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ವಿಶೇಷ ಆಶೀರ್ವಾದ ದೊರೆಯುತ್ತದೆ. ರುದ್ರಾಕ್ಷಿಗಳಲ್ಲಿ ಅನೇಕ ಮುಖದ ರುದ್ರಾಕ್ಷಿಗಳಿವೆ. ಪ್ರತಿಯೊಂದು ಮುಖದ ರುದ್ರಾಕ್ಷಿಯು ಅದರದ್ದೇ ಆದ ಪ್ರಯೋಜನವನ್ನು, ಮಹತ್ವವನ್ನು ಒಳಗೊಂಡಿದೆ. ರುದ್ರಾಕ್ಷಿಯನ್ನು ಧರಿಸಿ ಎಷ್ಟು ದಿನಗಳ ನಂತರ ಅದು ತನ್ನ ಪ್ರಭಾವವನ್ನು ಬೀರಲು ಪ್ರಾರಂಭಿಸುತ್ತದೆ ಗೊತ್ತೇ.? ಈ ಲೇಖನ ಓದಿ..
Kumkum Daan: ಕುಂಕುಮ ದಾನ ಮಾಡುವುದರ ಧಾರ್ಮಿಕ, ಜ್ಯೋತಿಷ್ಯ ಮಹತ್ವವೇನು.? 1. ದೈಹಿಕ, ಮಾನಸಿಕ ಪ್ರಯೋಜನ:ರುದ್ರಾಕ್ಷಿಯನ್ನು ಧರಿಸುವುದರಿಂದ ಅಥವಾ ರುದ್ರಾಕ್ಷಿಯಿಂದ ತಯಾರಿಸಿದ ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ಇದರೊಂದಿಗೆ ಆ ವ್ಯಕ್ತಿಯ ಕುಟುಂಬದಲ್ಲಿ ಕೌಟುಂಬಿಕ ಸಂತೋಷ ಮತ್ತು ಶಾಂತಿ ಉಂಟಾಗುತ್ತದೆ. 2. ಆರೋಗ್ಯದ ಲಾಭ:ನಂಬಿಕೆಯ ಪ್ರಕಾರ, ನಾವು ರುದ್ರಾಕ್ಷಿ ಮಣಿಯನ್ನು ಧರಿಸುವುದರಿಂದ ಆರೋಗ್ಯದಿಂದ ಹಿಡಿದು ವೃತ್ತಿಜೀವನದವರೆಗೆ ಧನಾತ್ಮಕ ಪರಿಣಾಮವನ್ನು ಅನುಭವಿಸುತ್ತಾನೆ. ರುದ್ರಾಕ್ಷಿ ಧಾರಣೆಯು ವ್ಯಕ್ತಿಗೆ ಉತ್ತಮ ಆರೋಗ್ಯದ ವರವನ್ನು ತರುತ್ತದೆ ಹಾಗೂ ಅವನು ತನ್ನ ವೃತ್ತಿಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. Tulsi Plant: ಈ ತುಳಸಿ ಗಿಡ ಮನೆಯಲ್ಲಿದ್ದರೆ ಅಪಾಯ ತಪ್ಪಿದ್ದಲ್ಲ.! 3. ಶನಿ ದೋಷ ನಿವಾರಣೆ:
ಜಾತಕದಲ್ಲಿ ಶನಿಯ ಅಶುಭ ಸ್ಥಾನದಿಂದಾಗಿ ನೀವು ಶನಿ ದೋಷವನ್ನು, ಆರೋಗ್ಯ ಸಮಸ್ಯೆಗಳನ್ನು, ಹಣದ ಸಮಸ್ಯೆಗಳನ್ನು, ಉದ್ಯೋಗ ಸಮಸ್ಯೆಗಳನ್ನು ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಆ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸುವುದು ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ತರುತ್ತದೆ. ನಿಮ್ಮಲ್ಲಿಯೂ ಈ ಸಮಸ್ಯೆಗಳಿದ್ದರೆ ನೀವು ರುದ್ರಾಕ್ಷಿ ಮಾಲೆಯನ್ನು ಧರಿಸಬೇಕು. 4. ಪಂಚಮುಖಿ ರುದ್ರಾಕ್ಷಿ:ನಾವೀಗಾಗಲೇ ಹೇಳಿರುವಂತೆ ರುದ್ರಾಕ್ಷಿಯನ್ನು ನಾನಾ ವಿಧಗಳಿವೆ. ಅವುಗಳಲ್ಲಿ ಪಂಚಮುಖಿ ರುದ್ರಾಕ್ಷಿ ಅಂದರೆ 5 ಮುಖದ ರುದ್ರಾಕ್ಷಿಯನ್ನು ಧರಿಸುವುದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ರುದ್ರಾಕ್ಷಿಯನ್ನು ಧರಿಸುವುದು ನಮಗೆ ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆಯಿದೆ. 5 ಮುಖದ ಅಥವಾ ಪಂಚಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ನಾವು ಆರ್ಥಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದು ನಿಮಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನಲಾಗಿದೆ. Lucky Dream: ಈ ಕನಸುಗಳು ಕೇವಲ ಅದೃಷ್ಟವಂತರಿಗೆ ಮಾತ್ರ 5. ರುದ್ರಾಕ್ಷಿ ಪ್ರಭಾವಗೊಳ್ಳಲು ಎಷ್ಟು ದಿನ ಬೇಕು.?
ಒಂದು ವೇಳೆ ನೀವು ಧರಿಸಿದ ರುದ್ರಾಕ್ಷಿಯು ನೈಜ ರುದ್ರಾಕ್ಷಿಯಾಗಿದ್ದರೆ ಅಥವಾ ಅದು ಪರಿಣಾಮಕಾರಿ ರುದ್ರಾಕ್ಷಿಯಾಗಿದ್ದರೆ, ನೀವು ಆ ರುದ್ರಾಕ್ಷಿಯನ್ನು ಧರಿಸಿದ ಕೇವಲ 7 ದಿನಗಳೊಳಗೆ ಅದು ತನ್ನ ಶಕ್ತಿಯನ್ನು ಅಥವಾ ಕೆಲಸವನ್ನು ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಜೀವನದಲ್ಲಿ ನೀವು ಧನಾತ್ಮಕ ಬದಲಾವಣೆಗಳನ್ನು ಕಾಣಲು ಪ್ರಾರಂಭಿಸುತ್ತೀರಿ. ಹಾಗೂ ಪಂಚಮುಖಿ ರುದ್ರಾಕ್ಷಿಯನ್ನು 14 ವರ್ಷ ಮೇಲ್ಪಟ್ಟವರು ಧರಿಸುವುದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ನೀವು ಧರಿಸುವ ರುದ್ರಾಕ್ಷಿಯಲ್ಲೇ ಪಂಚಮುಖಿ ರುದ್ರಾಕ್ಷಿಗೆ ಹೆಚ್ಚು ಮಹತ್ವವಿದೆ. ಈ ರುದ್ರಾಕ್ಷಿಯನ್ನು 14 ವರ್ಷ ಮೇಲ್ಪಟ್ಟವರು ಧರಿಸಬೇಕು. ರುದ್ರಾಕ್ಷಿ ಧರಿಸುವಾಗ ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅದನ್ನು ಧರಿಸುವ ನಿಯಮ ಮತ್ತು ವಿಧಾನಗಳಾಗಿವೆ.

READ ON APP