Hero Image

ಬೆಂಗಳೂರಲ್ಲಿ ಆರ್ಸಿಬಿ vs ಕೆಕೆಆರ್ ಕದನ, ಇಲ್ಲಿದೆ ಪ್ಲೇಯಿಂಗ್ 11 ವಿವರ!

ಬೆಂಗಳೂರು: ತವರಿನಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಪ್ರವಾಸಿ ಪಂಜಾಬ್‌ ಕಿಂಗ್ಸ್‌ ಎದುರು 4 ವಿಕೆಟ್‌ಗಳ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ಅಪಾಯಕಾರಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು ಶುಕ್ರವಾರ (ಮಾರ್ಚ್ 29) ಪೈಪೋಟಿ ನಡೆಸಲು ಅಜ್ಜಾಗಿದೆ.ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಗೆದ್ದು ಬೀಗಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಇದೀಗ ಆರ್‌ಸಿಬಿ ಎದುರು ಅಬ್ಬರಿಸಲು ಎದುರು ನೋಡುತ್ತಿದೆ.
ಎರಡೂ ತಂಡಗಳಲ್ಲಿ ದೈತ್ಯ ಬ್ಯಾಟರ್‌ಗಳ ದಂಡೇ ಇದ್ದು, ಕಿರಿದಾದ ಬೌಂಡರಿ ಹೊಮದಿರುವ ಎಂ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ರನ್‌ ಹೊಳೆ ಹರಿಯುವ ಎಲ್ಲಾ ಸಾಧ್ಯತೆಗಳಿವೆ. ಎರಡೂ ತಂಡಗಳು ಸರಾಸರಿ 200 ರನ್‌ ಕಲೆಹಾಕುವ ಸಾಧ್ಯತೆ ಇದ್ದು, ಕಡಿಮೆ ರನ್‌ ಬಿಟ್ಟುಕೊಡುವ ತಂಡಕ್ಕೆ ಇಲ್ಲಿ ಗೆಲುವು ಕೈ ಹಿಡಿಯಲಿದೆ. ಟಾಸ್‌ ಗೆದ್ದ ತಂಡ ಬೆಂಗಳೂರು ಪಿಚ್‌ನಲ್ಲಿ ಸಹಜವಾಗಿಯೇ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಲಿದೆ. ಆರ್‌ಸಿಬಿ-ಕೆಕೆಆರ್‌ ಮುಖಾಮುಖಿ ದಾಖಲೆ2008ರಿಂದ ಈವರೆಗೆ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳು ಒಟ್ಟಾರೆ 32 ಬಾರಿ ಮುಖಾಮುಖಿ ಆಗಿವೆ ಇದರಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಪ್ರಾಬಲ್ಯ ಮೆರೆದು ಒಟ್ಟು 18 ಪಂದ್ಯಗಳಲ್ಲಿ ಜಯ ದಕ್ಕಿಸಿಕೊಂಡಿದೆ.
ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಕಳೆದ 5 ಪಂದ್ಯಗಳ ಮುಖಾಮುಖಿ ದಾಖಲೆಯಲ್ಲಿ ಕೆಕೆಆರ್‌ ತಂಡ 3-2 ಅಂತರದ ಮೇಲುಗೈ ಸಾಧಿಸಿದೆ. ಇನ್ನು ಎಂ ಚಿನ್ನಸ್ವಾಮಿ ಕ್ರೀಡಾಂಗನದಲ್ಲಿ ಕೆಕೆಆರ್‌ ತಂಡ ಆರ್‌ಸಿಬಿ ಎದುರು 6 ಬಾರಿ ಜಯ ದಕ್ಕಿಸಿಕೊಂಡಿದೆ. ಆತಿಥೇಯ ತಂಡ 4 ಬಾರಿ ಯಶಸ್ಸು ತನ್ನದಾಗಿಸಿಕೊಂಡಿದೆ. ಆರ್‌ಸಿಬಿ ಪ್ಲೇಯಿಂಗ್‌ 11 ಆಯ್ಕೆಯಲ್ಲಿ ಒಂದು ಬದಲಾವಣೆ ಸಾಧ್ಯತೆರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ತಂದುಕೊಳ್ಳುವ ಸಾಧ್ಯತೆ ಇದ್ದೆ. ಕಳೆದ ಎರಡು ಪಂದ್ಯಗಳಲ್ಲಿ ಸಾಧಾರಣ ಪ್ರದರ್ಸನ ನೀಡಿರುವ ವಿದೇಶಿ ವೇಗದ ಬೌಲರ್‌ ಅಲ್ಜಾರಿ ಜೋಸೆಫ್‌ ಅವರನ್ನು ಹೊರಗಿಟ್ಟು ಅವರ ಜಾಗದಲ್ಲಿ ಕಿವೀಸ್‌ನ ಅನುಭವಿ ಫಾಸ್ಟ್‌ ಬೌಲರ್‌ ಲಾಕಿ ಫರ್ಗ್ಯೂಸನ್‌ ಅವರನ್ನು ಆಡಿಸುವ ಸಾಧ್ಯತೆ ಇದೆ.
ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ 1101. ಫಾಫ್ ಡು ಪ್ಲೆಸಿಸ್ (ಓಪನರ್‌/ ನಾಯಕ)02. ವಿರಾಟ್ ಕೊಹ್ಲಿ (ಓಪನರ್‌)03. ಕ್ಯಾಮರೂನ್ ಗ್ರೀನ್ (ಆಲ್‌ರೌಂಡರ್‌)04. ರಜತ್ ಪಾಟಿದಾರ್ (ಬ್ಯಾಟರ್‌)05. ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್‌ರೌಂಡರ್‌)06. ಅನುಜ್ ರಾವತ್ (ವಿಕೆಟ್‌ಕೀಪರ್‌/ ಬ್ಯಾಟರ್‌)07. ದಿನೇಶ್ ಕಾರ್ತಿಕ್ (ಬ್ಯಾಟರ್‌)08. ಮಯಾಂಕ್ ದಾಗರ್ (ಆಲ್‌ರೌಂಡರ್‌)09. ಲಾಕಿ ಫರ್ಗುಸನ್ (ಬಲಗೈ ವೇಗಿ)11. ಯಶ್ ದಯಾಳ್ (ಎಡಗೈ ವೇಗಿ)12. ಮೊಹಮ್ಮದ್ ಸಿರಾಜ್ (ಬಲಗೈ ವೇಗಿ) ಕೆಕೆಆರ್‌ ತಂಡದ ಪ್ಲೇಯಿಂಗ್‌ 1101. ಫಿಲ್ ಸಾಲ್ಟ್ (ಓಪನರ್‌)02. ಸುನಿಲ್ ನರೈನ್ (ಆಲ್‌ರೌಂಡರ್‌)03.
ವೆಂಕಟೇಶ ಅಯ್ಯರ್ (ಆಲ್‌ರೌಂಡರ್‌)04. ಶ್ರೇಯಸ್‌ ಅಯ್ಯರ್‌ (ನಾಯಕ/ ಬ್ಯಾಟರ್‌)05. ನಿತೀಶ್ ರಾಣಾ (ಬ್ಯಾಟರ್‌)06. ರಮಣದೀಪ್ ಸಿಂಗ್ (ಆಲ್‌ರೌಂಡರ್‌)07. ರಿಂಕು ಸಿಂಗ್ (ಬ್ಯಾಟರ್‌)08. ಆಂಡ್ರೆ ರಸೆಲ್ (ಆಲ್‌ರೌಂಡರ್‌)09. ಮಿಚೆಲ್ ಸ್ಟಾರ್ಕ್ (ಎಡಗೈ ವೇಗಿ)10. ಹರ್ಷಿತ್ ರಾಣಾ (ಬಲಗೈ ವೇಗಿ)11. ವರುಣ್ ಚಕ್ರವರ್ತಿ (ಮಿಸ್ಟರಿ ಸ್ಪಿನ್ನರ್‌)

READ ON APP