Hero Image

Android 15 Beta ಬಿಡುಗಡೆ ಮಾಡಿದ ಗೂಗಲ್: ನೀವು ಅಪ್ಡೇಟ್ ಪಡೆಯಲು ಇಲ್ಲಿದೆ ವಿಧಾನ

ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರತಿದಿನವು ಹೊಸತು ಏನಾದರೂ ಸೃಷ್ಟಿಯಾಗುತ್ತಿರುತ್ತದೆ. ಇದರಿಂದ ಎಷ್ಟು ಲಾಭ ಇದೆಯೋ ಅಷ್ಟೆ ಅನಾನುಕೂಲಗಳು ಇವೆ. ಆದರೆ ಈ ತಂತ್ರಜ್ಞಾನ ಬಳಕೆ ಮಾಡುವವರು ಎಚ್ಚರದಿಂದ ಇರಬೇಕು ಅಷ್ಟೆ. ಈ ವಿಷಯ ಏನಿಕ್ಕೆ ಹೇಳ್ತಿದ್ದೀವಿ ಅಂದ್ರೆ ಇಂದು ಸ್ಮಾರ್ಟ್‌ಫೋನ್‌ ಬಳಕೆದಾರರು, ಐಫೋನ್‌ ಬಳಕೆದಾರರು ತಮ್ಮ ಪ್ರತಿದಿನದ ದೈನಂದಿನ ಹಲವು ಕೆಲಸಗಳಿಗೆ ಮೊಬೈಲ್‌ ಬಳಸುವುದು ಸಾಮಾನ್ಯ.
ಇವುಗಳಲ್ಲಿ ಇಂದು ಎಷ್ಟೋ ವ್ಯವಹಾರಗಳನ್ನು ನಡೆಸುವ ಕಾರಣ, ಸಾಕಷ್ಟು ಎಚ್ಚರದಿಂದ ಇರಬೇಕು. ಪ್ರತಿದಿನವು ಸಹ ಟೆಕ್‌ ಕ್ಷೇತ್ರದಲ್ಲಿ ಹೊಸ ಹೊಸ ಸಾಫ್ಟ್‌ವೇರ್‌, ಅಪ್ಲಿಕೇಶನ್‌, ಫೀಚರ್‌ಗಳು ಡೆವಲಪ್‌ ಆಗುವ ಕಾರಣ, ಇವುಗಳ ಅಪ್‌ಡೇಟ್‌ ಮೊಬೈಲ್‌ ಬಳಕೆದಾರರಿಗೆ ಇರಬೇಕು. ಟೆಕ್ನಾಲಜಿಯ ಹೊಸತನಗಳಿಂದ ಬಳಕೆದಾರರಿಗೆ ಎಷ್ಟು ಅನುಕೂಲಗಳಿವೆಯೋ, ಅಷ್ಟೆ ಅನುಕೂಲಗಳನ್ನು ಮೋಸಗಾರರು, ಆನ್‌ಲೈನ್‌ ಹ್ಯಾಕರ್‌ಗಳು ಸಹ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ವಂಚಕರಿಂದ ಮೋಸಹೋಗದಿರಬೇಕು ಎಂದರೆ ಹಲವು ಕ್ರಮಗಳನ್ನು ಆಗಾಗ ಮೊಬೈಲ್‌ ವಿಷಯದಲ್ಲಿ ಕೈಗೊಳ್ಳಬೇಕು. ಅವುಗಳಲ್ಲಿ ಒಂದು ಪ್ರಮುಖ ಕ್ರಮವೆಂದರೆ - ಸ್ಮಾರ್ಟ್‌ಫೋನ್‌ ಬಳಕೆದಾರರು ಆಗಾಗ ಓಎಸ್‌ ಅಪ್‌ಡೇಟ್‌ ಮಾಡುವುದು, ತಾವು ಬಳಸುವ ಎಲ್ಲ ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್‌ ಮಾಡುವುದು ಸಹ ಅತ್ಯಗತ್ಯ. ಅಲ್ಲದೇ ತಮ್ಮ ಡಿವೈಸ್‌ಗಳಿಗೆ ಲಭ್ಯ ಹೊಸ ಫೀಚರ್‌ಗಳನ್ನು ಅಪ್‌ಡೇಟ್‌ ಮಾಡುವುದು ಅಗತ್ಯವಾಗಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಹೊಸ ಅಪ್‌ಡೇಟ್‌ ಎಂದರೆ ಆಪರೇಟಿಂಗ್‌ ಸಿಸ್ಟಮ್‌ ಗೆ ಗೂಗಲ್‌ ಕಂಪನಿಯು ಆಂಡ್ರಾಯ್ಡ್‌ 15 ಬೆಟಾ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ ಸುಲಲಿತ ಬಳಕೆ, ಡಾಟಾ ಸುರಕ್ಷತೆ, ಇಂಟರ್‌ನೆಟ್‌ ವೇಗ, ಇತರೆ ಹಲವು ಕ್ರಮಗಳ ಹಿನ್ನೆಲೆ ಈ ಅಪ್‌ಡೇಟ್‌ ಅನ್ನು ಸದುಪಯೋಗಪಡಿಸಿಕೊಳ್ಳುವುದು ಅಗತ್ಯವಾಗಿದೆ. ಗೂಗಲ್‌ನ ಈ ಆಂಡ್ರಾಯ್ಡ್‌ 15 ಬೆಟಾ ಹಲವು ಹೊಸ ಫೀಚರ್‌ಗಳನ್ನು, ಅಭಿವೃದ್ಧಿಗಳನ್ನು ಆಂಡ್ರಾಯ್ಡ್‌ ಓಎಸ್‌ಗೆ ತಂದಿದೆ. ಅದರಲ್ಲಿ ಪ್ರಮುಖವಾಗಿ ಉತ್ಪಾದಕತೆ, ಗೌಪ್ಯತೆ ಮತ್ತು ಭದ್ರತೆ, ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಅನುಕೂಲವಾಗುವ ಫೀಚರ್‌ಗಳು, ಸಂವಹನಕ್ಕೆ, ಕಾರ್ಯಕ್ಷಮತೆ ಮತ್ತು ಗುಣಮಟ್ಟಕ್ಕೆ, ಹೀಗೆ ಹಲವು ಕ್ರಮಗಳಿಗೆ ಅನುಕೂಲವಾಗುವ ಫೀಚರ್‌ಗಳನ್ನು ಇದರ ಮೂಲಕ ತಂದಿದೆ. ಇನ್ನು ಇತರೆ ಫೀಚರ್‌ಗಳ ಪೈಕಿ ಆಂಡ್ರಾಯ್ಡ್‌ 15 ಬೆಟಾ'ವು ಅಪ್ಲಿಕೇಶನ್‌ಗಳನ್ನು ಆರ್ಕೈವ್ ಮತ್ತು ಅನ್‌ಆರ್ಕೈವ್‌ ಮಾಡಲು ಸಹಾಯ ಮಾಡುತ್ತದೆ, ಇದರಿಂದ ಬಳಕೆದಾರರು ಅತಿ ಸುಲಭವಾಗಿ ಫೋನ್‌ನಲ್ಲಿನ ಶೇಖರಣ ಸಾಮರ್ಥ್ಯ ಹೆಚ್ಚಿಸಬಹುದು. ಅಲ್ಲದೇ ಸಂಪರ್ಕ ಸಂಖ್ಯೆಗಳಿಗೆ ಸಹ ಎಂಡ್‌-ಟು-ಎಂಡ್ ಎಕ್ರಿಪ್ಷನ್, ಇತರೆ ಜನರ ಸಂಪರ್ಕ ಸಂಖ್ಯೆ ಮಾಹಿತಿ ಪರಿಶೀಲಿಸಲು ಸಹ ಇದು ಸಹಾಯ ಮಾಡಲಿದೆ. ಗೂಗಲ್‌ ತನ್ನ ಆಂಡ್ರಾಯ್ಡ್‌ 15 ಬೆಟಾ ವನ್ನು ಅಧಿಕೃತವಾಗಿ ಮೇ 14 ರಂದು ಗೂಗಲ್ I/O ದಲ್ಲಿ ಘೋಷಣೆ ಮಾಡಲಿದೆ. ವಾಟ್ಸಾಪ್‌, ಇನ್‌ಸ್ಟಗ್ರಾಮ್‌ಗೆ ಮೆಟಾ'ದಿಂದ ಎಐ ಫೀಚರ್ಗೂಗಲ್‌ನ ಈ ಲೇಟೆಸ್ಟ್‌ ಅಪ್‌ಡೇಟ್‌ ಅನ್ನು ಯಾವೆಲ್ಲ ಡಿವೈಸ್‌ಗಳು ಪಡೆಯಲಿವೆ, ಹಾಗೂ ಇನ್‌ಸ್ಟಾಲ್‌ ಮಾಡುವುದು ಹೇಗೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ಗೂಗಲ್ ಪ್ರಸ್ತುತ ತಾನು ತಯಾರಿಸಲಾದ ಡಿವೈಸ್‌ಗಳಿಗೆ ಆಂಡ್ರಾಯ್ಡ್‌ 15 ಬೆಟಾ ರೋಲ್‌ ಔಟ್‌ ಮಾಡಿದೆ. ಮುಂದಿನ ದಿನಗಳಲ್ಲಿ ಇತರೆ ಡಿವೈಸ್‌ಗಳಿಗೆ ಈ ಅಪ್‌ಡೇಟ್‌ ಸಿಗಲಿದೆ. ಪ್ರಸ್ತುತ ಯಾವೆಲ್ಲ ಡಿವೈಸ್‌ಗಳಿಗೆ ಈ ಅಪ್‌ಡೇಟ್‌ ಲಭ್ಯ ಎಂಬುದರ ಲಿಸ್ಟ್‌ ಇಲ್ಲಿದೆ ನೋಡಿ. ಗೂಗಲ್ ಪಿಕ್ಸೆಲ್ 6 ಗೂಗಲ್ ಪಿಕ್ಸೆಲ್ 6 ಪ್ರೊ ಗೂಗಲ್ ಪಿಕ್ಸೆಲ್ 7ಗೂಗಲ್ ಪಿಕ್ಸೆಲ್ 7 ಪ್ರೊಗೂಗಲ್ ಪಿಕ್ಸೆಲ್ 8ಗೂಗಲ್ ಪಿಕ್ಸೆಲ್ 8 ಪ್ರೊಗೂಗಲ್ ಪಿಕ್ಸೆಲ್ ಫೋಲ್ಡ್‌ ಗೂಗಲ್ ಪಿಕ್ಸೆಲ್ ಟ್ಯಾಬ್ಲೆಟ್ ಆಂಡ್ರಾಯ್ಡ್‌ 15 ಬೆಟಾ ಡೌನ್‌ಲೋಡ್‌ ಹೇಗೆ ?
  • ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಅಪ್‌ಡೇಟ್‌ ಡೌನ್‌ಲೋಡ್‌ ಮಾಡಲು ಮೊದಲಿಗೆ Android Beta For Pixel Page ವೆಬ್‌ಸೈಟ್‌ https://www.google.com/android/beta ಗೆ ಭೇಟಿ ನೀಡಬೇಕು.
  • ನಿಮ್ಮ ಜಿಮೇಲ್‌ ಮೂಲಕ ಲಾಗಿನ್‌ ಆಗಬೇಕು.
  • ನಿಮ್ಮ ಫೋನ್‌ ಈ ಫೀಚರ್‌ ಸಪೋರ್ಟ್‌ ಮಾಡುತ್ತದೆಯೇ ಎಂದು ತಿಳಿಯಲು ಸದರಿ ಪೇಜ್‌ನಲ್ಲಿರುವ 'View Your Eligible Devices' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಈ ಫೀಚರ್ ಸಪೋರ್ಟ್‌ ಮಾಡಿದಲ್ಲಿ ನಿಮ್ಮ ಡಿವೈಸ್‌ ಹೆಸರು ಬರುತ್ತದೆ. Opt in ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಷರತ್ತು ಮತ್ತು ನಿಯಮಗಳನ್ನು ಓದಿಕೊಂಡು 'Confirm and Enroll' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ನೀವು ಈ ಅಪ್‌ಡೇಟ್‌ಗೆ ಎನ್‌ರೋಲ್‌ ಆಗುತ್ತೀರಿ. ನಂತರ ಆಂಡ್ರಾಯ್ಡ್‌ 15 ಬೆಟಾ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು.
  • ನಿಮ್ಮ ಡಿವೈಸ್‌ನಲ್ಲಿ Settings > System > System Update ಎಂದಿರುವಲ್ಲಿ ಕ್ಲಿಕ್ ಮಾಡಿ. ಲೇಟೆಸ್ಟ್‌ ಓಎಸ್‌ ಅಪ್‌ಡೇಟ್‌ ಡೌನ್‌ಲೋಡ್‌ ಆಗಿ ಇನ್‌ಸ್ಟಾಲ್‌ ಆಗುತ್ತದೆ.
  • READ ON APP