Hero Image

ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡದೆಯೇ ಮೊಬಿಕ್ವಿಕ್'ನಲ್ಲಿ ಹಣ ಪಾವತಿಸಬಹುದು: ಹೇಗೆ ಗೊತ್ತಾ?

ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ದಿನೇ ದಿನೇ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಅದೆಷ್ಟು ವೇಗ ಎಂದರೆ ಡಾಕ್ಟರ್, ಇಂಜಿನಿಯರಿಂಗ್ ಓದಿದ್ರು ಅವರು ಸಹ ಇಂದಿನ ದೈನಂದಿನ ಚಟುವಟಿಕೆಗಳಲ್ಲಿ ಬಳಕೆ ಆಗುತ್ತಿರುವ ತಂತ್ರಜ್ಞಾನಕ್ಕೆ ಅಪ್‌ಡೇಟ್‌ ಆಗಲು ಕಷ್ಟಸಾಧ್ಯವಾಗುತ್ತಿದೆ. ಅದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಎಂದರೆ ಡಾಕ್ಟರ್‌ಗಳು, ಉನ್ನತ ಶಿಕ್ಷಣ ಓದಿರುವವರು ಸಹ ಆನ್‌ಲೈನ್‌ ಸ್ಕ್ಯಾಮ್, ಹಣಕಾಸು ಸ್ಕ್ಯಾಮ್‌ಗಳಿಗೆ ಒಳಗಾಗುತ್ತಿರುವುದು.
ಈ ಕುರಿತು ಸಾಮಾನ್ಯವಾಗಿ ನೀವೆಲ್ಲಾ ನ್ಯೂಸ್‌ ನೋಡೇ ಇರುತ್ತೀರಾ. ಇಂತಹ ಹಣಕಾಸು, ಬ್ಯಾಂಕಿಂಗ್ ಸ್ಕ್ಯಾಮ್‌ಗಳಿಗೆ ತುತ್ತಾಗಬಾರದು ಟೆಕ್‌ ನಾವೀನ್ಯತೆಗೆ ಒಗ್ಗಿಕೊಳ್ಳಬೇಕು. ಹಾಗೂ ಆ ಕ್ಷೇತ್ರದಲ್ಲಾಗುತ್ತಿರುವ ಮೋಸ, ವಂಚನೆಗಳ ವಿಧಾನಗಳನ್ನು ತಿಳಿದು, ಜಾಗ್ರತೆ ವಹಿಸಬೇಕು. ಇನ್ನು ಮೊಬೈಲ್‌ ಮೂಲಕ ಹಲವು ಹಣಕಾಸು ವಹಿವಾಟು ನಡೆಸುವವರು ಅಂದರೆ ನೆಟ್‌ಬ್ಯಾಂಕಿಂಗ್, ಗೂಗಲ್‌ ಪೇ, ಫೋನ್‌ ಪೇ ಬಳಕೆದಾರರು ಇಂದು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ಇವುಗಳ ಬಳಕೆ ಮಾಡಬೇಕಾಗಿದೆ. ಅದಕ್ಕೆ ಪೂರಕವಾಗಿ ಇಂದು ನೆರವಾಗುವಮತಹ ಅತ್ಯಾಧುನಿಕ ಪರಿಹಾರಗಳನ್ನು ಒದಗಿಸಲು ಫಿನ್‌ಟೆಕ್‌ ಕ್ಷೇತ್ರವು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಿದೆ.
ನಿಮಗೆ ಗೊತ್ತಿರದ ಒಂದು ಸಂಗತಿಯೆಂದರೆ ಆರ್‌ಬಿಐ'ನ ಇತ್ತೀಚಿನ ವರದಿ ಪ್ರಕಾರ 2024 ರ ಮೊದಲಾರ್ಧದಲ್ಲಿ ಈಗಾಗಲೇ 14,000 ಕ್ಕಿಂತ ಹೆಚ್ಚಿನ ಬ್ಯಾಂಕಿಂಗ್ ಸಂಬಂಧಿತ ಸ್ಕ್ಯಾಮ್‌ಗಳು ನಡೆದಿರುವುದನ್ನು ಡಾಟಾ ಬಹಿರಂಗಪಡಿಸಿದೆ. ಇಂತಹ ವಂಚನೆಗಳು ಹೆಚ್ಚು ಸೂಕ್ಷ್ಮಗೊಳ್ಳುತ್ತಿದ್ದಂತೆ, ಫಿನ್‌ಟೆಕ್ ಸಂಸ್ಥೆಗಳು ತಮ್ಮ ಬಳಕೆದಾರರ ಭದ್ರತೆ ಹಾಗೂ ವಿಶ್ವಾಸವನ್ನು ಬಲಪಡಿಸಲು ಪರಿಹಾರಗಳನ್ನು ಸಕ್ರಿಯವಾಗಿ ಅನುಷ್ಠಾನಗೊಳಿಸುತ್ತಿವೆ. ಫಿನ್‌ಟೆಕ್ ಸಂಸ್ಥೆಯಾದ ಮೊಬಿಕ್ವಿಕ್(MobiKwik), ಪಾಕೆಟ್ ಯುಪಿಐನೊಂದಿಗೆ ವ್ಯವಹಾರಗಳನ್ನು ಸುರಕ್ಷಿತಗೊಳಿಸಲು ತನ್ನ ಬಳಕೆದಾರರಿಗೆ ನೆರವಾಗುವ ಸಲುವಾಗಿ ತನ್ನ ಯುಪಿಐ ಶಕ್ತಿಯನ್ನು ವರ್ಧಿಸುತ್ತಿದೆ.
ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯೇ?., ಚೆಕ್‌ ಮಾಡಿಕೊಳ್ಳುವ ಸುಲಭ ವಿಧಾನಗಳು ಇಲ್ಲಿವೆ..ಪಾಕೆಟ್ ಯುಪಿಐ ಎಂಬುದು, ಅದರ ಡಿಜಿಟಲ್ ವಾಲೆಟ್‌ನ ಕಾರ್ಯಕ್ಷಮತೆಯನ್ನು ವರ್ಧಿಸುವ ಒಂದು ಶಕ್ತಿಶಾಲಿ ಫೀಚರ್‌ ಆಗಿದೆ. ಪಾಕೆಟ್ ಯುಪಿಐ, ಬಳಕೆದಾರರು ಬ್ಯಾಂಕ್ ಖಾತೆಯನ್ನು ನೇರವಾಗಿ ಲಿಂಕ್‌ ಮಾಡುವ ಅಗತ್ಯವಿಲ್ಲದೆ, ಎಲ್ಲಾ ಆಪರೇಟರುಗಳ QR ಕೋಡ್‌ಗಳು ಮತ್ತು UPI ID ಗಳಾದ್ಯಂತ ಅಡೆತಡೆಯಿಲ್ಲದೆ ಪಾವತಿಗಳನ್ನು ಮಾಡುವುದಕ್ಕೆ ತಮ್ಮ ಮೊಬಿಕ್ವಿಕ್ ವಾಲೆಟ್‌ಅನ್ನು ವರ್ಧಿಸಿಕೊಳ್ಳಲು ನೆರವಾಗುತ್ತದೆ. ಅಂದರೆ ಯುಪಿಐ ಪಾವತಿಗಳನ್ನು ಮಾಡುವಾಗ ಬ್ಯಾಂಕ್ ಖಾತೆಗೆ ಪದೇ ಪದೇ ತೆರೆದುಕೊಳ್ಳುವ ಸಂದರ್ಭವನ್ನು ಕಡಿಮೆ ಮಾಡುವ ಮೂಲಕ ಪಾಕೆಟ್ ಯುಪಿಐ ಭದ್ರತೆಯನ್ನು ಹೆಚ್ಚಿಸುತ್ತದೆ.
ಸಣ್ಣ ಹಾಗೂ ಪದೇ ಪದೇ ಮಾಡುವ ವೆಚ್ಚಗಳನ್ನು ಇದು ಕ್ರೋಢೀಕರಿಸಿ, ಸುಧಾರಿತ ಹಣಕಾಸು ಗೋಚರತೆಗಾಗಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸರಳಗೊಳಿಸುವುದರಿಂದ ಯುಪಿಐ ಪಾವತಿಗಳನ್ನು ಮಾಡಲು ಇದೊಂದು ಸುಲಭವಾದ ಆಯ್ಕೆಯಾಗಿದೆ. ಬ್ಯಾಂಕ್ ಡೌನ್‌ಟೈಮ್ ಇದ್ದಾಗಲೂ ಇದು 24/7 ಪೇಮೆಂಟ್‌ಗೆ ಸಹಕಾರಿಯಾಗಿದೆ. ಹಾಗಿದ್ರೆ ಇಂತಹ ಸೌಲಭ್ಯಗಳು, ಫೀಚರ್‌ಗಳನ್ನು ಹೊಂದಿರುವ ಮೊಬಿಕ್ವಿಕ್ ಪಾಕೆಟ್‌ ಯುಪಿಐ ಬಳಸುವುದು ಹೇಗೆ ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳಿ. ಮೊಬಿಕ್ವಿಕ್ ಇನ್‌ಸ್ಟಾಲ್‌ ಮಾಡಿ ಪಾಕೆಟ್ ಯುಪಿಐ ಪ್ರಾರಂಭಿಸುವುದು ಹೇಗೆ? -ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇಸ್ಟೋರ್‌ಗೆ ಹೋಗಿ.
- 'Mobikwik' ಅಪ್ಲಿಕೇಶನ್‌ ಸರ್ಚ್‌ ಮಾಡಿ, ಇನ್‌ಸ್ಟಾಲ್‌ ಮಾಡಿಕೊಳ್ಳಿ. - ಮೊಬಿಕ್ವಿಕ್ ಆಪ್ ಮೇಲೆ ಸ್ಕ್ರೋಲ್ ಡೌನ್ ಮಾಡಿ, ಪಾಕೆಟ್ ಯುಪಿಐ ಆಯ್ಕೆ ಮಾಡಿಕೊಳ್ಳಿ. - ನಿಮ್ಮ ಪಾಕೆಟ್ ಯುಪಿಐ ಐಡಿ ಸೃಷ್ಟಿಸಲು ನೀವು ಕೆವೈಸಿ (KYC)ಪೂರ್ಣಗೊಳಿಸಬೇಕಾಗುತ್ತದೆ. - ನಿಮ್ಮ ಮೊಬಿಕ್ವಿಕ್ ವಾಲೆಟ್ ಲೋಡ್ ಮಾಡಿಕೊಳ್ಳಿ. - ಅಂದರೆ ಯುಪಿಐ, ಡೆಬಿಟ್ ಕಾರ್ಡುಗಳು, ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸಿ ನೀವು ನಿಮ್ಮ ವಾಲೆಟ್‌ಗೆ ಬ್ಯಾಲೆನ್ಸ್ ಸೇರಿಸಿಕೊಳ್ಳಿ. - ಒಮ್ಮೆ ನಿಮ್ಮ ಮೊಬಿಕ್ವಿಕ್‌ ಆಪ್‌ನಲ್ಲಿ ಬ್ಯಾಲೆನ್ಸ್‌ ಅನ್ನು ಟಾಪ್ ಅಪ್ ಮಾಡಿದ ಮೇಲೆ, ನೀವು ಯಾವುದೇ QR ಕೋಡ್, ಕಾಂಟ್ಯಾಕ್ಟ್ ಮತ್ತು ಯುಪಿಐ ಐಡಿಗೆ ವಾಲೆಟ್ ಮೂಲಕ ಯುಪಿಐ ಪಾವತಿಗಳನ್ನು ಸುಲಭವಾಗಿ ಪ್ರಾರಂಭಿಸಬಹುದು.
CAA Online Registration: ಭಾರತೀಯ ಪೌರತ್ವಕ್ಕಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಲು ಲಿಂಕ್, ವಿಧಾನ ಇಲ್ಲಿದೆ.. ಪಾಕೆಟ್ ಯುಪಿಐ ಬಳಸಿ ಪಾವತಿ ಮಾಡುವುದು ಹೇಗೆ?1. ಸ್ಕ್ಯಾನ್ ಐಕಾನ್ ಮೇಲೆ ಟ್ಯಾಪ್ ಮಾಡಿ. 2. ಸ್ವೀಕರಿಸುವವರ QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಕೆಳಗಿನ ಬಾರ್ ನಲ್ಲಿ ಹೆಸರು/ದೂರವಾಣಿ ಸಂಖ್ಯೆ/ಯುಪಿಐ ಐಡಿ ಬರೆಯಿರಿ. 3. ಬೇಕಾದ ಮೊತ್ತವನ್ನು ಸಂಖ್ಯೆಯಲ್ಲಿ ಟೈಪಿಸಿ.4. ಡ್ರಾಪ್ ಡೌನ್ ಮೆನುವಿನಿಂದ ಪಾಕೆಟ್ ಯುಪಿಐ ಆಯ್ಕೆ ಮಾಡಿಕೊಳ್ಳಿ. 5. ಕನ್ಫರ್ಮ್ ಪೇಮೆಂಟ್ ಮೇಲೆ ಟ್ಯಾಪ್ ಮಾಡಿ. ಒಮ್ಮೆ ಪಾವತಿ ಮಾಡಿದ ಬಳಿಕ, ಮೊಬಿಕ್ವಿಕ್, ನಿಮ್ಮ ವಾಲೆಟ್‌ನಲ್ಲಿರುವ ಉಳಿದ ಬಾಕಿ ಮೊತ್ತದ ಜೊತೆಗೆ ಪಾವತಿ ಖಾತರಿಗಾಗಿ ಪಠ್ಯ ಸಂದೇಶ(ಟೆಕ್ಸ್ಟ್ ಮೆಸೇಜ್) ಮೂಲಕ ನಿಮಗೆ ಒಂದು ಎಚ್ಚರಿಕೆ ಕಳುಹಿಸುತ್ತದೆ.
ಇಂತಹ ಪ್ಯಾಕೆಟ್‌ ಯುಪಿಐ ಬಳಕೆಗಳಿಂದ ಪದೇ ಪದೇ ನಿಮ್ಮ ಬ್ಯಾಂಕ್‌ಖಾತೆಯನ್ನು ಲಿಂಕ್‌ ಮಾಡಿರುವ ಪೇಮೆಂಟ್‌ ಆಪ್‌ಗಳಿಂದ ಆಗಬಹುದಾದ ಸಮಸ್ಯೆಗಳಿಂದ ದೂರ ಉಳಿಯಬಹುದಾಗಿದೆ.

READ ON APP