Hero Image

ಗೋವಾ ಪ್ರವಾಸದಲ್ಲಿದ್ದಾಗ ಈ ಸ್ವಚ್ಛವಾದ ಕಡಲತೀರಗಳನ್ನು ಆಯ್ಕೆ ಮಾಡಿಕೊಳ್ಳಿ!

ಗೋವಾ, ಭಾರತದಲ್ಲಿನ ಸುಂದರ ರಾಜ್ಯಗಳಂತೆ ಒಂದಾಗಿದೆ. ಇಲ್ಲಿ ಸಾಕಷ್ಟು ಬೀಚ್‌ಗಳಿವೆ, ಚರ್ಚ್ಗಗಳು, ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಗೋವಾಗೆ ಭೇಟಿ ನೀಡುವ ಮಂದಿ ಹೆಚ್ಚಾಗಿ ಕಡಲತೀರಗಳಲ್ಲಿ ಕಾಲ ಕಳೆಯಲು ಬಯಸುತ್ತಾರೆ.

ಉತ್ತರ ಗೋವಾದ ಆಕರ್ಷಣೆಗಳು ನಿಮ್ಮ ರಜಾದಿನಗಳನ್ನು ಅನುಭವಿಸಲು ಅತ್ಯಗತ್ಯ ಭಾಗವಾಗಿದೆ. ಗೋವಾದಲ್ಲಿ ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಪ್ರಿಯರಿಗೆ ವಿವಿಧ ಸ್ಥಳಗಳಿವೆ.
ಇಲ್ಲಿ ದೇಶದ ಅಗ್ರ ಬೀಚ್‌ಗಳಿಗೆ ನೆಲೆಯಾಗಿದೆ. ಇವು ಬೀಚ್ ರಜೆಯನ್ನು ಸ್ಮರಣೀಯವಾಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದರೆ ಗೋವಾದ ಸ್ವಚ್ಚವಾದ ಬೀಚ್‌ ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ. PC: Pixabay
ಬಾಗಾ ಬೀಚ್

ಗೋವಾದ ಬಾಗಾ ಬೀಚ್ ಅತ್ಯಂತ ಸ್ವಚ್ಛವಾದ ಬೀಚ್‌ಗಳಲ್ಲಿ ಒಂದಾಗಿದೆ. ಈ ಕಡಲತೀರವು ಸಂದರ್ಶಕರಿಗೆ ಬಹಳಷ್ಟು ಆನಂದಿಸಲು ಅವಕಾಶ ಮಾಡಿಕೊಡುತ್ತದೆ. ಈ ಬಾಗಾ ಬೀಚ್‌ನಲ್ಲಿ ರಾತ್ರಿಯ ಸಮಯದಲ್ಲಿ ಮೋಜು- ಮಸ್ತಿ ಮಾಡಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಬೀಚ್‌ನ ಸುತ್ತಮುತ್ತ ಆಹ್ಲಾದಕರವಾದ ವಾತಾವರಣವನ್ನು ಹೊಂದಿದೆ. ಸ್ವಚ್ಚವಾದ ನೀರಿನಲ್ಲಿ ಕಾಲ ಕಳೆಯಲು ನೀವು ಈ ಗೋವಾ ಬೀಚ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. PC: Pixabay


ವಾಗಟರ್ ಬೀಚ್

ಉತ್ತರ ಗೋವಾದಲ್ಲಿರುವ ವಾಗಟರ್‌ ಬೀಚ್‌ ಅತ್ಯಂತ ಸುಂದರವಾದ ಬೀಚ್‌ಗಳಲ್ಲಿ ಒಂದಾಗಿದೆ. ಇದು ತನ್ನ ಸುಂದರವಾದ ನೋಟದಿಂದ ಜನರನ್ನು ಆಕರ್ಷಿಸುತ್ತಿದೆ.

ಇಡೀ ಕಡಲತೀರವು ಎತ್ತರದ ತಾಳೆ ಮರಗಳಿಂದ ಕೂಡಿದೆ. ವ್ಯಾಗೇಟರ್ ವಿಶೇಷವಾಗಿ ಭಾವೋದ್ರಿಕ್ತ ಟ್ರಾನ್ಸ್ ಪಾರ್ಟಿಗಳಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಈ ಪಾರ್ಟಿಗಳಲ್ಲಿ ಹೆಚ್ಚಾಗಿ ಯುವ ಯುರೋಪಿಯನ್ ಮತ್ತು ಭಾರತೀಯ ಪ್ರಯಾಣಿಕರು ಇಲ್ಲಿ ಸೇರುತ್ತಾರೆ. PC: Pixabay


ಮಾಂಡ್ರೆಮ್ ಬೀಚ್

ಉತ್ತರ ಗೋವಾದಲ್ಲಿರುವ ಈ ಮಾಂಡ್ರೆಮ್‌ ಬೀಚ್ ನಿಜಕ್ಕೂ ಅದ್ಭುತವಾದ ವಾತಾವರಣದಿಂದ ಜನರನ್ನು ಆಕರ್ಷಿಸುತ್ತದೆ.

ಈ ಬೀಚ್ ಗೋವಾದ ಅತ್ಯುತ್ತಮ ರಹಸ್ಯಗಳಲ್ಲಿ ಒಂದಾಗಿದೆ, ತನ್ನ ಬಿಳಿ ಮರಳಿನಿಂದ ಸಮುದ್ರದ ಸೌಂದರ್ಯ ಹೆಚ್ಚಿಸಿದೆ. ಜಲಧಾರೆ ಮತ್ತು ತೊರೆಗಳು ಸಮಾನಾಂತರವಾಗಿ ಸಾಗುತ್ತವೆ. ಇಲ್ಲಿ ನೀವು ಅನೇಕ ರೆಸ್ಟೋರೆಂಟ್‌, ಹೋಟೆಲ್‌ಗಳು, ಥೆರಪಿ ಸೆಂಟರ್‌ಗಳು, ಯೋಗ ಕೇಂದ್ರಗಳು ಇತ್ಯಾದಿಗಳನ್ನು ಕಾಣಬಹುದು. PC: Pixabay


ಡೊನಾ ಪೌಲಾ ಬೀಚ್

ಡೊನಾ ಪೌಲಾ ಬೀಚ್ ಗೋವಾದ ಜನಪ್ರಿಯ ಬೀಚ್‌ಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿದೆ. ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಅತ್ಯಂತ ಜನಪ್ರಿಯ ಸ್ಥಳಗಳಲ್ಲಿ ಇದು ಒಂದಾಗಿದೆ ಮತ್ತು ಈ ಸ್ಥಳವು ಬಿಳಿ ಮರಳಿನ ಶಾಂತಿಯುತ ವಿಸ್ತಾರಕ್ಕೆ ಹೆಸರುವಾಸಿಯಾಗಿದೆ. ನೀವು ಅರಬ್ಬಿ ಸಮುದ್ರ ಮತ್ತು ಜುವಾರಿ ನದಿಯ ನೋಟವನ್ನು ನೋಡಬಹುದು ಮತ್ತು ಮಳೆಗಾಲದಲ್ಲಿ, ಈ ಬೀಚ್ ಪ್ರಣಯ ಜೋಡಿಗಳಿಗೆ ಸುಂದರವಾದ ಅನುಭವ ನೀಡುತ್ತದೆ. PC: Pixabay


ಅಂಜುನಾ ಬೀಚ್

ಅಂಜುನಾ ಕಡಲತೀರವು ಗೋವಾದ ಅತ್ಯಂತ ಅದ್ಭುತವಾದ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ಹೊಂದಿದೆ. ಕಡಲತೀರದ ನೀರು ಸ್ವಚ್ಛವಾಗಿದ್ದು, ಜನರನ್ನು ಜಲಕ್ರೀಡೆಗೆ ಪ್ರೇರೇಪಿಸುತ್ತದೆ. ಅದ್ಭುತವಾದ ಬೀಚ್ ಶಾಕ್‌ಗಳ ವಾತಾವರಣವನ್ನು ಆನಂದಿಸಬಹುದು. PC: Pixabay

READ ON APP