Swipe to read next story
NewsPoint

ಬಿಜೆಪಿಯ 3 ವಿಡಿಯೋ ಜಾಹೀರಾತಿಗೆ ತಡೆ

Send Push
Kannada Dunia Kannada
28th April, 2018 17:13 IST

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಕ್ಕಾಗಿ ಚಿತ್ರೀಕರಿಸಲಾದ ಬಿಜೆಪಿಯ ಮೂರು ವಿಡಿಯೋ ಜಾಹೀರಾತನ್ನು ಬ್ಯಾನ್ ಮಾಡಲಾಗಿದೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದ ಕಾರಣದಿಂದ ವಿಡಿಯೋ ಜಾಹೀರಾತನ್ನು ಪ್ರಸಾರವಾಗದಂತೆ ತಡೆಯಲು ಮೀಡಿಯಾ ಸರ್ಟಿಫಿಕೇಶನ್ ಹಾಗೂ ಮಾನಿಟರಿಂಗ್ ಕಮಿಟಿ ಆದೇಶಿಸಿದೆ. ಕೆಪಿಸಿಸಿ ಪರವಾಗಿ ಎಂಎಲ್ ವಿ.ಎಸ್. ಉಗ್ರಪ್ಪ ಈ ಬಗ್ಗೆ ದೂರು ನೀಡಿದ್ದರು.

ನೀತಿ ಸಂಹಿತೆ ಉಲ್ಲಂಘನೆಯಾದ ಕಾರಣದಿಂದ ಬಿಜೆಪಿಯ ಜನವಿರೋಧಿ ಸರ್ಕಾರ, ವಿಫಲ ಸರ್ಕಾರ, ಮೂರು ಭಾಗ್ಯ ಜಾಹೀರಾತುಗಳನ್ನು ಪ್ರಸಾರವಾಗದಂತೆ ತಡೆಯಲು ಮಾಹಿತಿ ಮತ್ತು ಸಾರ್ವಜನಿಕ ಇಲಾಖೆಯ ಕಮಿಷನರ್ ಹರ್ಷ ಪಿಎಸ್ ಆದೇಶಿಸಿದ್ದಾರೆ.

To get the latest scoop and updates on NewsPoint
Download the app