Swipe to read next story
NewsPoint

ಎಸ್ ಬಿ ಐ ನಿಂದ ಗ್ರಾಹಕರಿಗೆ ಖುಷಿ ಸುದ್ದಿ…!

Send Push
Kannada Dunia Kannada
05th May, 2018 06:42 IST

ಬ್ಯಾಂಕ್ ಗ್ರಾಹಕರಿಗೊಂದು ಸಿಹಿ ಸುದ್ದಿ. ಜೀರೋ ಬ್ಯಾಲೆನ್ಸ್ ನಲ್ಲಿ ಬ್ಯಾಂಕ್ ಖಾತೆ ತೆಗೆಯಬೇಕೆಂಬುವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆಫರ್ ನೀಡಿದೆ. 2018 ಆಗಸ್ಟ್ ಒಳಗೆ ಎಸ್ ಬಿ ಐ ನಲ್ಲಿ ನಿಮ್ಮ ಬ್ಯಾಂಕ್ ಖಾತೆ ತೆರೆದ್ರೆ, ಅದು ಜೀರೋ ಬ್ಯಾಲೆನ್ಸ್ ನ ಖಾತೆ ಆಗಲಿದೆಯಂತೆ.

ಇನ್ನು ದೇಶದ ಅತಿ ದೊಡ್ಡ ಸಾಲದಾತರಾದ ಇನ್ಸ್ಟಾ ಉಳಿತಾಯ ಖಾತೆ ತೆರೆಯಲು ಗ್ರಾಹಕರು ಯಾವುದೇ ಶಾಖೆಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಯಾಕೆಂದ್ರೆ ಎಸ್ ಬಿ ಐ ಇನ್ಸ್ಟಾ ಉಳಿತಾಯ ಖಾತೆಯನ್ನು ಗ್ರಾಹಕರು ತಮ್ಮ ಮನೆಯಲ್ಲೇ ತೆರೆಯಬಹುದಾಗಿದೆ ಎಂದು ಎಸ್ ಬಿ ಐ ತಿಳಿಸಿದೆ. ಇನ್ಸ್ಟಾ ಉಳಿತಾಯ ಖಾತೆಯ ಜೀರೋ ಬ್ಯಾಲೆನ್ಸ್ ಸೀಮಿತ ಅವಧಿಯ ಆಫರ್ ಆಗಿದೆ.

ಎಸ್ ಬಿ ಐ ಜೀರೋ ಬ್ಯಾಲೆನ್ಸ್ – ಇನ್ಸ್ಟಾ ಉಳಿತಾಯ ಖಾತೆಯ 10 ಅಂಶಗಳು ಇಂತಿವೆ.

ಎಸ್ ಬಿ ಐ ನ ಇನ್ಸ್ಟಾ ಉಳಿತಾಯ ಖಾತೆಯನ್ನು ಎಸ್ ಬಿ ಐ ನ YONO app. ಮೂಲಕ ತೆರೆಯಬಹುದಾಗಿದೆ.

ಎಸ್ ಬಿ ಐ ನ ಇನ್ಸ್ಟಾ ಉಳಿತಾಯ ಗ್ರಾಹಕರು ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ಹೀಗಾಗಿ ಇದು ಪೇಪರ್ಲೆಸ್ ಅಕೌಂಟ್ ಆಗಲಿದೆ.

ಯೋನೋ ಆಪ್ ಅಧಿಕೃತ ವೆಬ್ ಸೈಟ್ sbiyono.sbi ನಲ್ಲಿ ಇನ್ಸ್ಟಾ ಉಳಿತಾಯ ಖಾತೆ ತೆರೆದರೆ ತಕ್ಷಣವೇ ಆಕ್ವಿವೆಟ್ ಆಗಲಿದೆ.

ಎಸ್ ಬಿ ಐ ಉಳಿತಾಯ ಖಾತೆ ತೆರೆಯುವ ಗ್ರಾಹಕರು ತಕ್ಷಣವೇ ರುಪೇ ಡೆಬಿಟ್ ಕಾರ್ಡ್ ಪಡೆದುಕೊಳ್ತಾರೆ.

ಎಸ್ ಬಿ ಐ ನ ಇನ್ಸ್ಟಾ ಉಳಿತಾಯ ಖಾತೆಗೆ ಆಗಸ್ಟ್ 2018ರ ವರೆಗೂ ಮಿನಿಮಮ್ ಬ್ಯಾಲೆನ್ಸ್ ಅಗತ್ಯವಿರುವುದಿಲ್ಲ.

ಈ ಇನ್ಸ್ಟಾ ಉಳಿತಾಯ ಖಾತೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ವ್ಯಕ್ತಿ ಮಾತ್ರ ತೆರೆಯಬಹುದಾಗಿದೆ.

ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ಎಸ್ ಬಿ ಐ ನ ಇನ್ಸ್ಟಾ ಉಳಿತಾಯ ಖಾತೆಗೆ ಅರ್ಜಿ ಸಲ್ಲಿಸುತ್ತಿರುವಾಗ, ಬಳಕೆದಾರರು ತಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ನ ವಿವರಗಳನ್ನು ಸಲ್ಲಿಸಬೇಕು.

To get the latest scoop and updates on NewsPoint
Download the app