Swipe to read next story
NewsPoint

ಜಗದೀಶ್ ಶೆಟ್ಟರ್ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತಾ?

Send Push
Kannadanewsnow
24th April, 2018 10:09 IST

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಬಿಜೆಪಿ ಅಭ್ಯರ್ಥಿಯಾಗಿರುವ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ.

ಶೆಟ್ಟರ್ ಅವರ ಚರಾಸ್ತಿಯ ಮೌಲ್ಯ 2,14,601 ರೂ. ಆಗಿದ್ದು, ಪತ್ನಿ ಹೆಸರಿನಲ್ಲಿ ಚರಾಸ್ತಿ ಮೌಲ್ಯ 53 ಲಕ್ಷ ರೂ. ಶೆಟ್ಟರ್ ಕೈಯಲ್ಲಿರುವ ನಗದು 3 ಲಕ್ಷ 51 ಸಾವಿರ ರೂ. ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ನಲ್ಲಿರುವ ಠೇವಣಿ 8, 15,876 ರೂ. ಹುಬ್ಬಳ್ಳಿ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ 1,31,751 ರೂ. ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ 2,50,000 ರೂ. ಒಟ್ಟು 12,21,918 ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದಾರೆ.

ಮಾಜಿ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದ ಪಿ.ಸಿ. ಮೋಹನ್ ಹತ್ತಿರ 42 ಲಕ್ಷ ರೂ. ಸೇರಿದಂತೆ ಒಟ್ಟು ಒಂದೂವರೆ ಕೋಟಿ ಸಾಲ ಮಾಡಿದ್ದಾರೆ.

To get the latest scoop and updates on NewsPoint
Download the app