Swipe to read next story
NewsPoint

ಬಿಗ್ ಬ್ರೇಕಿಂಗ್ : ಕರ್ನಾಟಕದಲ್ಲಿ ಮೊದಲ ಬಾರಿಗೆ ಆನ್ ಲೈನ್ ಮತದಾನಕ್ಕೆ ಅವಕಾಶ

Send Push
Kannadanewsnow
30th April, 2018 13:21 IST

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಆನ್ ಲೈನ್ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಈ ಮೂಲಕ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಹೊಸ ಇತಿಹಾಸಕ್ಕೆ ನಾಂದಿಯಾಗಲಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ  ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಈ ವಿಷಯ ತಿಳಿಸಿದ್ದಾರೆ.

ಇದೇ ವೇಳೆ ಅವರು ಮಾತನಾಡುತ್ತ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮತದಾರರು ಈ ಪ್ರಯೋಜನ ಪಡೆಯಬಹುದಾಗಿದೆ ಅಂತ ತಿಳಿಸಿದ್ದು, ಸೈನಿಕರು ತಮ್ಮ ವಿಧಾನಸಭಾ ಕ್ಷೇತ್ರದ ಮಾಹಿತಿಯಗಳನ್ನು ಆನ್ ಲೈನ್ ನಲ್ಲಿ ಅಭ್ಯರ್ಥಿಗಳು ಪಟ್ಟಿ ಪಡೆದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಅಂತ ತಿಳಿಸಿದ್ದಾರೆ.

ಇನ್ನು ಮತದಾನದ ಪ್ರಮಾಣ ಹಾಗೂ ಸಮಯ ಉಳಿತಾಯದ ಉದ್ದೇಶದಿಂದ ಈ ಆನ್ ಲೈನ್ ಮತದಾನಕ್ಕೆ ಅವಕಾಶ ನೀಡಲಾಗಿದೆ ಅಂತ ತಿಳಿಸಿದ್ದಾರೆ.

To get the latest scoop and updates on NewsPoint
Download the app