Swipe to read next story
NewsPoint

ಉತ್ತಮ ಪ್ರಜಾಕೀಯ ಪಾರ್ಟಿ : ಉಪೇಂದ್ರರಿಂದ ಹೊಸ ಪಕ್ಷ ಸ್ಥಾಪನೆ

Send Push
Kannadanewsnow
25th April, 2018 13:53 IST

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿದ್ದಾರೆ.

ಉತ್ತಮ ಪ್ರಜಾಕೀಯ ಎಂಬ ಹೊಸ ಪಕ್ಷ ಹುಟ್ಟುಹಾಕುತ್ತಿದ್ದು, ಅದರ ನೊಂದಣಿ ಕಾರ್ಯ ನಡೆಯುತ್ತಿದೆ ಎಂದು ಉಪ್ಪಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಕೆಪಿಜೆಪಿ ಪಕ್ಷವನ್ನು ಹುಟ್ಟು ಹಾಕಿದ್ದರು.ಆದರೆ ಪಕ್ಷದಲ್ಲಿ ಕೆಲವು ಆಂತರಿಕ ಸಮಸ್ಯೆ ಹಿನ್ನೆಲೆಯಲ್ಲಿ ಪಕ್ಷದಿಂದ ದೂರ ಸರಿದಿದ್ದರು. ಕೆಪಿಜೆಪಿಯಲ್ಲಿ ಕೆಲವು ಮುಖಂಡರ ಜೊತೆ ಭಿನ್ನಾಭಿಪ್ರಾಯವಿತ್ತು. ಅಲ್ಲಿಯೇ ಇದ್ದರೆ ಪಕ್ಷ ಹೋಳಾಗಿ ಹೋಗುತ್ತಿತ್ತು. ಅದು ನನಗೆ ಇಷ್ಟವಿರಲಿಲ್ಲ. ಅಲ್ಲಿಂದ ಹೊರಬಂದು ಹೊಸ ಪಕ್ಷ ಕಟ್ಟಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.

To get the latest scoop and updates on NewsPoint
Download the app