Swipe to read next story
NewsPoint

ಸ್ಯಾಂಡಲ್ ವುಡ್ ನಟಿ ಮಯೂರಿ ಮಾಜಿ ಮುಖ್ಯಮಂತ್ರಿಗಳ ಮಗಳಂತೆ!

Send Push
Kannadanewsnow
18th April, 2018 21:06 IST

ಸಿನಿಮಾ ಡೆಸ್ಕ್ : ಕನ್ನಡದ ‘ಕೃಷ್ಣ ಲೀಲಾ’ ಚಿತ್ರದ ನಾಯಕಿ ಮಯೂರಿ ಮಾಜಿ ಮುಖ್ಯಮಂತ್ರಿಗಳ ಮಗಳಂತೆ. ಅಯ್ಯೋ ಇದೇನಿದು ಹೊಸ ವಿಚಾರ ಅಂತಾ ಶಾಕ್ ಆದ್ರಾ..ಹಾಗೇನಿಲ್ಲ ಇದು ರಿಯಲ್ ಅಲ್ಲಾ ರೀಲ್.

ನಟಿ ಮಯೂರಿ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅವರು ಮುಖ್ಯಮಂತ್ರಿಯ ಮಗಳ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಯೆಸ್, ಸಿಗ್ನೇಚರ್ ಎಂಬ ಹೊಸ ಸಿನಿಮಾದಲ್ಲಿ ನಟಿ ಮಯೂರಿ ನಟಿಸುತ್ತಿದ್ದು, ರಂಜಿತ್ ಕುಳಾಯಿ ಎಂಬ ಹೊಸ ಪ್ರತಿಭೆ ಮಯೂರಿಗೆ ನಾಯಕನಾಗಿ ನಟಿಸುತ್ತಿದ್ದಾರೆ.

ಅಂದಹಾಗೆ ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಶುರು ಆಗಿದೆ.ಇನ್ನೂ ನಟಿ ಮಯೂರಿ ವಿನಯ್ ಅವರ ನನ್ನ ಪ್ರಕಾರ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ .  ಜೊತೆಗೆ ಶಿವರಾಜ್ ಕುಮಾರ್ ನಟನೆಯ ‘ಕವಚ’ ಸಿನಿಮಾದಲ್ಲಿ ಕೂಡ ನಟಿ ಮಯೂರಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

To get the latest scoop and updates on NewsPoint
Download the app