Swipe to read next story
NewsPoint

ಮೇ 8 ರಂದು ಸೋನಮ್ ಕಪೂರ್-ಅಹುಜಾ ಮದುವೆ

Send Push
Kannadanewsnow
02nd May, 2018 18:16 IST

ಸಿನಿಮಾಡೆಸ್ಕ್ : ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಮದುವೆಯ ದಿನಾಂಕ ಫಿಕ್ಸ್ ಆಗಿದ್ದು, ಮೇ. 8 ರಂದು ಮದುವೆ ನಡೆಯಲಿದೆ ಎಂದು ಕಪೂರ್ ಕುಟುಂಬ ಪ್ರಕಟಿಸಿದೆ.

ಈಗಾಗಲೇ ಮದುವೆಗೆ ಸಿದ್ದತೆ ನಡೆಸಲಾಗುತ್ತಿದ್ದು, ಮುಂಬೈನಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಹಲವು ವರ್ಷಗಳ ಗೆಳೆಯ ಆನಂದ್ ಅಹುಜಾ ಅವರನ್ನು ಸೋನಮ್ ಕಪೂರ್ ವರಿಸಲಿದ್ದಾರೆ. ಕುಟುಂಬದ ಆಪ್ತರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಸ

ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯ ನಡೆಯಲಿದ್ದು, ಸರಳವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಕಪೂರ್ ಕುಟುಂಬದ ಮೂಲಗಳು ತಿಳಿಸಿವೆ.

To get the latest scoop and updates on NewsPoint
Download the app