Swipe to read next story
NewsPoint

ಗೂಗಲ್ ವಿರುದ್ಧ ರಮ್ಯಾ ಕೆಂಡಾಮಂಡಲ….! ಕಾರಣ ಏನ್ ಗೊತ್ತಾ?

Send Push
The New Indian Times Kannada
26th April, 2018 11:09 IST

ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ , ಮಾಜಿ ಸಂಸದೆ, ನಟಿ ರಮ್ಯಾ ಗೂಗಲ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ…! ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ….!

ಅಯ್ಯೋ ರಾಮ ರಮ್ಯಾ ಗೂಗಲ್ ವಿರುದ್ಧ ಕಿಡಿಕಾರಲು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಏನ್ ಸಂಬಂಧ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹದು?‌ ಸಂಬಂಧವಿದೆ..!


ರಮ್ಯಾ ಗೂಗಲ್ ನಲ್ಲಿ ‘India first pm’ (ಭಾರತದ ಮೊದಲ ಪ್ರಧಾನಿ) ಎಂದು ಟೈಪ್ ಮಾಡಿ ಹುಡುಕಿದ್ದಾರೆ. ಆಗ ಜವಹಾರ್ ಲಾಲ್ ನೆಹರೂ ಹೆಸರು ಬಂದಿದೆಯಾದರೂ ಫೋಟೋ ಮಾತ್ರ ನರೇಂದ್ರ ಮೋದಿ ಅವರದ್ದು ಕಾಣಿಸಿಕೊಂಡಿದೆ.
ಇದರ ಸ್ಕ್ರೀನ್ ಶಾಟ್ ತೆಗೆದು ಗೂಗಲ್ ಇಂಡಿಯಾಗೆ ಟ್ವೀಟ್ ನಲ್ಲಿ ಟ್ಯಾಗ್ ಮಾಡಿ , ನಿಮ್ಮ ಕ್ರಮಾವಳಿಯಿಂದಾಗಿ ಹೀಗಾಗಿದೆ. ನಿಮ್ಮ ಸಂಗ್ರಹದಲ್ಲಿ ಬರೀ ಕಸಕಡ್ಡಿ ತುಂಬಿದೆ’ ಎಂದು ರಮ್ಯಾ ಸಿಟ್ಟಾಗಿದ್ದಾರೆ…!
ರಮ್ಯಾ ಅವರ ಈ ಟ್ವೀಟ್ ವೈರಲ್ ಆಗಿದ್ದು ಪರ ವಿರೋಧ ಚರ್ಚೆ ಆಗುತ್ತಿದೆ.

To get the latest scoop and updates on NewsPoint
Download the app