Swipe to read next story
NewsPoint

ಕೈಕಾಲು ಹಿಡಿದಾದರೂ ಜನರನ್ನು ಮತಗಟ್ಟೆಗೆ ಕರೆತನ್ನಿ: ಯಡಿಯೂರಪ್ಪ

Send Push
Vijay Karnataka
05th May, 2018 18:54 IST

ಹೊಸದಿಲ್ಲಿ: ಸುಮ್ಮನೆ ಇರಬೇಡಿ.. ಯಾರೆಲ್ಲ ಮತದಾನ ಮಾಡದೇ ಮನೆಯಲ್ಲಿ ಇರುತ್ತಾರೋ, ಅವರನ್ನು ಕೈ ಕಾಲು ಕಟ್ಟಿಯಾದರೂ ಮತಗಟ್ಟೆಗೆ ಕರೆತನ್ನಿ..ವೋಟ್‌ ಹಾಕಿಸಿ. ಹೀಗೆಂದು ಕಾರ್ಯಕರ್ತರನ್ನು ಒತ್ತಾಯಿಸಿದ್ದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ. ಎಸ್‌. ಯಡಿಯೂರಪ್ಪ.

ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್‌ ಬಸವಂತ್ರೈ ದೊಡ್ಡಗೌಡರ್ ಪರ ಮತಯಾಚಿಸುವ ಸಂದರ್ಭ ಮಾತನಾಡಿದ ಯಡಿಯೂರಪ್ಪ ಮತದಾನ ಮಾಡದೇ ಮನೆಯಲ್ಲಿ ಇರುವವರನ್ನು ಮತಗಟ್ಟೆಗೆ ಕರೆತರಬೇಕೆನ್ನುವ ಆವೇಶದ ಭರದಲ್ಲಿ ಕೈ-ಕಾಲು ಕಟ್ಟಿಯಾದರೂ ಮತಗಟ್ಟೆಗೆ ಕರೆತನ್ನಿ ಎಂದಿದ್ದಾರೆ.


ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮತದಾರರಿಗೆ ಬಿಜೆಪಿ ಬೆದರಿಕೆ ಒಡ್ಡುತ್ತಿದೆ ಎಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣ್‌ದೀಪ್‌ ಸುರ್ಜೆವಾಲ, ಬಿಜೆಪಿ ಮತದಾರರಿಗೆ ಬೆದರಿಕೆ ಒಡ್ಡುತ್ತಿದೆ. ಯಡಿಯೂರಪ್ಪ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

To get the latest scoop and updates on NewsPoint
Download the app