Swipe to read next story
NewsPoint

ಸಚಿವ ಅನಂತ ಕುಮಾರ್ ಹೆಗಡೆ ಪ್ರಾಣಾಪಾಯದಿಂದ ಪಾರು: ನಕ್ಸಲರಿಂದ ಕೊಲೆ ಯತ್ನ ಆರೋಪ

Send Push
Vijay Karnataka
18th April, 2018 07:30 IST

ಬೆಂಗಳೂರು: ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮ ವಿರುದ್ಧ ನಡೆದ ಕೊಲೆ ಪ್ರಯತ್ನವಿದು ಎಂದು ಸಚಿವರು ಆರೋಪಿಸಿದ್ದಾರೆ.

ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಸಮೀಪ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಟ್ರಕ್ ಒಂದು ವೇಗವಾಗಿ ನುಗ್ಗಿ ಬಂದು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು. ನಮ್ಮ ಕಾರು ವೇಗವಾಗಿದ್ದರಿಂದ ಅದೃಷ್ಟವಶಾತ್‌ ಪಾರಾದೆ. ಇದೊಂದು ಉದ್ದೇಶಿತ ಅಪಘಾತ ಪ್ರಯತ್ನ ಎಂದು ಅನಂತ್ ಕುಮಾರ್ ಹೆಗಡೆ ಆರೋಪಿಸಿ ಅನಂತ ಕುಮಾರ್‌ ಅಪಘಾತದ ವೀಡಿಯೋ ಮತ್ತು ಫೋಟೋಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.ಟ್ರಕ್‌ ಚಾಲಕನನ್ನು ಬಂಧಿಸಲಾಗಿದ್ದು, ನಾಸಿರ್‌ ಎಂದು ಗುರುತಿಸಲಾಗಿದೆ. ಈತನ ಭಾವಚಿತ್ರವನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಪಘಾತವಾದ ಬಗೆ ನೋಡಿದರೆ ಆಕಸ್ಮಿಕ ಎಂದು ತೋರುತ್ತಿಲ್ಲ. ಕೊಲೆ ಉದ್ದೇಶದಿಂದಲೇ ಅಪಘಾತ ಎಸಗಲಾಗಿದೆ. ಕುಡಿದು ಅಪಘಾತ ಎಸಗಿದ್ದಾನೆ ಎನ್ನಲು ಟ್ರಕ್‌ ಚಾಲಕ ಮದ್ಯ ಸೇವಿಸಿರಲಿಲ್ಲ ಎಂದು ಅನಂತ ಕುಮಾರ್‌ ಹೇಳಿದ್ದಾರೆ.

To get the latest scoop and updates on NewsPoint
Download the app