ಸೆಪ್ಟೆಂಬರಲ್ಲಿ 1.89 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ: 9% ಹೆಚ್ಚಳ

Hero Image
Newspoint

ನವದೆಹಲಿ: ಸೆಪ್ಟೆಂಬರ್ ತಿಂಗಳಿನಲ್ಲಿ 1.89 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದು, ಕಳೆದ ವರ್ಷದ ಸೆಪ್ಟೆಂಬರ್ಗೆ ಹೋಲಿಸಿದರೆ ಶೇ.9ರಷ್ಟು ಹೆಚ್ಚಳವಾಗಿದೆ.

2024ರ ಸೆಪ್ಟೆಂಬರ್ನಲ್ಲಿ 1.73 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಅಂದರೆ, ಸಂಗ್ರಹ ಪ್ರಮಾಣದಲ್ಲಿ ಶೇ.1.5ರಷ್ಟು  ಹೆಚ್ಚಾಗಿದೆ. ಜಿಎಸ್ಟಿ 2.0 ಸುಧಾರಣೆ ಜಾರಿ ಬಳಿಕವೂ ಈ ಗಣನೀಯ ಸಾಧನೆಯನ್ನು ಮಾಡಲಾಗಿದೆ.

2024ರ ಸೆಪ್ಟೆಂಬರ್ನಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು 1.73 ಲಕ್ಷ ಕೋಟಿ ರೂ. ಇತ್ತು. ಕಳೆದ ಆಗಸ್ಟ್ನಲ್ಲಿ 1.86 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.